ನರಕದವರ ನೋವು ಹೆಚ್ಚಾಗಲು ಕಾರಣವಾದ ಚೈತ್ರಾ ಕುಂದಾಪುರ? ಎಲ್ಲ ಮುಗಿದ ಬಳಿಕ ಕಣ್ಣೀರು
‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡ ಹೊಸ ಪ್ರೋಮೋದಲ್ಲಿ ಚೈತ್ರಾ ಕುಂದಾಪುರ ಅವರ ವೈಫಲ್ಯ ಕಾಣಿಸಿದೆ. ಟಾಸ್ಕ್ ಸೋತಿದ್ದಕ್ಕೆ ನರಕದವರು ಬೇಸರ ಮಾಡಿಕೊಂಡಿದ್ದಾರೆ. ಚೈತ್ರಾ ಕೂಡ ಕ್ಯಾಮೆರಾ ಮುಂದೆ ಬಂದು ಅತ್ತಿದ್ದಾರೆ. ಎರಡನೇ ವಾರದಲ್ಲಿ ಪೈಪೋಟಿ ಜೋರಾಗಿದೆ. ನರಕದಿಂದ ಸ್ವರ್ಗಕ್ಕೆ ಬರಬೇಕು ಎಂದು 7 ಮಂದಿ ಕಷ್ಟಪಡುತ್ತಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ ಮನೆ ಎರಡು ಭಾಗವಾಗಿದ್ದು, ಒಂದು ಕಡೆ ಸ್ವರ್ಗದವರು ಇದ್ದಾರೆ. ಇನ್ನೊಂದು ಕಡೆ ನರಕದವರು ಇದ್ದಾರೆ. ಈ ಎರಡು ತಂಡಗಳ ನಡುವೆ ಟಾಸ್ಕ್ ನಡೆಯುತ್ತಿದೆ. ಒಂದು ವೇಳೆ ಟಾಸ್ಕ್ ಗೆದ್ದರೆ ನರಕದವರಿಗೆ ಉತ್ತಮವಾದ ಊಟ ಸಿಗುತ್ತದೆ. ಇಲ್ಲದಿದ್ದರೆ ಗಂಜಿ, ಮೊಸರನ್ನ ತಿಂದು ಬದುಕಬೇಕಾಗುತ್ತದೆ. ನರಕದವರು ಹೊಸ ಟಾಸ್ಕ್ ಸೋಲಲು ಚೈತ್ರಾ ಕುಂದಾಪುರ ಕಾರಣ ಆದಂತಿದೆ. ಕ್ಯಾಮೆರಾ ಎದುರು ಬಂದು ಅವರು ಕಣ್ಣೀರು ಹಾಕಿದ್ದಾರೆ. ಟಾಸ್ಕ್ ಸೋತಿದ್ದರಿಂದ ನರಕದ ಮಂದಿಯ ಕಷ್ಟ ಇನ್ನಷ್ಟು ಹೆಚ್ಚಾಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.