ಭಯೋತ್ಪಾದಕರನ್ನು ಸದೆಬಡಿಯುವ ಕೇಂದ್ರದ ಸಂಕಲ್ಪದೊಂದಿಗೆ ನಾವಿದ್ದೇವೆ: ಡಿಕೆ ಶಿವಕುಮಾರ್

ಅರುಣ್​ ಕುಮಾರ್​ ಬೆಳ್ಳಿ

Updated on: Apr 25, 2025 | 11:33 AM

ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ನಡೆದಿರುವ ಹಲ್ಲೆ ಬಹಳ ಸೂಕ್ಷ್ಮವಾದ ವಿಷಯ, ಒಬ್ಬರನ್ನೊಬ್ಬರು ಟೀಕಿಸುವ ಪರಸ್ಪರ ದೋಷಾರೋಪಣೆಗಳನ್ನು ಮಾಡುವ ಸಂದರ್ಭ ಇದಲ್ಲ, ಎಲ್ಲರೂ ಬಹಳ ವಿವೇಕದಿಂದ ವರ್ತಿಸುವ ಅವಶ್ಯಕತೆ ಇದೆ, ಬೇರೆ ಯಾರಾದರೂ ಉಗ್ರರ ದಾಳಿಯ ಮೇಲೆ ಕಾಮೆಂಟ್ ಮಾಡಿದ್ದರೆ ಅದಕ್ಕೆ ಅವರು ಮಾತ್ರ ಜವಾಬ್ದಾರರರು ಎಂದು ಶಿವಕುಮಾರ್ ಹೇಳಿದರು.

ಮೈಸೂರು, ಏಪ್ರಿಲ್ 25: ಒಂದು ಜವಾಬ್ದಾರಿಯುತ ಪಕ್ಷದ ರಾಜ್ಯಾಧ್ಯಕ್ಷ ಮತ್ತು ರಾಜ್ಯದ ಉಪ ಮುಖ್ಯಮಂತ್ರಿಯೂ ಆಗಿರುವುದರಿಂದ ತಾನು ಪಹಲ್ಗಾಮ್ ಭಯೋತ್ಪಾದಕರ ದಾಳಿಯ (Pahelgam terror attack) ಬಗ್ಗೆ ಏನನ್ನೂ ಕಾಮೆಂಟ್ ಮಾಡಲ್ಲ, ಮಾತಾಡಿದರೆ ಅದನ್ನೇ ಲೀಡ್ ಮಾಡಿಕೊಂಡು ಜನ ಟೀಕೆ ಮಾಡಲಾರಂಭಿಸುತ್ತಾರೆ ಎಂದು ಡಿಕೆ ಶಿವಕುಮಾರ್ ಹೇಳಿದರು. ಬೇರೆ ದೇಶದ ಜನ ನಮ್ಮ ದೇಶದಲ್ಲಿನ ಶಾಂತಿ ಕದಡುವಂತೆ ಮಾಡಿದ್ದಾರೆ, ನಮ್ಮ ಜನರಿಗೆ ಶಾಂತಿ ಮತ್ತು ನೆಮ್ಮದಿಯಿಂದ ಬದುಕುವುದು ಬೇಕಿದೆ, ಉಗ್ರರನ್ನು ಸದೆಬಡಿಯುವ ಸಂಕಲ್ಪ ಕೇಂದ್ರ ಸರ್ಕಾರ ಮಾಡಿಕೊಂಡಿದೆ, ಕೇಂದ್ರದೊಂದಿಗೆ ನಾವಿದ್ದೇವೆ ಎಂದು ಶಿವಕುಮಾರ್ ಹೇಳಿದರು.

ಇದನ್ನೂ ಓದಿ: ಧರ್ಮ, ಜಾತಿಯ ಆಧಾರಕ್ಕಿಂತ ರಾಷ್ಟ್ರೀಯ ಏಕತೆ ಅಗತ್ಯ : ಭಯೋತ್ಪಾದಕ ದಾಳಿಯನ್ನು ಖಂಡಿಸಿದ ಸದ್ಗುರು

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.