Video: ಮನೆಯ ಹೊರಗೆ ತಂದೆ, ಮಗನ ಮೇಲೆ ಬೀದಿ ನಾಯಿ ದಾಳಿ

Updated on: Aug 10, 2025 | 10:48 AM

ತಮಿಳುನಾಡಿನ ಮಧುರೈನಲ್ಲಿ ನಡೆದ ಆತಂಕಕಾರಿ ಘಟನೆಯೊಂದು ನಡೆದಿದೆ. ಬೀದಿ ನಾಯಿಯೊಂದು ಮನೆಯ ಹೊರಗೆ ಎಂಟು ವರ್ಷದ ಬಾಲಕ ಮತ್ತು ಆತನ ತಂದೆಯ ಮೇಲೆ ದಾಳಿ ಮಾಡಿದೆ, ಘಟನೆಯಲ್ಲಿ ಇಬ್ಬರೂ ಗಾಯಗೊಂಡಿದ್ದಾರೆ. ಮುತ್ತುಸಾಮಿ ಮನೆಯಲ್ಲಿದ್ದಾಗ, ಅವರ ಮಗ ಸೆಂಥಿಲ್, 3 ನೇ ತರಗತಿ ವಿದ್ಯಾರ್ಥಿಯಾಗಿದ್ದು ಶಾಲೆಗೆ ಹೊರಡುವ ಮುನ್ನ, ಕಾಂಪೌಂಡ್ ಗೇಟ್ ತೆರೆದಿದ್ದಾಗ, ಬೀದಿ ನಾಯಿಯೊಂದು ಒಳಗೆ ಓಡಿ ಹುಡುಗನ ಮೇಲೆ ಎರಗಿ, ಅವನ ತೋಳುಗಳು, ಕಾಲುಗಳು ಮತ್ತು ತೊಡೆಯನ್ನು ಕಚ್ಚಿದೆ. ಅವನ ಕಿರುಚಾಟ ಕೇಳಿ ಮುತ್ತುಸ್ವಾಮಿ ಮತ್ತು ಇತರ ಕುಟುಂಬ ಸದಸ್ಯರು ಹೊರಗೆ ಓಡಿ ಬಂದಿದ್ದರು.

ಚೆನ್ನೈ, ಆಗಸ್ಟ್​ 10: ತಮಿಳುನಾಡಿನ ಮಧುರೈನಲ್ಲಿ ನಡೆದ ಆತಂಕಕಾರಿ ಘಟನೆಯೊಂದು ನಡೆದಿದೆ. ಬೀದಿ ನಾಯಿಯೊಂದು ಮನೆಯ ಹೊರಗೆ ಎಂಟು ವರ್ಷದ ಬಾಲಕ ಮತ್ತು ಆತನ ತಂದೆಯ ಮೇಲೆ ದಾಳಿ ಮಾಡಿದೆ, ಘಟನೆಯಲ್ಲಿ ಇಬ್ಬರೂ ಗಾಯಗೊಂಡಿದ್ದಾರೆ. ಮುತ್ತುಸಾಮಿ ಮನೆಯಲ್ಲಿದ್ದಾಗ, ಅವರ ಮಗ ಸೆಂಥಿಲ್, 3 ನೇ ತರಗತಿ ವಿದ್ಯಾರ್ಥಿಯಾಗಿದ್ದು ಶಾಲೆಗೆ ಹೊರಡುವ ಮುನ್ನ, ಕಾಂಪೌಂಡ್ ಗೇಟ್ ತೆರೆದಿದ್ದಾಗ, ಬೀದಿ ನಾಯಿಯೊಂದು ಒಳಗೆ ಓಡಿ ಹುಡುಗನ ಮೇಲೆ ಎರಗಿ, ಅವನ ತೋಳುಗಳು, ಕಾಲುಗಳು ಮತ್ತು ತೊಡೆಯನ್ನು ಕಚ್ಚಿದೆ. ಅವನ ಕಿರುಚಾಟ ಕೇಳಿ ಮುತ್ತುಸ್ವಾಮಿ ಮತ್ತು ಇತರ ಕುಟುಂಬ ಸದಸ್ಯರು ಹೊರಗೆ ಓಡಿ ಬಂದಿದ್ದರು.

1 ನಿಮಿಷ 38 ಸೆಕೆಂಡುಗಳ ಈ ದೃಶ್ಯದಲ್ಲಿ ನಾಯಿಯು ಮುತ್ತುಸ್ವಾ ತನ್ನ ಮಗನನ್ನು ರಕ್ಷಿಸಲು ಪ್ರಯತ್ನಿಸುತ್ತಿರುವಾಗ ಅವರ ಕಾಲು ಮತ್ತು ತೊಡೆಯನ್ನುಕಚ್ಚುತ್ತಿರುವುದನ್ನು ಕಾಣಬಹುದು. ತಂದೆ ಮತ್ತು ಮಗನಿಬ್ಬರನ್ನೂ ಮಧುರೈ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸೆಂಥಿಲ್​​ಗೆ ದೇಹದ ಮೂರು ಕಡೆಗಳಲ್ಲಿ ಹೊಲಿಗೆ ಹಾಕಲಾಗಿದೆ. ರೇಬೀಸ್ ವಿರೋಧಿ ಚುಚ್ಚುಮದ್ದು ನೀಡಲಾಯಿತು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ