ತಾಕತ್ ಇದ್ರೆ ತಡೆಯಿರಿ ನೋಡೋಣ: ಚೈತ್ರಾ ಕುಂದಾಪುರ ಸವಾಲು

Updated on: Nov 21, 2024 | 6:27 PM

Bigg Boss Kannada: ಕಳೆದ ವಾರ ಶಿಶಿರ್​ಗೆ ಕ್ಷಮೆ ಕೇಳುತ್ತಿದ್ದ ಚೈತ್ರಾ ಕುಂದಾಪುರ, ಈ ವಾರ ತಾಕತ್ ಇದ್ದರೆ ತಡೆಯಿರಿ ನೋಡೋಣ ಎಂದು ಸವಾಲು ಹಾಕಿದ್ದಾರೆ. ಶಿಶಿರ್​ಗೆ ಮಾತ್ರವಲ್ಲ ಇಡೀ ತಂಡಕ್ಕೆ ಸವಾಲು ಹಾಕಿದ್ದಾರೆ.

ಬಿಗ್​ಬಾಸ್ ಮನೆಯಲ್ಲಿ ಚೈತ್ರಾ ಕುಂದಾಪುರ ಚೆನ್ನಾಗಿ ಆಟ ಆಡುತ್ತಿದ್ದಾರೆ. ಕಳೆದ ವಾರಾಂತ್ಯದಲ್ಲಿ ತಪ್ಪು ಮಾಡಿ ಸುದೀಪ್ ಅವರಿಂದ ಬೈಸಿಕೊಂಡಿದ್ದ ಚೈತ್ರಾ, ಆ ನಂತರ ಆಟದಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ. ಸುದೀಪ್ ಎಪಿಸೋಡ್​ ಬಳಿಕ ತುಸು ಬೇಸರದಲ್ಲಿದ್ದ ಚೈತ್ರಾ ಆ ನಂತರ ಗಟ್ಟಿಯಾಗಿ ಆಟ ಆಡುತ್ತಿದ್ದಾರೆ. ಕಳೆದ ವಾರದ ಟಾಸ್ಕ್​ನಲ್ಲಿ ಚೈತ್ರಾ ಹಾಗೂ ಶಿಶಿರ್ ಪರಸ್ಪರ ಜಗಳ ಮಾಡಿಕೊಂಡಿದ್ದರು. ಈ ವಾರ ಅದೇ ಜಗಳವನ್ನೇ ಮುಂದುವರೆಸಿದ್ದಾರೆ. ಕಳೆದ ವಾರ ಶಿಶಿರ್​ಗೆ ಕ್ಷಮೆ ಕೇಳುತ್ತಿದ್ದ ಚೈತ್ರಾ, ಈ ವಾರ ತಾಕತ್ ಇದ್ದರೆ ತಡೆಯಿರಿ ನೋಡೋಣ ಎಂದು ಸವಾಲು ಹಾಕಿದ್ದಾರೆ. ಶಿಶಿರ್​ಗೆ ಮಾತ್ರವಲ್ಲ ಇಡೀ ತಂಡಕ್ಕೆ ಸವಾಲು ಹಾಕಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More