ದೆಹಲಿಯಲ್ಲಿ ಕಾರು ಸ್ಫೋಟ; ಧಗಧಗನೆ ಹೊತ್ತಿ ಉರಿದ ವಾಹನಗಳು
ಇಂದು ಸಂಜೆ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಗೇಟ್ ಸಂಖ್ಯೆ 1ರ ಬಳಿ ಕಾರು ಸ್ಫೋಟಗೊಂಡಿದ್ದು, ಬೆಂಕಿ ಹತ್ತಿರದ ಮೂರರಿಂದ 4 ವಾಹನಗಳಿಗೆ ಹರಡಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾರಿ ಸ್ಫೋಟ ಸಂಭವಿಸಿದೆ. ಕೆಂಪು ಕೋಟೆ ಬಳಿ ಈ ಘಟನೆ ಸಂಭವಿಸಿದ್ದು, ನಿಲ್ಲಿಸಿದ್ದ ಕಾರು ಸ್ಫೋಟಗೊಂಡು ಆ ಪ್ರದೇಶದಲ್ಲಿ ಭೀತಿ ಉಂಟಾಯಿತು. ಸ್ಫೋಟದ ನಂತರ ಕಾರಿಗೆ ಬೆಂಕಿ ಹೊತ್ತಿಕೊಂಡಿತು. ಹತ್ತಿರದ 4 ಕಾರುಗಳು ಸಹ ಸುಟ್ಟು ಭಸ್ಮವಾದವು. ಈ ಸ್ಫೋಟದಲ್ಲಿ 8 ಜನ ಸಾವನ್ನಪ್ಪಿದ್ದಾರೆ.
ನವದೆಹಲಿ, ನವೆಂಬರ್ 10: ಇಂದು ಸಂಜೆ ದೆಹಲಿಯ ಕೆಂಪು ಕೋಟೆ (Red Fort) ಮೆಟ್ರೋ ನಿಲ್ದಾಣದ ಗೇಟ್ ಸಂಖ್ಯೆ 1ರ ಬಳಿ ಕಾರಿನಲ್ಲಿ ಸ್ಫೋಟ ಸಂಭವಿಸಿದೆ. ಈ ಸ್ಫೋಟದ ನಂತರ ಆ ಕಾರಿನ ಸಮೀಪ ನಿಲ್ಲಿಸಿದ್ದ ಇತರ 4 ವಾಹನಗಳು ಸಹ ಬೆಂಕಿಗೆ ಆಹುತಿಯಾಗಿವೆ. ಇಂದು ಸಂಜೆ 6.55ಕ್ಕೆ ಕಾರು ಸ್ಫೋಟ ಸಂಭವಿಸಿದೆ. ಈ ಘಟನೆಯಲ್ಲಿ 8 ಜನ ಸಾವನ್ನಪ್ಪಿದ್ದು, 10ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಪೊಲೀಸ್ ಮತ್ತು ಅಗ್ನಿಶಾಮಕ ದಳದ ತಂಡಗಳು ಆ ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ನಡೆಸುತ್ತಿವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Nov 10, 2025 08:04 PM