ಸಿಇಟಿ 2026: ಸೀಟ್​​ ಹಂಚಿಕೆ ಹೇಗೆ ನಡೆಯುತ್ತೆ? ಇಲ್ಲಿದೆ ಮಹತ್ವದ ಮಾಹಿತಿ

Edited By:

Updated on: Jun 24, 2026 | 3:48 PM

ಮುಖ್ಯಾಂಶಗಳು

  • ಸಿಇಟಿ 2026ರ ಆಪ್ಷನ್ ಎಂಟ್ರಿ ಮತ್ತು ಕೋರ್ಸ್ ಆಯ್ಕೆ ಪ್ರಕ್ರಿಯೆ
  • KEA ಕಾರ್ಯನಿರ್ವಾಹಕ ನಿರ್ದೇಶಕರಿಂದ ಮಹತ್ವದ ಮಾಹಿತಿ
  • ಮೆರಿಟ್ ಆಧರಿಸಿ ಕೌನ್ಸಿಲಿಂಗ್‌ನಲ್ಲಿ ಭಾಗವಹಿಸುವಂತೆ ಮನವಿ

CET Exam 2026: ಕೆಇಎ ನಿರ್ದೇಶಕ ಹೆಚ್. ಪ್ರಸನ್ನ ಅವರು ಸಿಇಟಿ 2026ರ ಆಪ್ಷನ್ ಎಂಟ್ರಿ ಮತ್ತು ಕೋರ್ಸ್ ಆಯ್ಕೆ ಪ್ರಕ್ರಿಯೆ ಕುರಿತು ವಿದ್ಯಾರ್ಥಿಗಳಿಗೆ ಸಮಗ್ರ ಮಾರ್ಗದರ್ಶನ ನೀಡಿದ್ದಾರೆ. ವೆರಿಫಿಕೇಶನ್ ಸ್ಲಿಪ್ ಪರಿಶೀಲನೆ, ಮೀಸಲಾತಿ ಕ್ಲೈಮ್‌ಗಳ ಸರಿಪಡಿಸುವಿಕೆ, ಕೌನ್ಸಿಲಿಂಗ್ ಮೂಲಕ ಸೀಟು ಪಡೆಯುವ ಮಹತ್ವ ಹಾಗೂ ನೇರ ಪ್ರವೇಶದ ಕುರಿತು ಎಚ್ಚರಿಕೆಗಳನ್ನು ಅವರು ವಿವರಿಸಿದ್ದಾರೆ. ಪೋಷಕರು ಮತ್ತು ವಿದ್ಯಾರ್ಥಿಗಳು ಸರಿಯಾದ ಮಾಹಿತಿ ಪಡೆದು ವ್ಯವಸ್ಥಿತವಾಗಿ ಸೀಟು ಆಯ್ಕೆ ಮಾಡಿಕೊಳ್ಳುವಂತೆ ಮನವಿ ಮಾಡಿದ್ದಾರೆ.

ಬೆಂಗಳೂರು, ಜೂನ್​​ 24: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಅವರು ಸಿಇಟಿ 2026ರ ಆಪ್ಷನ್ ಎಂಟ್ರಿ ಮತ್ತು ಕೋರ್ಸ್ ಆಯ್ಕೆ ಪ್ರಕ್ರಿಯೆ ಕುರಿತು ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ ನೀಡಿದ್ದಾರೆ. ಎಂಜಿನಿಯರಿಂಗ್ ಸೀಟುಗಳಲ್ಲಿ ಶೇ.45 ಕೆಇಎ ಮೂಲಕ ಹಂಚಿಕೆಯಾಗಲಿದ್ದು, ಕಡಿಮೆ ಶುಲ್ಕದಲ್ಲಿ ಸೀಟು ಪಡೆಯಲು ಇದು ಉತ್ತಮ ಅವಕಾಶವಾಗಿದೆ. ಪೋಷಕರು ನೇರ ಪ್ರವೇಶ ಅಥವಾ ಖಾಸಗಿ ಕಾಲೇಜುಗಳ ಆಮಿಷಗಳಿಗೆ ಬಲಿಯಾಗದೆ, ಮೆರಿಟ್ ಆಧರಿಸಿ ಕೆಇಎ ಕೌನ್ಸಿಲಿಂಗ್‌ನಲ್ಲಿ ಭಾಗವಹಿಸುವಂತೆ ಅವರು ಮನವಿ ಮಾಡಿದ್ದಾರೆ. ಕಳೆದ ವರ್ಷದ ರ್ಯಾಂಕ್​​ ವಿವರಗಳನ್ನು ಆಧರಿಸಿ ಹೋಮ್‌ವರ್ಕ್ ಮಾಡಿಕೊಂಡು, ಪ್ರಾಶಸ್ತ್ಯದ ಆಧಾರದ ಮೇಲೆ ಆಪ್ಷನ್‌ಗಳನ್ನು ನಮೂದಿಸುವಂತೆ ಅವರು ಸಲಹೆ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: Jun 24, 2026 03:47 PM
Follow Us