ದೆಹಲಿಯಲ್ಲಿ ಬಿಎಸ್ ಯಡಿಯೂರಪ್ಪ ಆಡಿದ ಮಾತು ಕೇಳಿದರೆ ಬಿಜೆಪಿ-ಜೆಡಿಎಸ್ ಮೈತ್ರಿ ಕೇವಲ ಗಿಮಿಕ್ ಅನಿಸುತ್ತದೆ!

|

Updated on: Sep 13, 2023 | 6:55 PM

ರಾಜ್ಯದಲ್ಲಿ ಜೆಡಿಎಸ್ ಜೊತೆ ಮೈತ್ರಿಯ ಬಗ್ಗೆ ಮಾತು ಶುರುಮಾಡಿದ್ದೇ ಯಡಿಯೂರಪ್ಪ. ಅವರು ಆ ಬಗ್ಗೆ ಪ್ರಸ್ತಾಪ ಮಾಡದೇ ಹೋದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರಿಗೆ ಮೈತ್ರಿ ವಿಷಯ ಹೇಗೆ ಗೊತ್ತಾಗಬೇಕು? ಗಮನಿಸಬೇಕಾದ ಮತ್ತೊಂದು ಅಂಶವೆಂದರೆ, ಚಂದ್ರಯಾನ-3 ಯಶಸ್ಸಿನ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಬೆಂಗಳೂರಿಗೆ ಬಂದಾಗ ರಾಜ್ಯ ಬಿಜೆಪಿ ನಾಯಕರನ್ನು ಭೇಟಿಯಾಗಲು ಇಷ್ಟಪಡಲಿಲ್ಲ

ದೆಹಲಿ: ರಾಷ್ಟ್ರದ ರಾಜಧಾನಿ ತಲುಪಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಹಿರಿಯ ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ (BS Yediyurappa) ಲೋಕಸಭಾ ಚುನಾವಣೆಗಾಗಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ವಿಷಯಕ್ಕೆ ಸಂಬಂಧಿಸಿದಂತೆ ತಾನು ಪಕ್ಷದ ವರಿಷ್ಠರ ಮುಂದೆ ಪ್ರಸ್ತಾಪವೇನೂ ಮಾಡಲ್ಲ ಅವರಾಗೇ ಕೇಳಿದರೆ ಹೇಳುತ್ತೇನೆ ಎಂದರು. ಇವರ ಮಾತುಗಳನ್ನು ಕೇಳಿದರೆ ಜೆಡಿಎಸ್-ಬಿಜೆಪಿ ಮೈತ್ರಿ ಕೇವಲ ಒಂದು ಗಿಮಿಕ್ಕಾ ಅನಿಸದಿರದು ಮಾರಾಯ್ರೇ. ಯಾಕೆ ಗೊತ್ತಾ? ರಾಜ್ಯದಲ್ಲಿ ಜೆಡಿಎಸ್ ಜೊತೆ ಮೈತ್ರಿಯ ಬಗ್ಗೆ ಮಾತು ಶುರುಮಾಡಿದ್ದೇ ಯಡಿಯೂರಪ್ಪ. ಅವರು ಆ ಬಗ್ಗೆ ಪ್ರಸ್ತಾಪ ಮಾಡದೇ ಹೋದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಮತ್ತು ಅಮಿತ್ ಶಾ (Amit Shah) ಅವರಿಗೆ ಮೈತ್ರಿ ವಿಷಯ ಹೇಗೆ ಗೊತ್ತಾಗಬೇಕು? ಗಮನಿಸಬೇಕಾದ ಮತ್ತೊಂದು ಅಂಶವೆಂದರೆ, ಚಂದ್ರಯಾನ-3 ಯಶಸ್ಸಿನ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಬೆಂಗಳೂರಿಗೆ ಬಂದಾಗ ರಾಜ್ಯ ಬಿಜೆಪಿ ನಾಯಕರನ್ನು ಭೇಟಿಯಾಗಲು ಇಷ್ಟಪಡಲಿಲ್ಲ. ವರಿಷ್ಠರ ದೃಷ್ಟಿಯಲ್ಲಿ ರಾಜ್ಯ ಬಿಜೆಪಿ ನಾಯಕರ ಇಮೇಜ್ ಹೇಗಿದೆ ಅನ್ನೋದು ಇದರಿಂದ ಗೊತ್ತಾಗುತ್ತದೆ. ವಿರೋಧ ಪಕ್ಷದ ನಾಯಕ ಹಾಗೂ ರಾಜ್ಯ ಬಿಜೆಪಿ ಘಟಕಕ್ಕೆ ಬಿವೈ ವಿಜಯೇಂದ್ರ ಹೆಸರು ಪ್ರಸ್ತಾಪ ಮಾಡ್ತೀರಾ ಅಂತ ಕೇಳಿದರೆ ಅದಕ್ಕೂ ಯಡಿಯೂರಪ್ಪರಿಂದ ಸ್ಪಷ್ಟ ಉತ್ತರವಿಲ್ಲ, ಯಾರ ಹೆಸರನ್ನೂ ಶಿಫಾರಸ್ಸು ಮಾಡಲ್ಲ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ