ಹೋರಿ ಜನ್ಮ ದಿನ ಆಚರಣೆ!
ಅಲ್ಲಿ ಅನ್ನದಾತನಿಗೆ ಬರ್ತ್ ಡೇ ಸಂಭ್ರಮ. ಬರ್ತ್ ಡೇಗಾಗಿ ಅನ್ನದಾತನನ್ನ ಭರ್ಜರಿಯಾಗಿ ಅಲಂಕಾರ ಮಾಡಲಾಗಿತ್ತು. ಮದುವೆ ಮನೆಯನ್ನೂ ಮೀರಿಸುವಂತೆ ಅನ್ನದಾತನ ಮನೆ ಮುಂದೆ ಸಂಭ್ರಮ ಮನೆ ಮಾಡಿತ್ತು. ಸಾಕಷ್ಟು ಸಂಖ್ಯೆಯಲ್ಲಿದ್ದ ಅಭಿಮಾನಿಗಳಂತೂ ಭಾಜಾ ಭಜಂತ್ರಿಗಳ ಸದ್ದಿಗೆ ಭರ್ಜರಿ ಸ್ಟೆಪ್ ಹಾಕ್ತಿದ್ರು. ಇಪ್ಪತ್ತೈದು ಕೆ.ಜಿ ತೂಕದ ಕೇಕ್ ಕತ್ತರಿಸಿ ಅನ್ನದಾತನ ಬರ್ತ್ ಡೇ ಸಂಭ್ರಮ ಮಾಡಿ, ಫೋಟೋ ಶೂಟ್ ನಡೆಸಲಾಯ್ತು. ಯಾರು ಆ ಅನ್ನದಾತ ಅಂತೀರಾ? ಈ ಸ್ಟೋರಿ ನೋಡಿ.
Published on: Dec 05, 2020 10:02 AM