ಇದು ದಸರಾ ಹಬ್ಬದ ವೀಕೆಂಡ್, ಬಸ್ ನಿಲ್ದಾಣ ಮತ್ತು ಬಸ್ಸುಗಳು ಫುಲ್ ರಶ್!
ಬೆಂಗಳೂರಿಂದ ದೂರದ ಊರುಗಳಿಗೆ ತೆರಳುವವರಿಗೆ ಮಳೆರಾಯ ತೊಂದರೆ ಕೊಡಲಾರಂಭಿಸಿದ್ದಾನೆ. ಹವಾಮಾನ ಇಲಾಖೆಯ ನೀಡಿರುವ ಮುನ್ಸೂಚನೆ ಪ್ರಕಾರ ಲಕ್ಷದ್ವೀಪದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಇಂದಿನಿಂದ ಅಕ್ಟೋಬರ್ 14ರವರೆಗೆ ಬೆಂಗಳೂರು ಸೇರಿದಂತೆ ಎಲ್ಲ ಜಿಲ್ಲೆಗಳಲ್ಲಿ ಮಳೆಯಾಗಲಿದೆ.
ಬೆಂಗಳೂರು: ಇವತ್ತಿನ್ನೂ ಗುರುವಾರ ಹಾಗಾಗಿ ವೀಕೆಂಡ್ ಅಲ್ಲ, ಆದರೆ ಇದು ಹಬ್ಬವನ್ನೊಳಗೊಂಡ ವೀಕೆಂಡ್. ಇವತ್ತು ಆಯುಧ ಪೂಜೆ, 12 ರಂದು ವಿಜಯದಶಮಿ, 13 ಸಂಡೇ-ಹಾಗಾಗಿ ಜನ ದಸರಾ ಹಬ್ಬ ಆಚರಿಸಲು ತಮ್ಮ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ನಗರದ ಕೆಂಪೇಗೌಡ ಬಸ್ ಟರ್ಮಿನಲ್ನಲ್ಲಿ ಇಂದು ಸಾಯಂಕಾಲ ಕಂಡುಬಂದ ದೃಶ್ಯವಿದು. ಹೆಚ್ಚುಕಡಿಮೆ ಎಲ್ಲ ಬಸ್ ಗಳು ಫುಲ್. ಮುಂಗಡ ಬುಕ್ಕಿಂಗ್ ಮಾಡಿಕೊಂಡವರಿಗೆ ಸುಖಕರ ಪ್ರಯಾಣ, ಮಾಡದವರಿಗೆ ಬಸ್ಸಲ್ಲಿ ತಳ್ಳಾಟ-ನೂಕಾಟ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಅರಮನೆಯ ಆಯುಧ ಮತ್ತು ವಾಹನಗಳಿಗೆ ಯದುವೀರ್ ಪೂಜೆ ಸಲ್ಲಿಸುವುದನ್ನು ಆಸ್ಥೆ ಮತ್ತು ಕುತೂಹಲದಿಂದ ವೀಕ್ಷಿಸಿದ ಪುಟಾಣಿ ಆದ್ಯವೀರ್