ಬಿಜೆಪಿಯೊಂದಿಗೆ ಮೈತ್ರಿ ಆಗೋದು ನಿಶ್ಚಿತ, ದೆಹಲಿಗೆ ಹೋಗಿ ಆ ಪಕ್ಷದ ವರಿಷ್ಠರೊಂದಿಗೆ ಚರ್ಚಿಸಲಿದ್ದೇನೆ: ಹೆಚ್ ಡಿ ಕುಮಾರಸ್ವಾಮಿ

ಸಿದ್ದರಾಮಯ್ಯ ಜೆಡಿಎಸ್ ಯಾಕೆ ಬಿಟ್ಟರು, ಬಿಟ್ಟ ನಂತರ ಯಾವ್ಯಾವ ಪಕ್ಷಗಳ ಕದ ತಟ್ಟಿದರು, ಯಾರ ಮಂತ್ರಿಮಂಡಲದಲ್ಲಿ ಮಂತ್ರಿಯಾಗಲು ಪ್ರಯತ್ನಿಸಿದರು, 2004 ರಲ್ಲಿ ಅವರು ಮಾಡಿದ್ದೇನು, 2008 ರಲ್ಲಿ ಮಾಡಿದ್ದು ಎಲ್ಲ ಇತಿಹಾಸ ತಮ್ಮಲ್ಲಿದೆ ಎಂದು ಕುಮಾರಸ್ವಾಮಿ ಹೇಳಿದರು.

ಬಿಜೆಪಿಯೊಂದಿಗೆ ಮೈತ್ರಿ ಆಗೋದು ನಿಶ್ಚಿತ, ದೆಹಲಿಗೆ ಹೋಗಿ ಆ ಪಕ್ಷದ ವರಿಷ್ಠರೊಂದಿಗೆ ಚರ್ಚಿಸಲಿದ್ದೇನೆ: ಹೆಚ್ ಡಿ ಕುಮಾರಸ್ವಾಮಿ
|

Updated on: Sep 13, 2023 | 7:37 PM

ಹಾಸನ: ನಮ್ಮ ರಾಜ್ಯದ ರಾಜಕಾರಣಿಗಳು (state political leaders) ಮಿಮಿಕ್ರಿ ಕಲೆಯಲ್ಲಿ ಪರಿಣಿತಿ ಸಾಧಿಸುತ್ತಿದ್ದಾರೆ ಅಂದರೆ ಆಭಾಸ ಅನಿಸದು. ಪ್ರಮುಖ ನಾಯಕರು ಮಾತಾಡುವಾಗ ತಮ್ಮ ಎದುರಾಳಿ ಪಕ್ಷಗಳ ನಾಯಕರ ಮಿಮಿಕ್ರಿ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳುತ್ತಿದ್ದಾರೆ! ಹಾಸನದಲ್ಲಿ ಇಂದು ಪತ್ರಿಕಾ ಗೋಷ್ಟಿ ನಡೆಸಿ ಮಾತಾಡಿದ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ (HD Kumaraswamy), ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಬಿಜೆಪಿಗೆ ನನ್ನ ಹೆಣವೂ ಹೋಗೋದಿಲ್ಲ ಅಂದಿದನ್ನು ಮಿಮಿಕ್ರಿ ಮಾಡುತ್ತಾ ಹೇಳಿದರು. ಮುಂದುವರಿದು ಮಾತಾಡಿದ ಅವರು, ಸಿದ್ದರಾಮಯ್ಯ ಜೆಡಿಎಸ್ ಯಾಕೆ ಬಿಟ್ಟರು, ಬಿಟ್ಟ ನಂತರ ಯಾವ್ಯಾವ ಪಕ್ಷಗಳ ಕದ ತಟ್ಟಿದರು, ಯಾರ ಮಂತ್ರಿಮಂಡಲದಲ್ಲಿ ಮಂತ್ರಿಯಾಗಲು ಪ್ರಯತ್ನಿಸಿದರು, 2004 ರಲ್ಲಿ ಅವರು ಮಾಡಿದ್ದೇನು, 2008 ರಲ್ಲಿ ಮಾಡಿದ್ದು ಎಲ್ಲ ಇತಿಹಾಸ ತಮ್ಮಲ್ಲಿದೆ ಎಂದು ಹೇಳಿದರು. ಜೆಡಿಎಸ್-ಬಿಜೆಪಿ ಮೈತ್ರಿಯ ಬಗ್ಗೆ ಮಾತಾಡಿದ ಅವರು ಬಹಳ ಬಿರುಸಿನಿಂದ ಮಾತುಕತೆ ನಡೆಯುತ್ತಿವೆ, ಇವತ್ತು ದೆಹಲಿಯಲ್ಲೂ ಚರ್ಚೆ ನಡೆಯುತ್ತಿದೆ, ತಾವು ಸಹ ಅಲ್ಲಿಗೆ ತೆರಳಿ ಬಿಜೆಪಿ ವರಿಷ್ಠರ ಜೊತೆ ಮಾತುಕತೆ ನಡೆಸುವುದಾಗಿ ಹೇಳಿದರು. ಬಿಜೆಪಿಯೊಂದಿಗೆ ಮೈತ್ರಿ ಏರ್ಪಡೋದು ನಿಶ್ಚಿತ ಎಂದು ಅವರು ಸ್ಪಷ್ಟಪಡಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us