ಬೈಕ್ ಶೋರೂಂಗೆ ನುಗ್ಗಿ ಯುವಕನಿಗೆ ತಿವಿದ ಗೂಳಿ; ಶಾಕಿಂಗ್ ವಿಡಿಯೋ ವೈರಲ್

Updated on: Nov 13, 2024 | 3:13 PM

ಬೈಕ್ ಶೋರೂಮ್‌ಗೆ ಪ್ರವೇಶಿಸಿ, ಯುವಕನ ಮೇಲೆ ಉಗ್ರವಾಗಿ ದಾಳಿ ನಡೆಸಿದ ಗೂಳಿಯ ವಿಡಿಯೋ ವೈರಲ್ ಆಗಿದೆ. ಗೂಳಿ ದಾಳಿ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ದಾಳಿಯಿಂದ ಅನೇಕ ಬೈಕ್​ಗಳಿಗೂ ಹಾನಿಯಾಗಿದೆ.

ಬೈಕ್ ಶೋರೂಂನಲ್ಲಿ ಜನರು ಇದ್ದಾಗಲೇ ಗೂಳಿಯೊಂದು ನುಗ್ಗಿ ಅಲ್ಲಿದ್ದ ಯುವಕನ ಮೇಲೆ ದಾಳಿ ನಡೆಸಿದೆ. ಈ ದೃಶ್ಯ ಶೋರೂಂನಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೈಕ್ ಶೋರೂಂನಲ್ಲಿ ನಿರಾಳವಾಗಿ ನಿಂತಿದ್ದ ಕೆಂಪು ಟೀ ಶರ್ಟ್ ತೊಟ್ಟಿದ್ದ ಯುವಕನನ್ನು ಗೂಳಿಯೊಂದು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿರುವ ದೃಶ್ಯ ವಿಡಿಯೋದಲ್ಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More