ಬೇಟೆಯಾಡಿ ತಿನ್ನಲು ತಂದ ಅಳಿಲ ಮರಿ ಜೊತೆ ಬೆಕ್ಕಿನ ಸ್ನೇಹ; ಅಪರೂಪದ ವಿಡಿಯೋ
ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ದುಂಡಗಿ ಗ್ರಾಮದ ಮಹದೇವಮ್ಮ ಮನೆಯಲ್ಲಿರುವ ಬೆಕ್ಕು ಮತ್ತು ಅಳಿಲಿನ ಸ್ನೇಹ ಕಂಡ್ರೆ ಎಂತವರಿಗೂ ಅಚ್ಚರಿ ಎನಿಸದೆ ಇರದು ಎಂದರೆ ತಪ್ಪಾಗಲಾರದು. ಏಕೆಂದರೆ ತಾನೇ ಬೇಟೆಯಾಡಿ ತಿನ್ನಲು ಹಿಡಿದು ತಂದಿದ್ದ ಅಳಿಲು ಮರಿಯ ಜೊತೆ ಬೆಕ್ಕಿನ ಸ್ನೇಹ ಬೆಳೆದಿದೆ.
ಕೊಪ್ಪಳ, ನ.12: ಸಾಮಾನ್ಯವಾಗಿ ಬೆಕ್ಕುಗಳು ಪಕ್ಷಿಗಳನ್ನು, ಚಿಕ್ಕ ಚಿಕ್ಕ ಪ್ರಣಿಗಳನ್ನು ಬೇಟೆಯಾಡುತ್ತೆ. ಆದರೆ ಇಲ್ಲೊಂದು ಅರೂಪದ ಅಚ್ಚರಿಯ ಘಟನೆ ನಡೆದಿದೆ. ತಿನ್ನಲು ಎಂದು ಹಿಡಿದು ತಿಂದಿದ್ದ ಅಳಿಲಿನ ಮರಿಯ ಜೊತೆ ಬೆಕ್ಕಿನ ಆತ್ಮೀಯ ಸ್ನೇಹ ಬೆಳೆದುಕೊಂಡಿದೆ. ಇದು ಪ್ರಾಣಿ ಲೋಕದ ವಿಸ್ಮಯ ದೃಶ್ಯ. ಹೌದು, ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ದುಂಡಗಿ ಗ್ರಾಮದ ಮಹದೇವಮ್ಮ ಮನೆಯಲ್ಲಿರುವ ಬೆಕ್ಕು ಮತ್ತು ಅಳಿಲಿನ ಸ್ನೇಹ ಕಂಡ್ರೆ ಎಂತವರಿಗೂ ಅಚ್ಚರಿ ಎನಿಸದೆ ಇರದು ಎಂದರೆ ತಪ್ಪಾಗಲಾರದು. ಏಕೆಂದರೆ ತಾನೇ ಬೇಟೆಯಾಡಿ ತಿನ್ನಲು ಹಿಡಿದು ತಂದಿದ್ದ ಅಳಿಲು ಮರಿಯ ಜೊತೆ ಬೆಕ್ಕಿನ ಸ್ನೇಹ ಬೆಳೆದಿದೆ.
ಬೇಟಿಯಾಡಿ ತಿನ್ನಲು ತಂದಿದ್ದ ಅಳಲನ್ನು ಸ್ವಂತ ಮಗುವಿನಿಂತೆ ನೋಡಿಕೊಳ್ಳುವ ಮೂಲಕ ಬೆಕ್ಕು ತಾಯಿ ಮಮತೆಯನ್ನು ಮರೆಯುತ್ತಿದೆ. ಗ್ರಾಮದ ಮಹದೇವಮ್ಮ ಅನ್ನೋರ ಮನೆಯಲ್ಲಿ ಬೆಕ್ಕು ಮತ್ತು ಅಳಿಲು ಅನೇಕ ದಿನಗಳಿಂದ ಸ್ನೇಹಿತರಂತೆ ಇವೆ. ಕೆಲ ದಿನಗಳ ಹಿಂದೆ ಬೆಕ್ಕು ಅಳಿಲನ್ನು ಹಿಡಿದು ತಂದಿತ್ತು. ಆದ್ರೆ ಅಳಿಲನ್ನು ಸಾಯಿಸದೇ ಅದನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದೆ. ಇದು ಸಾರ್ವಜನಿಕರ ಅಚ್ಚರಿಗೆ ಕಾರಣವಾಗಿದೆ. ಬೆಕ್ಕು ಮತ್ತು ಅಳಿಲಿನ ಸ್ನೇಹ, ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.
ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ