ವೈದ್ಯರ ಸಲಹೆ ಮೇರೆಗೆ ಬೆಡ್ ರೆಸ್ಟ್ ನಲ್ಲಿರುವ ನಾನು ಚೈತ್ರಾ ಕುಂದಾಪರಗೆ ಹೇಗೆ ಆಶ್ರಯ ಕೊಟ್ಟೇನು, ಅವಳು ನನ್ನ ಗೆಳತಿಯೇ ಅಲ್ಲ: ಸುರೈಯ ಅಂಜುಂ
ಅವಳ ವಿರುದ್ಧ 8 ನೇ ತಾರೀಖು ದೂರು ದಾಖಲಾಗಿದೆ ಮತ್ತು ನಿನ್ನೆ ಅವಳನ್ನು ಬಂಧಿಸಲಾಗಿದೆ. 5 ದಿನಗಳಲ್ಲಿ ಇದೆಲ್ಲ ನಡೆದುಹೋಗಿದೆ, ಇನ್ನು ತಾನು ಅವಳಿಗೆ 7 ದಿನ ಆಶ್ರಯ ಹೇಗೆ ಕೊಡಲಾದೀತು ಎಂದು ಅಂಜುಂ ಹೇಳಿದರು. ವಿಚಾರಣೆಗೆ ಹಾಜರಾಗುವಂತೆ ಸಿಸಿಬಿಯಿಂದ ಇದುವೆರೆಗೆ ತನಗೆ ಯಾವುದೇ ನೋಟೀಸ್ ಬಂದಿಲ್ಲ ಎಂದು ಅವರು ಹೇಳಿದರು.
ಮಂಗಳೂರು: ಬಂಧಿತ ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪರ (Chaitra Kundapura) ಮತ್ತು ತನ್ನ ನಡುವೆ ಯಾವುದೇ ಸ್ನೇಹವಿಲ್ಲ, ಅವಳನ್ನು ಕಂಡು ವರ್ಷ ಮೇಲಾಯಿತು, ಉಡುಪಿ ಮತ್ತು ಮಂಗಳೂರಲ್ಲಿ ನಡೆಯತ್ತಿದ್ದ ಕಾರ್ಯಕ್ರಮಗಳಲ್ಲಷ್ಟೇ ಅವಳ ಮತ್ತು ತನ್ನ ಭೇಟಿಯಾಗುತಿತ್ತು, ಇನ್ನು ಅವಳಿಗೆ ಆಶ್ರಯ ಕೊಡುವ ಪ್ರಶ್ನೆ ಎಲ್ಲಿಂದ ಉದ್ಭವಿಸುತ್ತದೆ ಎಂದು ಚೈತ್ರಾ ಜೊತೆ ಹೆಸರು ಥಳುಕು ಹಾಕಿಕೊಂಡಿರುವ ಕಾಂಗ್ರೆಸ್ ಪಕ್ಷದ ಮಿಡಿಯಾ ವಕ್ತಾರೆ ಸುರಯ್ಯ ಅಂಜುಂ (Suraiya Anjum) ಹೇಳಿದರು. ಟಿವಿ9 ಜೊತೆ ಫೋನ್ ಸಂಭಾಷಣೆ (phone conversation) ನಡೆಸಿದ ಅಂಜುಂ, ಟಿವಿ9 ಕನ್ನಡ ವಾಹಿನಿಯ ವರದಿಗಳಲ್ಲಿ ಕಾಣಿಸಿಕೊಂಡಿರುವ ತಮ್ಮ ಮತ್ತು ಚೈತ್ರಾಳ ಫೋಟೋ 5 ವರ್ಷಗಳಷ್ಟು ಹಿಂದಿನದು ಎಂದು ಹೇಳಿದರು. ಅವಳ ವಿರುದ್ಧ 8 ನೇ ತಾರೀಖು ದೂರು ದಾಖಲಾಗಿದೆ ಮತ್ತು ನಿನ್ನೆ ಅವಳನ್ನು ಬಂಧಿಸಲಾಗಿದೆ. 5 ದಿನಗಳಲ್ಲಿ ಇದೆಲ್ಲ ನಡೆದುಹೋಗಿದೆ, ಇನ್ನು ತಾನು ಅವಳಿಗೆ 7 ದಿನ ಆಶ್ರಯ ಹೇಗೆ ಕೊಡಲಾದೀತು ಎಂದು ಅಂಜುಂ ಹೇಳಿದರು. ವಿಚಾರಣೆಗೆ ಹಾಜರಾಗುವಂತೆ ಸಿಸಿಬಿಯಿಂದ ಇದುವೆರೆಗೆ ತನಗೆ ಯಾವುದೇ ನೋಟೀಸ್ ಬಂದಿಲ್ಲ ಎಂದು ಅವರು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ