ಹಿರೇಹಡಗಲಿ ಮಠದ ಅಭಿನವ ಹಾಲಶ್ರೀ ಸ್ವಾಮೀಜಿ ಸಮಕ್ಷಮದಲ್ಲಿ ಚೈತ್ರಾ ಕುಂದಾಪರ ಡೀಲ್ ಕುದುರಿಸುತ್ತಿದ್ದಳೇ?

|

Updated on: Sep 14, 2023 | 12:24 PM

ಹಣದ ಮಾತುಕತೆ ಸ್ವಾಮೀಜಿ ಸಮ್ಮುಖದಲ್ಲೇ ನಡೆಯುತಿತ್ತು ಅಂತ ಹೇಳಲಾಗುತ್ತಿದೆ. ಕರಾವಳಿ ಕರ್ನಾಟಕ ಭಾಗದವರಾಗಿರುವ ಚೈತ್ರಾ ಮತ್ತು ಗೋವಿಂದ ಬಾಬುಗೆ ಕಲ್ಯಾಣ ಕರ್ನಾಟಕ ಮತ್ತು ಅಷ್ಟೇನೂ ಖ್ಯಾತವಲ್ಲದ ಮಠದ ಸ್ವಾಮೀಜಿ ಜೊತೆ ಹೇಗೆ ಸಂಪರ್ಕ ಉಂಟಾಯಿತು ಅನ್ನೋದು ಯಕ್ಷಪ್ರಶ್ನೆಯೇ! ಫೋಟೋ ಗಮನಿಸಿ, ಚೈತ್ರಾ ಒಬ್ಬ ಗೃಹಿಣಿಯಂತೆ ಮಠಕ್ಕೆ ಭೇಟಿ ನೀಡಿದ್ದಾಳೆ!

ಬಳ್ಳಾರಿ: ಚೈತ್ರಾ ಕುಂದಾಪರ (Chaitra Kundapura) ಇಂದು ಬೆಳಗ್ಗೆ ಬೆಂಗಳೂರಿನ ಸಿಸಿಬಿ ಕಚೇರಿಗೆ ಕರೆತಂದಾಗ, ಒಬ್ಬ ಸ್ವಾಮೀಜಿ ಹೆಸರು ಉಲ್ಲೇಖಿಸಿದ್ದಳು, ಅವರು ಯಾತಿ ಅನ್ನೋದು ಗೊತ್ತಾಗಿದೆ. ಬಳ್ಳಾರಿ ಜಿಲ್ಲೆಯ ಹಿರೇಹಡಗಲಿಯಲ್ಲಿರುವ ಮಠವೊಂದರ ಸ್ವಾಮೀಜಿಯಾಗಿರುವ ಅಭಿನವ ಹಾಲಶ್ರೀ ಸ್ವಾಮೀಜಿ (Abhinava Halashri Swamiji) ಚೈತ್ರಾ ಕುಂದಾಪುರ ವಂಚನೆ ಪ್ರಕರಣದಲ್ಲಿ ಅರೋಪಿ ನಂ 3 ಆಗಿದ್ದಾರೆ. ಇದರಲ್ಲಿ ಸ್ವಾಮೀಜಿ ಪಾತ್ರ ಏನು ಅಂತ ವಿಚಾರಣೆ ಬಳಿಕವೇ ಗೊತ್ತಾಗಬೇಕು. ಚುನಾವಣೆಗೂ ಮುನ್ನ ಚೈತ್ರಾ ಕುಂದಾಪರ, ಗೋವಿಂದ ಬಾಬು ಪೂಜಾರಿ (Govind Babu Pujari) ಜೊತೆ ಮಠಕ್ಕೆ ಭೇಟಿ ನೀಡಿದ ಮತ್ತು ಅಭಿನವ ಹಾಲಶ್ರೀ ಸ್ವಾಮಿ ಜೊತೆ ತೆಗೆಸಿಕೊಂಡ ಫೋಟೋಗಳು ಮಾಧ್ಯಮಗಳಿಗೆ ಸಿಕ್ಕಿವೆ. ಹಣದ ಮಾತುಕತೆ ಸ್ವಾಮೀಜಿ ಸಮ್ಮುಖದಲ್ಲೇ ನಡೆಯುತಿತ್ತು ಅಂತ ಹೇಳಲಾಗುತ್ತಿದೆ. ಕರಾವಳಿ ಕರ್ನಾಟಕ ಭಾಗದವರಾಗಿರುವ ಚೈತ್ರಾ ಮತ್ತು ಗೋವಿಂದ ಬಾಬುಗೆ ಕಲ್ಯಾಣ ಕರ್ನಾಟಕ ಮತ್ತು ಅಷ್ಟೇನೂ ಖ್ಯಾತವಲ್ಲದ ಮಠದ ಸ್ವಾಮೀಜಿ ಜೊತೆ ಹೇಗೆ ಸಂಪರ್ಕ ಉಂಟಾಯಿತು ಅನ್ನೋದು ಯಕ್ಷಪ್ರಶ್ನೆಯೇ! ಫೋಟೋ ಗಮನಿಸಿ, ಚೈತ್ರಾ ಒಬ್ಬ ಗೃಹಿಣಿಯಂತೆ ಮಠಕ್ಕೆ ಭೇಟಿ ನೀಡಿದ್ದಾಳೆ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ