ಬುರ್ಖಾ ಧರಿಸಿ ಬಿಂದಿಗೆ ಹೊತ್ತುಕೊಂಡು ವಿಭಿನ್ನ ಪ್ರತಿಭಟನೆ: ಬುರ್ಖಾ ಬಗ್ಗೆ ವಿವರಿಸಿದ ವಾಟಾಳ್ ನಾಗರಾಜ್
ಬಂದ್, ಪ್ರತಿಭಟನೆಗಳು ಇದ್ದಾಗ ಸದಾ ಒಂದಲ್ಲ ಒಂದು ಗೆಟಪ್ನಲ್ಲಿ ಕಾಣಿಸಕೊಳ್ಳುವ ವಾಟಳ್ ನಾಗರಾಜ್ ಇಂದು(ಸೆ.29) ಕರ್ನಾಟಕ ಬಂದ್ ವೇಳೆ ಬುರ್ಖಾ ಧರಿಸಿ ತಲೆಯ ಮೇಲೆ ಬಿಂದಿಗೆ ಹೊತ್ತುಕೊಂಡು ವಿಭಿನ್ನವಾಗಿ ಪ್ರತಿಭಟನೆ ಮಾಡಿದರು. ಇನ್ನು ಬುರ್ಖಾ ಧರಿಸಿ ತಲೆಯ ಮೇಲೆ ಬಿಂದಿಗೆ ಹೊತ್ತುಕೊಂಡಿರುವುದ್ಯಾಕೆ ಎನ್ನುವುದರ ಬಗ್ಗೆ ವಾಟಾಳ್ ನಾಗರಾಜ್ ವಿವರಿಸಿದ್ದಾರೆ.
ಬೆಂಗಳೂರು (ಸೆ.29): ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸದಂತೆ ಕರ್ನಾಟಕ ಜಲ ಸಂರಕ್ಷಣಾ ಸಮಿತಿಯ ವಾಟಾಳ್ ನಾಗರಾಜ್ ಕರ್ನಾಟಕ ಬಂದ್‌ಗೆ ಕರೆ ಕೊಟ್ಟಿದ್ದು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಲವು ಸಂಘ-ಸಂಸ್ಥೆಗಳು ರಸ್ತೆಗಳಿದು ಪ್ರತಿಭಟನೆ ಮಾಡುತ್ತಿವೆ. ಇನ್ನು ಇಂತಹ ಬಂದ್, ಪ್ರತಿಭಟನೆಗಳು ಇದ್ದಾಗ ಸದಾ ಒಂದಲ್ಲ ಒಂದು ಗೆಟಪ್ನಲ್ಲಿ ಕಾಣಿಸಕೊಳ್ಳುವ ವಾಟಳ್ ನಾಗರಾಜ್ ಇಂದು(ಸೆ.29) ಕರ್ನಾಟಕ ಬಂದ್ ವೇಳೆ ಬುರ್ಖಾ ಧರಿಸಿ ತಲೆಯ ಮೇಲೆ ಬಿಂದಿಗೆ ಹೊತ್ತುಕೊಂಡು ವಿಭಿನ್ನವಾಗಿ ಪ್ರತಿಭಟನೆ ಮಾಡಿದರು. ಇನ್ನು ಬುರ್ಖಾ ಧರಿಸಿ ತಲೆಯ ಮೇಲೆ ಬಿಂದಿಗೆ ಹೊತ್ತುಕೊಂಡಿರುವುದ್ಯಾಕೆ ಎನ್ನುವುದರ ಬಗ್ಗೆ ವಾಟಾಳ್ ನಾಗರಾಜ್ ವಿವರಿಸಿದ್ದಾರೆ.
ನಾನು ಧರಿಸಿದ ಬಟ್ಟೆಯ ಬಗ್ಗೆ ನಿಮಗೆ ಗೊತ್ತಾ? ಬುರ್ಖಾ ಬಗ್ಗೆ ವಿವರಿಸಿದ ವಾಟಾಳ್ ನಾಗರಾಜ್, ನ್ಯಾಯದೇವತೆ ಧರಿಸುವ ಬಟ್ಟೆ ಅಥವಾ ಬುರ್ಖಾ ಎಂದಾದರೂ ಕರೆಯಲಿ. ನ್ಯಾಯದೇವತೆಯ ಸಂದೇಶ ಸಾರುವ ಬುರ್ಖಾ ಧರಿಸಿದ್ದೇನೆ. ಮಹಿಳೆಯರ ಗೌರವದ ಸಂಕೇತ ಸಹ ಹೌದು ಎಂದು ವಿವರಿಸಿದರು.