Video:ಒಬ್ಬ ಕದೀತಿದ್ದ, ಮತ್ತೊಬ್ಬ ಬೆಡ್ ಹತ್ರ ರಾಡ್ ಹಿಡಿದು ನಿಂತಿದ್ದ, ಒಂದೊಮ್ಮೆ ಕಣ್ಣು ಬಿಟ್ಟಿದ್ರೆ ಜೀವ ಹೋಗಿರೋದು
ಅಬ್ಬಾ.. ವಿಡಿಯೋ ನೋಡಿದಾಗ ಉಸಿರುಗಟ್ಟಿದ ಅನುಭವವಾಗುತ್ತದೆ. ಒಂದೊಮ್ಮೆ ಆ ವ್ಯಕ್ತಿ ಎಚ್ಚರವಾಗಿದ್ರೆ ಅವರ ಕಥೆ ಏನಾಗುತ್ತಿತ್ತು. ವ್ಯಕ್ತಿಯೊಬ್ಬರು ಅವರ ಕೋಣೆಯಲ್ಲಿ ಹಾಸಿಗೆಯ ಮೇಲೆ ಮಲಗಿದ್ದಾರೆ. ಆ ರೂಮಿನಲ್ಲಿ ಕಳ್ಳತನ ನಡೆಯುತ್ತಿದೆ. ಆದರೆ ಅದರ ಬಗ್ಗೆ ಯಾವ ಅರಿವೂ ಮನೆ ಮಾಲೀಕನಿಗಿರಲಿಲ್ಲ. ಒಬ್ಬ ಕದಿಯುತ್ತಿದ್ದರೆ, ಮತ್ತೊಬ್ಬ ಬೆಡ್ ಬಳಿ ರಾಡ್ ಹಿಡಿದು ನಿಂತಿದ್ದಾನೆ, ಒಂದೊಮ್ಮೆ ಅವರಿಗೆ ಎಚ್ಚರವಾದರೆ ಆ ರಾಡ್ನಿಂದಲೇ ಪೆಟ್ಟು ಬೀಳುವುದು ಖಂಡಿತವಾಗಿತ್ತು. ಈ ಘಟನೆ ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆದಿದೆ
ಇಂದೋರ್, ಆಗಸ್ಟ್ 14: ಅಬ್ಬಾ.. ವಿಡಿಯೋ ನೋಡಿದಾಗ ಉಸಿರುಗಟ್ಟಿದ ಅನುಭವವಾಗುತ್ತದೆ. ಒಂದೊಮ್ಮೆ ಆ ವ್ಯಕ್ತಿ ಎಚ್ಚರವಾಗಿದ್ರೆ ಅವರ ಕಥೆ ಏನಾಗುತ್ತಿತ್ತು. ವ್ಯಕ್ತಿಯೊಬ್ಬರು ಅವರ ಕೋಣೆಯಲ್ಲಿ ಹಾಸಿಗೆಯ ಮೇಲೆ ಮಲಗಿದ್ದಾರೆ. ಆ ರೂಮಿನಲ್ಲಿ ಕಳ್ಳತನ ನಡೆಯುತ್ತಿದೆ. ಆದರೆ ಅದರ ಬಗ್ಗೆ ಯಾವ ಅರಿವೂ ಮನೆ ಮಾಲೀಕನಿಗಿರಲಿಲ್ಲ.
ಒಬ್ಬ ಕದಿಯುತ್ತಿದ್ದರೆ, ಮತ್ತೊಬ್ಬ ಬೆಡ್ ಬಳಿ ರಾಡ್ ಹಿಡಿದು ನಿಂತಿದ್ದಾನೆ, ಒಂದೊಮ್ಮೆ ಅವರಿಗೆ ಎಚ್ಚರವಾದರೆ ಆ ರಾಡ್ನಿಂದಲೇ ಪೆಟ್ಟು ಬೀಳುವುದು ಖಂಡಿತವಾಗಿತ್ತು. ಈ ಘಟನೆ ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆದಿದೆ. ಇಂದೋರ್ನ್ಲ್ಲಿ ಮಾಜಿ ನ್ಯಾಯಮೂರ್ತಿ ರಮೇಶ್ ಗರ್ಗ್ ಅವರ ಮನೆಯಲ್ಲಿ ಘಟನೆ ನಡೆದಿದೆ. ಗರ್ಗ್ ಅವರ ಪುತ್ರ ರಿತ್ವಿಕ್ ಮಲಗಿದ್ದ ಕೋಣೆಯನ್ನು ಗುರಿಯಾಗಿಸಿಕೊಂಡು ಕಬ್ಬಿಣದ ಕಿಟಕಿಯ ಗ್ರಿಲ್ ಕತ್ತರಿಸಿ ಮನೆಯೊಳಗೆ ಕಳ್ಳರು ಪ್ರವೇಶಿಸಿದ್ದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ