ವಿಪಕ್ಷ ನಾಯಕನಾಗಲು ನನ್ನಲ್ಲಿ ಹಿರಿತನ, ಯೋಗ್ಯತೆ ಮತ್ತು ಅರ್ಹತೆ ಇದೆ, ಆದರೆ ಅದಕ್ಕಾಗಿ ಲಾಬಿ ಮಾಡಲಾರೆ: ಬಸನಗೌಡ ಪಾಟೀಲ್ ಯತ್ನಾಳ್
ಯಡಿಯೂರಪ್ಪತಮ್ಮ ಮಗ ಬಿವೈ ವಿಜಯೇಂದ್ರಗೆ ಬಿಜೆಪಿ ರಾಜ್ಯಾಧ್ಯಕ್ಷನ ಸ್ಥಾನ ಕೊಡಿಸಲು ಪಕ್ಷದ ವರಿಷ್ಠರೊಂದಿಗೆ ಲಾಬಿ ಮಾಡುತ್ತಿರುವ ಬಗ್ಗೆ ಕೇಳಿದಾಗ, ಅವರೇನು ಮಾಡುತ್ತಿದ್ದಾರೆ ಅಂತ ಗೊತ್ತಿಲ್ಲ, ಆದರೆ ತಾನು ಯಾವ ಸ್ಥಾನಕ್ಕೂ ಲಾಬಿ ಮಾಡಲ್ಲ ಎಂದು ಅವರು ಹೇಳಿದರು.
ಚಿಕ್ಕಬಳ್ಳಾಪುರ: ಸಂವಿಧಾನಾತ್ಮವಾಗಿ ಜೆಡಿಎಸ್ ಪಕ್ಷದ ನಾಯಕ ಹೆಚ್ ಡಿ ಕುಮಾರಸ್ವಾಮಿಯನ್ನು (HD Kumaraswamy) ವಿರೋಧ ಪಕ್ಷದ ನಾಯಕನಾಗಿ ಮಾಡಲು ಬರೋದಿಲ್ಲ, ಬಿಜೆಪಿ ಶಾಸಕನನ್ನೇ ಆ ಸ್ಥಾನಕ್ಕೆ ಅಯ್ಕೆ ಮಾಡಲಾಗುತ್ತದೆ, ಪಕ್ಷದ ವರಿಷ್ಠರು ಅಭಿಪ್ರಾಯ ಸಂಗ್ರಹಣೆಯಲ್ಲಿ ತೊಡಗಿರುವುದರಿಂದ ಅಯ್ಕೆ ಲೇಟಾಗುತ್ತಿದೆ ಎಂದು ಬಿಜೆಪಿ ಹಿರಿಯ ನಾಯಕ ಮತ್ತು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಹೇಳಿದರು. ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಯತ್ನಾಳ್; ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ (BS Yediyurappa) ತಮ್ಮ ಮಗ ಬಿವೈ ವಿಜಯೇಂದ್ರಗೆ (BY Vijayendra) ಬಿಜೆಪಿ ರಾಜ್ಯಾಧ್ಯಕ್ಷನ ಸ್ಥಾನ ಕೊಡಿಸಲು ಪಕ್ಷದ ವರಿಷ್ಠರೊಂದಿಗೆ ಲಾಬಿ ಮಾಡುತ್ತಿರುವ ಬಗ್ಗೆ ಕೇಳಿದಾಗ, ಅವರೇನು ಮಾಡುತ್ತಿದ್ದಾರೆ ಅಂತ ಗೊತ್ತಿಲ್ಲ, ಆದರೆ ತಾನು ಯಾವ ಸ್ಥಾನಕ್ಕೂ ಲಾಬಿ ಮಾಡಲ್ಲ ಎಂದು ಅವರು ಹೇಳಿದರು. ವಿರೋಧ ಪಕ್ಷದ ನಾಯಕ ಇಲ್ಲವೇ ರಾಜ್ಯಾಧ್ಯಕ್ಷನ ಸ್ಥಾನಕ್ಕೆ ಅವರ ಹೆಸರನ್ನು ಪರಿಗಣಿಸುವ ಬಗ್ಗೆ ಕೇಳಿದಾಗ ಅವರು, ತನ್ನ ಅರ್ಹತೆ, ಯೋಗ್ಯತೆ ಮತ್ತು ಹಿರಿತನ ಗಮನಿಸಿದ್ದೇಯಾದರೆ, ತಮ್ಮ ಹೆಸರನ್ನು ಪರಿಗಣಿಸಬೇಕು ಎಂದು ಹೇಳಿ, ತಾನು ಲಾಬಿ ಮಾಡುವುದಿಲ್ಲ ಅಂತ ಮತ್ತೊಮ್ಮೆ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ