ಭದ್ರಾ ಕಾಲುವೆಗೆ ಬಿದ್ದ ಕಾರು: ಇಬ್ಬರು ಜಲ ಸಮಾಧಿ, ಈಜಿ ಪಾರಾದ ನಾಲ್ವರು

Updated By: ಪ್ರಸನ್ನ ಹೆಗಡೆ

Updated on: Nov 09, 2025 | 8:05 AM

ನಿದ್ದೆ ಮಂಪರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಭದ್ರಾ ಕಾಲುವೆ ಕಾರು ಬಿದ್ದ ಪರಿಣಾಮ ಇಬ್ಬರು ಮೃತಪಟ್ಟಿರುವ ಘಟನೆ ಚನ್ನಗಿರಿ ತಾಲೂಕಿನ ಹೊಸೂರು ಗ್ರಾಮದಲ್ಲಿ ನಡೆದಿದೆ. ಒಟ್ಟು 6 ಮಂದಿ ಕಾರಿನಲ್ಲಿ ಇದ್ದರು ಎನ್ನಲಾಗಿದ್ದು, ಆ ಪೈಕಿ ನಾಲ್ವರು ಈಜಿ ದಡ ಸೇರಿ ಪ್ರಾಣ ಉಳಿಸಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಸಂತೇಬೆನ್ನೂರು ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ದಾವಣಗೆರೆ, ನವೆಂಬರ್​ 09: ಭದ್ರಾ ಕಾಲುವೆಗೆ ಕಾರು ಬಿದ್ದ ಪರಿಣಾಮ ಇಬ್ಬರು ಮೃತಪಟ್ಟಿರುವ ಘಟನೆ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಹೊಸೂರು ಗ್ರಾಮದಲ್ಲಿ ನಡೆದಿದೆ. ಕಾರಿನಲ್ಲಿದ್ದ ಮಲ್ಲಿಕಾರ್ಜುನ(29) ಹಾಗೂ ಸಿದ್ದೇಶ್(38) ಮೃತ ದುರ್ದೈವಿಗಳಾಗಿದ್ದಾರೆ. ದಾವಣಗೆರೆ ಮೂಲದ ಆರು ಜನ ಮಂಗಳೂರು ಕಡೆ ಪ್ರವಾಸಕ್ಕೆ ಹೋಗಿದ್ದು, ವಾಪಸ್ ಬರುವಾಗ ನಿದ್ದೆ ಮಂಪರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಭದ್ರಾ ಕಾಲುವೆ ಕಾರು ಬಿದ್ದಿದೆ. ಈ ವೇಳೆ ಕಾರಿನಲ್ಲಿದ್ದ ಇಬ್ಬರು ಮೃತಪಟ್ಟಿದ್ದರೆ, ನಾಲ್ವರು ಈಜಿ ದಡ ಸೇರಿದ್ದಾರೆ. ಘಟನಾ ಸ್ಥಳಕ್ಕೆ ಸಂತೇಬೆನ್ನೂರು ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.

Published on: Nov 09, 2025 08:04 AM