Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರವಾರ: ಚಾಸೀಸ್ ತುಂಡಾಗಿ ರಸ್ತೆಯಲ್ಲೇ ಪಲ್ಟಿಯಾದ ಬಸ್​, ಹಲವರಿಗೆ ಗಾಯ

ಕಾರವಾರ: ಚಾಸೀಸ್ ತುಂಡಾಗಿ ರಸ್ತೆಯಲ್ಲೇ ಪಲ್ಟಿಯಾದ ಬಸ್​, ಹಲವರಿಗೆ ಗಾಯ

TV9 Web
| Updated By: ಆಯೇಷಾ ಬಾನು

Updated on:Jan 06, 2024 | 11:44 AM

ಕಾರವಾರ ನಗರದಿಂದ ಕೆರವಡಿ ಗ್ರಾಮಕ್ಕೆ ತೆರಳುತ್ತಿದ್ದ ಸರ್ಕಾರಿ ಬಸ್ ನಡುರಸ್ತೆಯಲ್ಲಿ ಚಾಸೀಸ್ ತುಂಡಾಗಿ ಪಲ್ಟಿಯಾಗಿದೆ. ಬಸ್ಸಿನಲ್ಲಿ ಸುಮಾರು ಐವತ್ತಕ್ಕೂ ಅಧಿಕ ಜನರು ಪ್ರಯಾಣಿಸುತ್ತಿದ್ದರು. ಬಸ್ಸಿನ ಹಿಂಬದಿ ಚಾಸೀಸ್ ಒಮ್ಮೆಲೆ ಕಟ್ ಆಗಿದ್ದು ಬಸ್ ರಸ್ತೆಯಲ್ಲಿಯೇ ಪಲ್ಟಿಯಾಗುವ ಹಂತಕ್ಕೆ ತಲುಪಿತ್ತು.

ಕಾರವಾರ, ಜ.02: ಉತ್ತರ ಕನ್ನಡ ಜಿಲ್ಲೆ ಕಾರವಾರದ ಹಬ್ಬುವಾಡ ರಸ್ತೆಯಲ್ಲಿ ಅಪಘಾತ (Accident) ಸಂಭವಿಸಿದೆ. ಚಾಸೀಸ್ (Chassis) ತುಂಡಾಗಿ ರಸ್ತೆಯಲ್ಲೇ ಬಸ್ (Government Bus)​ ಪಲ್ಟಿಯಾಗಿದೆ. ಬಸ್​​ನಲ್ಲಿದ್ದ ಹಲವರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಂಡಿಷನ್ ಇಲ್ಲದ ಬಸ್​ ಬಿಟ್ಟಿದ್ದಕ್ಕೆ ಜನರು ಆಕ್ರೋಶ ಹೊರ ಹಾಕಿದ್ದಾರೆ. ಹಾಗೂ ಬಸ್ ಪಲ್ಟಿ ಹಿನ್ನೆಲೆ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಕಾರವಾರ ನಗರದಿಂದ ಕೆರವಡಿ ಗ್ರಾಮಕ್ಕೆ ತೆರಳುತ್ತಿದ್ದ ಸರ್ಕಾರಿ ಬಸ್ ನಡುರಸ್ತೆಯಲ್ಲಿ ಚಾಸೀಸ್ ತುಂಡಾಗಿ ಪಲ್ಟಿಯಾಗಿದೆ. ಬಸ್ಸಿನಲ್ಲಿ ಸುಮಾರು ಐವತ್ತಕ್ಕೂ ಅಧಿಕ ಜನರು ಪ್ರಯಾಣಿಸುತ್ತಿದ್ದರು. ಬಸ್ಸಿನ ಹಿಂಬದಿ ಚಾರ್ಸಿ ಒಮ್ಮೆಲೆ ಕಟ್ ಆಗಿದ್ದು ಬಸ್ ರಸ್ತೆಯಲ್ಲಿಯೇ ಪಲ್ಟಿಯಾಗುವ ಹಂತಕ್ಕೆ ತಲುಪಿತ್ತು. ಅದೃಷ್ಟವಶಾತ್ ಪ್ರಾಣ ಹಾನಿ ಸಂಭವಿಸಿಲ್ಲ. ಬಸ್ಸಿನಲ್ಲಿದ್ದ ಹಲವರಿಗೆ ಗಾಯಗಳಾಗಿವೆ. ಕಂಡಿಷನ್ ಇಲ್ಲದ ಬಸ್ಸನ್ನ ಬಿಟ್ಟ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ಹೊರ ಹಾಕಿದ್ದಾರೆ. ರಸ್ತೆಯಲ್ಲಿಯೇ ಬಸ್ ಪಲ್ಟಿಯಾದ ಹಿನ್ನಲೆ ಕಾರವಾರ ಕೈಗಾ ರಸ್ತೆ ಸಂಚಾರ ವ್ಯತ್ಯಯವಾಗಿತ್ತು.

ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ

Published on: Jan 02, 2024 11:03 AM