BSY Secluded: ಪ್ರತಿಮೆ ಅನಾವರಣ ಸಮಾರಂಭಕ್ಕೆ ಬಿಎಸ್ ಯಡಿಯೂರಪ್ಪ ಒಬ್ಬಂಟಿಯಾಗಿ ಬಂದಿದ್ದನ್ನು ಬಹಳಷ್ಟು ಜನ ಗಮನಿಸಲಿಲ್ಲ
ಯಾವಾಗ ಯಡಿಯೂರಪ್ಪ ಚುನಾವಣಾ ರಾಜಕೀಯಕ್ಕೆ ವಿದಾಯ ಹೇಳಿದರೋ ಬಿಜೆಪಿಯ ನಾಯಕರು ಕಡೆಗಣಿಸಲಾರಂಭಿಸಿದ್ದಾರೆ. 80 ರ ಪ್ರಾಯದ ಮುತ್ಸದ್ದಿ ಈ ಬೆಳವಣಿಗೆಯನ್ನು ಸ್ಪೋರ್ಟ್ ಆಗಿ ಸ್ವೀಕರಿಸಿದ್ದಾರೆ.
ಬೆಂಗಳೂರು: ರವಿವಾರದಂದು ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ವಿಧಾನಸೌಧದ ಮುಂಭಾಗದಲ್ಲಿ ಜಗಜ್ಯೋತಿ ಬಸವೇಶ್ವರ (Jagajyoti Basaveshwara) ಮತ್ತು ನಾಡಪ್ರಭು ಕೆಂಪೇಗೌಡರ (Nadaprabhu Kempegowda) ಪ್ರತಿಮೆ ಅನಾವರಣ ಮಾಡಿದ್ದನ್ನು ನಾವು ವರದಿ ಮಾಡಿದ್ದೇವೆ. ಆದರೆ ಈ ಸಂಗತಿ ಮಿಸ್ ಆಗಿತ್ತು. ವಿಷಯವೇನೆಂದರೆ, ಪ್ರತಿಮೆ ಅನಾವರಣ ಸಮಾರಂಭಕ್ಕೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು (BS Yediyurappa) ಒಬ್ಬಂಟಿಯಾಗಿ ಅಗಮಿಸಿದರು. ಕೇವಲ ಒಂದೆರಡು ತಿಂಗಳ ಹಿಂದೆ ಅವರ ಜೊತೆ ಬಸವರಾಜ ಬೊಮ್ಮಾಯಿ ಸಂಪುಟದ ಸಚಿವರ ಮತ್ತು ಶಾಸಕರ ದಂಡಿರುತ್ತಿತ್ತು. ಯಾವಾಗ ಅವರು ಚುನಾವಣಾ ರಾಜಕೀಯಕ್ಕೆ ವಿದಾಯ ಹೇಳಿದರೋ ಬಿಜೆಪಿಯ ನಾಯಕರು ಕಡೆಗಣಿಸಲಾರಂಭಿಸಿದ್ದಾರೆ. 80 ರ ಪ್ರಾಯದ ಮುತ್ಸದ್ದಿ ಈ ಬೆಳವಣಿಗೆಯನ್ನು ಸ್ಪೋರ್ಟ್ ಆಗಿ ಸ್ವೀಕರಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ