ತಮಿಳುನಾಡಿಗೆ ಮತ್ತೆ ಕಾವೇರಿ ನೀರು ಹರಿಸುವಂತೆ ಆದೇಶ: ಮಂಡ್ಯದಲ್ಲಿ ಶುರುವಾಯ್ತು ‘ವಾರಕ್ಕೊಮ್ಮೆ ಚಳವಳಿ’
ಕಾವೇರಿ ಹೋರಾಟ ಮುಗಿಯುವಂತೆ ಕಾಣಿತ್ತಿಲ್ಲ. ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿಯೇ ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರವಾಗಿ ರೈತರ ಜೊತೆಗೆ ವಿದ್ಯಾರ್ಥಿಗಳು ಸೇರಿದಂತೆ ಬೃಹತ್ ಪ್ರತಿಭಟನೆ ನಡೆಸಲಾಗಿತ್ತು. ಅಲ್ಲಿಂದಲೂ ಕೂಡ ಧರಣಿ ನಡೆಸುತ್ತಲೇ ಬರಲಾಗಿತ್ತು. ಇದೀಗ ಬರೊಬ್ಬರಿ 150 ದಿನಗಳ ಕಾವೇರಿ ಧರಣಿಯನ್ನು ಅಂತ್ಯಗೊಳಿಸಿ ‘ವಾರಕ್ಕೊಮ್ಮೆ ಚಳವಳಿ’ ಯನ್ನು ಆರಂಭಿಸಲಾಗಿದೆ.
ಮಂಡ್ಯ, ಫೆ.13: ತಮಿಳುನಾಡಿಗೆ ಮತ್ತೆ ಕಾವೇರಿ(Cauvery) ಹರಿಸುವ ಆದೇಶ ಖಂಡಿಸಿ ಮಂಡ್ಯದಲ್ಲಿ ಕಾವೇರಿ ನೀರಿಗಾಗಿ ‘ವಾರಕ್ಕೊಮ್ಮೆ ಚಳವಳಿ’ ಆರಂಭವಾಗಿದೆ. ಜಿಲ್ಲೆಯ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಭಿತ್ತಿ ಪತ್ರದೊಂದಿಗೆ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ. ತಮಿಳುನಾಡಿಗೆ 908 ಕ್ಯೂಸೆಕ್ ನೀರು ಹರಿಸುವಂತೆ ಪ್ರಾಧಿಕಾರ ಆದೇಶ ಬೆನ್ನಲ್ಲೇ ಸಿಡಬ್ಲ್ಯೂಆರ್ಸಿ(CWRC) ಹಾಗೂ ಸಿಡಬ್ಲ್ಯೂ (CWMA)ವಿರುದ್ಧ ಪ್ರತಿಭಟನೆ ಮುಂದುವರಿದಿದೆ.
150ನೇ ದಿನಕ್ಕೆ ಕಾವೇರಿ ಧರಣಿ ಅಂತ್ಯ ಗೊಳಿಸಿ ವಾರಕ್ಕೊಮ್ಮೆ ಚಳುವಳಿ ಆರಂಭ
ಕಾವೇರಿ ಹೋರಾಟ ಮುಗಿಯುವಂತೆ ಕಾಣಿತ್ತಿಲ್ಲ. ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿಯೇ ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರವಾಗಿ ರೈತರ ಜೊತೆಗೆ ವಿದ್ಯಾರ್ಥಿಗಳು ಸೇರಿದಂತೆ ಬೃಹತ್ ಪ್ರತಿಭಟನೆ ನಡೆಸಲಾಗಿತ್ತು. ಅಲ್ಲಿಂದಲೂ ಕೂಡ ಧರಣಿ ನಡೆಸುತ್ತಲೇ ಬರಲಾಗಿತ್ತು. ಇದೀಗ ಬರೊಬ್ಬರಿ 150 ದಿನಗಳ ಕಾವೇರಿ ಧರಣಿಯನ್ನು ಅಂತ್ಯಗೊಳಿಸಿ ‘ವಾರಕ್ಕೊಮ್ಮೆ ಚಳವಳಿ’ ಯನ್ನು ಆರಂಭಿಸಲಾಗಿದೆ. ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗುತ್ತಿರುವ ಹಿನ್ನಲೆ ರೈತ ಹಿತರಕ್ಷಣಾ ಸಮಿತಿಯವರು ಭಿತ್ತಿ ಪತ್ರ ಅಂಟಿಸುವ ಮೂಲಕ ಆಕ್ರೊಶ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ