ಕಾರಿಗೆ ಗುದ್ದಿ ಪಾದಚಾರಿ ಮೇಲೆ ಕ್ಯಾಂಟರ್ ಪಲ್ಟಿ: ದೃಶ್ಯ ನೋಡಿದ್ರೆ ಎದೆ ಝಲ್ ಎನ್ನುತ್ತೆ!
ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದಲ್ಲಿ ಭೀಕರ ಅಪಘಾತ ನಡೆದಿದೆ. ಸರಣಿ ಅಪಘಾತದ ವೇಳೆ ಪಾದಚಾರಿಮೇಲೆ ಕ್ಯಾಂಟರ್ ಮಗುಚಿ ಬಿದ್ದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾರಿಗೆ ಕ್ಯಾಂಟರ್ ಗುದ್ದಿ ಪಲ್ಟಿಯಾಗಿದೆ. ಹಿಂದೆ ಇದ್ದ ಮತ್ತೊಂದು ಕಾರು ಕೂಡ ಘಟನೆಯಲ್ಲಿ ಜಖಂ ಆಗಿದ್ದು, ಘಟನೆ ವಿಡಿಯೋ ವೈರಲ್ ಆಗಿದೆ.
ಉಡುಪಿ, ಡಿಸೆಂಬರ್ 29: ಸರಣಿ ಅಪಘಾತದ ವೇಳೆ ಪಾದಚಾರಿಮೇಲೆ ಕ್ಯಾಂಟರ್ ಮಗುಚಿ ಬಿದ್ದ ಘಟನೆ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದಲ್ಲಿ ನಡೆದಿದೆ. ಲಾರಿ ಮತ್ತು ಕ್ಯಾಂಟರ್ ನಡುವೆ ಮೊದಲು ಡಿಕ್ಕಿಯಾಗಿದ್ದು, ಅಪಘಾತದ ರಭಸಕ್ಕೆ ಕ್ಯಾಂಟರ್ ಪಲ್ಟಿಯಾಗಿದೆ. ಈ ವೇಳೆ ಹಿಂಬದಿಯಲ್ಲಿ ಬರುತ್ತಿದ್ದ ಮತ್ತೊಂದು ಕಾರು ಕೂಡ ಜಖಂ ಆಗಿದೆ. ಕ್ಯಾಂಟರ್ ದಾವಣಗೆರೆಯಿಂದ ಮಂಗಳೂರಿಗೆ ಮೊಟ್ಟೆ ಸಾಗಿಸುತ್ತಿದ್ದರೆ, ಕಾರು ಬೆಳ್ಮಣ್ನಿಂದ ಕಾರ್ಕಳ ಕಡೆಗೆ ಬರುತ್ತಿತ್ತು. ಅಪಘಾತದಲ್ಲಿ ಪಾದಚಾರಿ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Dec 29, 2025 04:16 PM