ಸ್ವಾಮೀಜಿಯನ್ನು ಬಂಧಿಸಿದರೆ ಸತ್ಯ ಹೊರಬರುತ್ತದೆ ಅನ್ನುತ್ತಾಳೆ ಚೈತ್ರಾ ಕುಂದಾಪುರ, ಸ್ವಾಮೀಜಿ ಯಾರು ಅಂತ ಪೊಲೀಸರು ಹೇಳಬೇಕು!
ಆಕೆ ಮತ್ತು ಇಂದಿರಾ ಕ್ಯಾಂಟೀನ್ ನಡುವೆ ಎತ್ತಣ ಸಂಬಂಧ ಅಂತ ಪೊಲೀಸರ ವಿಚಾರಣೆ ಬಳಿಕವೇ ಗೊತ್ತಾಗಬೇಕು. ಅಲ್ಲಾ ತಾಯಿ, ಪ್ರಕರಣದಲ್ಲಿ ಆರೋಪಿ ನಂ ವನ್ ನೀನೇ ಆಗಿದ್ದೀಯಲ್ಲ ಅಂತ ಕೇಳಿದರೆ, ಬೇಗ ಹೊರಬರುತ್ತೇನೆ ಅಂತ ಆತ್ಮವಿಶ್ವಾಸದಿಂದ ಹೇಳುತ್ತಾ ಒಳಗಡೆ ಹೋಗುತ್ತಾಳೆ.
ಬೆಂಗಳೂರು: ಜಟ್ಟಿಯೊಬ್ಬ ಚಿತ್ತಾದರೂ ಮೀಸೆ ತನ್ನ ಮಣ್ಣಾಗಿಲ್ಲ ಅಂದಿದ್ದನಂತೆ! ಹಾಗಿದೆ ಈಯಮ್ಮನ ವರಸೆ. ವಿಧಾನ ಸಭಾ ಚುನಾವಣೆಯಲ್ಲಿ ಉದ್ಯಮಿ ಗೋವಿಂದ ಬಾಬು ಪೂಜಾರಿಗೆ (Govinda Babu Pujari) ಟಿಕೆಟ್ ಕೊಡಿಸುವ ಭರವಸೆ ನೀಡಿ ರೂ. ಕೋಟಿ ಹಣ ಪೀಕಿ ವಂಚಿಸಿರುವ ಅರೋಪದಲ್ಲಿ ಅರೆಸ್ಟ್ ಆಗಿರುವ ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪರಳನ್ನು ಬೆಂಗಳೂರು ಸಿಸಿಬಿ ಅಧಿಕಾರಿಗಳು (CCB sleuths) ವಿಚಾರಣೆಗೆ ಕರೆ ತಂದಿದ್ದಾರೆ. ಸ್ಟೇಷನ್ ಒಳಗೆ ಹೋಗುವಾಗ ಆಕೆ ಆಡಿದ ಮಾತುಗಳನ್ನು ಕೇಳಿಸಿಕೊಳ್ಳಿ. ಯಾವುದೇ ಸ್ವಾಮೀಜಿ (Swamiji) ಅಂತೆ, ಅವರನ್ನು ಸೆರೆ ಹಿಡಿದರೆ ಸತ್ಯ ಬಯಲಿಗೆ ಬರುತ್ತೆ ಎಂದು ಹೇಳುವ ಚೈತ್ರಾ ಇಂದಿರಾ ಕ್ಯಾಂಟೀನ್ ಬಿಲ್ ಗಾಗಿ ನಡೆದಿರುವ ಷಡ್ಯಂತ್ರಕ್ಕೆ ಬಲಿಪಶುವಾಗಿದ್ದೇನೆ ಅನ್ನುತ್ತಾಳೆ. ಆಕೆ ಮತ್ತು ಇಂದಿರಾ ಕ್ಯಾಂಟೀನ್ ನಡುವೆ ಎತ್ತಣ ಸಂಬಂಧ ಅಂತ ಪೊಲೀಸರ ವಿಚಾರಣೆ ಬಳಿಕವೇ ಗೊತ್ತಾಗಬೇಕು. ಅಲ್ಲಾ ತಾಯಿ, ಪ್ರಕರಣದಲ್ಲಿ ಆರೋಪಿ ನಂ ವನ್ ನೀನೇ ಆಗಿದ್ದೀಯಲ್ಲ ಅಂತ ಕೇಳಿದರೆ, ಬೇಗ ಹೊರಬರುತ್ತೇನೆ ಅಂತ ಆತ್ಮವಿಶ್ವಾಸದಿಂದ ಹೇಳುತ್ತಾ ಒಳಗ್ಹೋಗುತ್ತಾಳೆ!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
