ಪೊಲೀಸ್ ಆಯುಕ್ತರ ಕಾರಿನೊಳಗೂ ತೂರಿ ಬಂದ ಸೋಂಕು, ಕ್ವಾರಂಟೈನ್‌ ಆದ್ರು ಭಾಸ್ಕರ್ ರಾವ್

| Updated By: ಸಾಧು ಶ್ರೀನಾಥ್​

Updated on: Jul 17, 2020 | 6:56 PM

[lazy-load-videos-and-sticky-control id=”GF7GZkk9TYc”] ಬೆಂಗಳೂರು: ಕೊರೊನಾ ಹೆಮ್ಮಾರಿ ಎಂಥಾ ಖತರ್ನಾಕ್ ಅಂದ್ರೆ ಸಿಕ್ಕವರೆನ್ನೆಲ್ಲಾ ಮಾತ್ರ ಅಲ್ಲ ಪೊಲೀಸರನ್ನು ಬಿಡ್ತಿಲ್ಲ. ಅಷ್ಟೇ ಅಲ್ಲ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರ ಕಾರಿನೊಳಗೂ ತೂರಿ ಬಂದಿದೆ. ಪರಿಣಾಮ ಅವರ ಕಾರ್ ಡ್ರೈವರ್‌ಗೆ ಕೊರೊನಾ ಸೋಂಕು ತಗುಲಿದೆ. ಹೀಗಾಗಿ ಭಾಸ್ಕರ್ ರಾವ್ ಈಗ ಹೋಮ್ ಕ್ವಾರಂಟೈನ್ ಆಗಿದ್ದಾರೆ. ಕೊರೊನಾ ಟೆಸ್ಟ್ ವೇಳೆ ಬೆಂಗಳೂರು ಆಯುಕ್ತರ ಕಾರಿನ ಚಾಲಕನಿಗೆ ಸೋಂಕು ತಗುಲಿರೋದು ದೃಢವಾಗಿದೆ. ಹೀಗಾಗಿ ನಗರದ ಕಾನೂನು ಸುವ್ಯವಸ್ಥೆಯ ಮೇಲ್ವಿಚಾರಕರಾದ ಭಾಸ್ಕರ್ […]

ಪೊಲೀಸ್ ಆಯುಕ್ತರ ಕಾರಿನೊಳಗೂ ತೂರಿ ಬಂದ ಸೋಂಕು, ಕ್ವಾರಂಟೈನ್‌ ಆದ್ರು ಭಾಸ್ಕರ್ ರಾವ್
ಭಾಸ್ಕರ್ ರಾವ್
Follow us on

[lazy-load-videos-and-sticky-control id=”GF7GZkk9TYc”]

ಬೆಂಗಳೂರು: ಕೊರೊನಾ ಹೆಮ್ಮಾರಿ ಎಂಥಾ ಖತರ್ನಾಕ್ ಅಂದ್ರೆ ಸಿಕ್ಕವರೆನ್ನೆಲ್ಲಾ ಮಾತ್ರ ಅಲ್ಲ ಪೊಲೀಸರನ್ನು ಬಿಡ್ತಿಲ್ಲ. ಅಷ್ಟೇ ಅಲ್ಲ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರ ಕಾರಿನೊಳಗೂ ತೂರಿ ಬಂದಿದೆ. ಪರಿಣಾಮ ಅವರ ಕಾರ್ ಡ್ರೈವರ್‌ಗೆ ಕೊರೊನಾ ಸೋಂಕು ತಗುಲಿದೆ. ಹೀಗಾಗಿ ಭಾಸ್ಕರ್ ರಾವ್ ಈಗ ಹೋಮ್ ಕ್ವಾರಂಟೈನ್ ಆಗಿದ್ದಾರೆ.

ಕೊರೊನಾ ಟೆಸ್ಟ್ ವೇಳೆ ಬೆಂಗಳೂರು ಆಯುಕ್ತರ ಕಾರಿನ ಚಾಲಕನಿಗೆ ಸೋಂಕು ತಗುಲಿರೋದು ದೃಢವಾಗಿದೆ. ಹೀಗಾಗಿ ನಗರದ ಕಾನೂನು ಸುವ್ಯವಸ್ಥೆಯ ಮೇಲ್ವಿಚಾರಕರಾದ ಭಾಸ್ಕರ್ ರಾವ್ ಈಗ ಹೋಮ್ ಕ್ವಾರಂಟೈನ್ ಆಗಿದ್ದಾರೆ. ಇದರೊಂದಿಗೆ ಬೆಂಗಳೂರಿನಲ್ಲಿ ಕ್ವಾರಂಟೈನ್ ಆದ ಪೊಲೀಸರ ಸಂಖ್ಯೆ 732ಕ್ಕೇರಿದೆ.

ಇಷ್ಟೇ ಅಲ್ಲ ಬೆಂಗಳೂರಿನಲ್ಲಿ ಕಳದೆ 24 ಗಂಟೆಯಲ್ಲಿ 18 ಪೊಲೀಸರಿಗೆ ಕೊರೊನಾ ಸೋಂಕು ತಗುಲಿದೆ. ಇದರೊಂದಿಗೆ ಇದುವರೆಗೆ ಕೊರಾನೊ ಸೋಂಕಿತ ಪೊಲೀಸರ ಸಂಖ್ಯೆ 720ಕ್ಕೇರಿದೆ. ಇದರಲ್ಲಿ 447 ಪೊಲೀಸರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದು, 265 ಜನರು ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Published On - 1:57 pm, Fri, 17 July 20