ಜಮ್ಮುವಿನಲ್ಲಿ ಪಾಕಿಸ್ತಾನದಿಂದ ಶೆಲ್ ದಾಳಿ; ಬಿಎಸ್​ಎಫ್ ಯೋಧ ಸಾವು, 7 ಸೈನಿಕರಿಗೆ ಗಾಯ

Updated on: May 10, 2025 | 10:07 PM

ನಂಬಿಸಿ ಕುತ್ತಿಗೆ ಕೊಯ್ಯಲು ಪ್ರಯತ್ನಿಸಿದ ಪಾಕಿಸ್ತಾನದ ಡ್ರೋನ್ ದಾಳಿಯನ್ನು ತಡೆಯಲು ಭಾರತ ಸೇನೆ ಪ್ರಯತ್ನಿಸಿದೆ. ಆದರೆ, ಜಮ್ಮುವಿನ ಆರ್​ಎಸ್​ ಪುರದಲ್ಲಿ ನಡೆದ ಶೆಲ್ ದಾಳಿಯಲ್ಲಿ ಬಿಎಸ್​ಎಫ್ ಎಸ್​ಐ ಎಂಡಿ ಇಮ್ತಿಯಾಜ್ ಪ್ರಾಣ ಕಳೆದುಕೊಂಡಿದ್ದಾರೆ, ಇನ್ನೂ 7 ಸೈನಿಕರಿಗೆ ಗಾಯಗಳಾಗಿವೆ. ಅನಿರೀಕ್ಷಿತವಾಗಿ ಪಾಕಿಸ್ತಾನ ಈ ದಾಳಿ ನಡೆಸಿದ್ದರಿಂದ ಭಾರತ ಎಚ್ಚೆತ್ತುಕೊಳ್ಳುವಷ್ಟರಲ್ಲಿ ಕೆಲವೆಡೆ ದಾಳಿಗಳು ನಡೆದಿವೆ. ಈ ಮೂಲಕ ಪಾಕಿಸ್ತಾನ ಯಾವುದೇ ಕಾರಣಕ್ಕೂ ನಂಬಿಕೆಗೆ ಅರ್ಹವಾದ ದೇಶವಲ್ಲ ಎಂಬುದನ್ನು ಆ ದೇಶವೇ ಸಾಬೀತುಪಡಿಸಿಕೊಂಡಿದೆ.

ಶ್ರೀನಗರ, ಮೇ 10: ಪಾಕಿಸ್ತಾನ ನಂಬಿಸಿ ಬೆನ್ನ ಹಿಂದೆ ಚೂರಿ ಹಾಕುವ ಬುದ್ಧಿಯನ್ನು ಮತ್ತೆ ಪ್ರದರ್ಶಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಬಳಿ ಬೇಡಿಕೊಂಡು ಭಾರತವನ್ನು ಕದನವಿರಾಮಕ್ಕೆ ಒಪ್ಪಿಸಿದ್ದ ಪಾಕಿಸ್ತಾನ ಭಾರತ ಕದನವಿರಾಮಕ್ಕೆ ಒಪ್ಪಿಕೊಂಡು ಸಂಜೆ 5 ಗಂಟೆಯಿಂದಲೇ ಗಡಿಯಲ್ಲಿ ಸಹಜಸ್ಥಿತಿ ನಿರ್ಮಾಣ ಮಾಡುವುದಾಗಿ ಘೋಷಿಸಿದ ಕೂಡಲೆ ಕಂತ್ರಿಯಂತೆ ಭಾರತದೊಳಗೆ ನುಗ್ಗಿ ಡ್ರೋನ್ ಹಾಗೂ ಶೆಲ್ ದಾಳಿ ನಡೆಸಿದೆ. ನಂಬಿಸಿ ಕುತ್ತಿಗೆ ಕೊಯ್ಯಲು ಪ್ರಯತ್ನಿಸಿದ ಪಾಕಿಸ್ತಾನದ ಡ್ರೋನ್ ದಾಳಿಯನ್ನು ತಡೆಯಲು ಭಾರತ ಸೇನೆ ಪ್ರಯತ್ನಿಸಿದೆ. ಆದರೆ, ಜಮ್ಮುವಿನ ಆರ್​ಎಸ್​ ಪುರದಲ್ಲಿ ನಡೆದ ಶೆಲ್ ದಾಳಿಯಲ್ಲಿ ಬಿಎಸ್​ಎಫ್ ಎಸ್​ಐ ಎಂಡಿ ಇಮ್ತಿಯಾಜ್ ಪ್ರಾಣ ಕಳೆದುಕೊಂಡಿದ್ದಾರೆ, ಇನ್ನೂ 7 ಸೈನಿಕರಿಗೆ ಗಾಯಗಳಾಗಿವೆ. ಅನಿರೀಕ್ಷಿತವಾಗಿ ಪಾಕಿಸ್ತಾನ ಈ ದಾಳಿ ನಡೆಸಿದ್ದರಿಂದ ಭಾರತ ಎಚ್ಚೆತ್ತುಕೊಳ್ಳುವಷ್ಟರಲ್ಲಿ ಕೆಲವೆಡೆ ದಾಳಿಗಳು ನಡೆದಿವೆ. ಈ ಮೂಲಕ ಪಾಕಿಸ್ತಾನ ಯಾವುದೇ ಕಾರಣಕ್ಕೂ ನಂಬಿಕೆಗೆ ಅರ್ಹವಾದ ದೇಶವಲ್ಲ ಎಂಬುದನ್ನು ಆ ದೇಶವೇ ಸಾಬೀತುಪಡಿಸಿಕೊಂಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us
ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More