ಅಂತಿಮ ಪರೀಕ್ಷೆ ವೇಳೆ ಬ್ರೌನ್ ವಿವಿಯಲ್ಲಿ ಗುಂಡಿನ ದಾಳಿ, ಇಬ್ಬರು ಸಾವು
ಅಮೆರಿಕದ ಬ್ರೌನ್ ವಿಶ್ವವಿದ್ಯಾಲಯದಲ್ಲಿ ಅಂತಿಮ ಪರೀಕ್ಷೆ ವೇಳೆ ಗುಂಡಿನ ದಾಳಿ ನಡೆದಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ರೋಡ್ ಐಲೆಂಡ್‌ನ ಪ್ರಾವಿಡೆನ್ಸ್‌ನಲ್ಲಿರುವ ಬರಸ್, ಹೋಲಿ ಕಟ್ಟಡದ ಬಳಿ ನಡೆದ ಈ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದು, ಎಂಟು ಮಂದಿ ಗಾಯಗೊಂಡಿದ್ದಾರೆ. ಏಳು ಅಂತಸ್ತಿನ ಈ ಕಟ್ಟಡ ಇದಾಗಿದ್ದು, 100 ಕ್ಕೂ ಹೆಚ್ಚು ಪ್ರಯೋಗಾಲಯಗಳು ಮತ್ತು ಹಲವಾರು ತರಗತಿ ಕೊಠಡಿಗಳು ಮತ್ತು ಕಚೇರಿಗಳನ್ನು ಹೊಂದಿದೆ. ಅಧಿಕಾರಿಗಳು ಪ್ರದೇಶವನ್ನು ಸುರಕ್ಷಿತವೆಂದು ಘೋಷಿಸುವವರೆಗೆ ಜನರು ಬಾಗಿಲುಗಳನ್ನು ಲಾಕ್ ಮಾಡಿ, ಫೋನ್‌ಗಳನ್ನು ಸಲೆಂಟ್ನಲ್ಲಿಡಲು ಮತ್ತು ಅಡಗಿರುವಂತೆ ಸೂಚನೆ ನೀಡಲಾಯಿತು. ಓರ್ವ ಶಂಕಿತನನ್ನು ವಶಕ್ಕೆ ಪಡೆಯಲಾಗಿದೆ.
ವಾಷಿಂಗ್ಟನ್, ಡಿಸೆಂಬರ್ 14: ಅಮೆರಿಕದ ಬ್ರೌನ್ ವಿಶ್ವವಿದ್ಯಾಲಯದಲ್ಲಿ ಅಂತಿಮ ಪರೀಕ್ಷೆ ವೇಳೆ ಗುಂಡಿನ ದಾಳಿ ನಡೆದಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ರೋಡ್ ಐಲೆಂಡ್‌ನ ಪ್ರಾವಿಡೆನ್ಸ್‌ನಲ್ಲಿರುವ ಬರಸ್, ಹೋಲಿ ಕಟ್ಟಡದ ಬಳಿ ನಡೆದ ಈ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದು, ಎಂಟು ಮಂದಿ ಗಾಯಗೊಂಡಿದ್ದಾರೆ. ಏಳು ಅಂತಸ್ತಿನ ಈ ಕಟ್ಟಡ ಇದಾಗಿದ್ದು, 100 ಕ್ಕೂ ಹೆಚ್ಚು ಪ್ರಯೋಗಾಲಯಗಳು ಮತ್ತು ಹಲವಾರು ತರಗತಿ ಕೊಠಡಿಗಳು ಮತ್ತು ಕಚೇರಿಗಳನ್ನು ಹೊಂದಿದೆ. ಅಧಿಕಾರಿಗಳು ಪ್ರದೇಶವನ್ನು ಸುರಕ್ಷಿತವೆಂದು ಘೋಷಿಸುವವರೆಗೆ ಜನರು ಬಾಗಿಲುಗಳನ್ನು ಲಾಕ್ ಮಾಡಿ, ಫೋನ್‌ಗಳನ್ನು ಸಲೆಂಟ್ನಲ್ಲಿಡಲು ಮತ್ತು ಅಡಗಿರುವಂತೆ ಸೂಚನೆ ನೀಡಲಾಯಿತು. ಓರ್ವ ಶಂಕಿತನನ್ನು ವಶಕ್ಕೆ ಪಡೆಯಲಾಗಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ