ಹರ್ಷನ ಮನೆ ಸುತ್ತಮುತ್ತಲಿನ ಸಿಸಿಟಿವಿ ಫುಟೇಜ್ ಪರಿಶೀಲಿಸಲಾಗುತ್ತಿದೆ, ಕುಟುಂಬಕ್ಕೆ ಸೂಕ್ತ ಭದ್ರತೆ ಒದಗಿಸಲಾಗುವುದು: ಶಿವಮೊಗ್ಗ ಎಸ್ ಪಿ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 25, 2022 | 12:25 PM

ಪೊಲೀಸ್ ವರಿಷ್ಠಾಧಿಕಾರಿ ಅವರು ಹರ್ಷನ ಮನೆ ಬಳಿಯಿರುವ ಸಿಸಿಟಿವಿಗಳಿಂದ ಲಭ್ಯವಾಗಿರುವ ಫುಟೇಜ್ ಪರಿಶೀಲಿಸಲಾಗುತ್ತಿದೆ ಮತ್ತು ಕುಟುಂಬಕ್ಕೆ ಭದ್ರತೆ ಒದಗಿಸಲಾಗುವುದು ಎಂದು ಹೇಳಿದರು.

ಶಿವಮೊಗ್ಗ:  ಭಜರಂಗ ದಳದ ಕಾರ್ಯಕರ್ತ ಹರ್ಷ (Harsha) ಕೊಲೆ ನಡೆದು 8 ತಿಂಗಳು ಕಳೆದು, ಹಂತಕರನ್ನು ಜೈಲಿಗೆ ಹಾಕಿದರೂ ಹರ್ಷನ ಕುಟುಂಬಸ್ಥರಿಗೆ ಈಗಲೂ ಕೆಲ ಪುಂಡರು ಫೋನ್ ಮಾಡಿ ಬೆದರಿಕೆ ಒಡ್ಡುತ್ತಿದ್ದಾರೆ ಅಂತ ಮಾಹಿತಿ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ ಸುದ್ದಿಗೋಷ್ಟಿಯೊಂದನ್ನು ನಡೆಸಿದ ಶಿವಮೊಗ್ಗೆಯ ನೂತನ ಪೊಲೀಸ್ ವರಿಷ್ಠಾಧಿಕಾರಿ ಜಿಕೆ ಮಿಥುನ್ ಕುಮಾರ (GK Mithunkumar) ಅವರು ಹರ್ಷನ ಮನೆ ಬಳಿಯಿರುವ ಸಿಸಿಟಿವಿಗಳಿಂದ ಲಭ್ಯವಾಗಿರುವ ಫುಟೇಜ್ ಪರಿಶೀಲಿಸಲಾಗುತ್ತಿದೆ ಮತ್ತು ಕುಟುಂಬಕ್ಕೆ ಭದ್ರತೆ ಒದಗಿಸಲಾಗುವುದು ಎಂದು ಹೇಳಿದರು. ಆ ಏರಿಯಾದಲ್ಲಿ ಪೊಲೀಸ್ ಪೆಟ್ರೋಲಿಂಗ್ (police patrolling) ಸಹ ಹೆಚ್ಚಿಸಲಾಗುವುದು ಅಂತ ಎಸ್ ಪಿ ಹೇಳಿದರು.