‘ಸುದೀಪ್​ ಅನುಮತಿ ಕೊಟ್ಟರೆ ಪ್ರಶಾಂತ್​ ಸಂಬರಗಿ ವಿರುದ್ಧ ನಾನು ನ್ಯಾಯಾಲಯಕ್ಕೆ ಹೋಗ್ತೀನಿ’: ಚಕ್ರವರ್ತಿ ಚಂದ್ರಚೂಡ್​

| Updated By: ಮದನ್​ ಕುಮಾರ್​

Updated on: Aug 10, 2021 | 10:14 AM

ಬಿಗ್​ ಬಾಸ್​ನಲ್ಲಿ ತಾವು ಮಾಡಿದ ಬಹುತೇಕ ತಪ್ಪುಗಳಿಗೆ ಚಕ್ರವರ್ತಿ ಚಂದ್ರಚೂಡ್​ ಕಾರಣ ಎಂದು ಪ್ರಶಾಂತ್​ ಹೇಳುತ್ತಿರುವುದು ಚಂದ್ರಚೂಡ್​ ಅಸಮಾಧಾನಕ್ಕೆ ಗುರಿ ಆಗಿದೆ. ಹಾಗಾಗಿ ಅವರು ಕೋಪಗೊಂಡಿದ್ದಾರೆ.

ಬಿಗ್​ ಬಾಸ್​ ಕನ್ನಡ ಸೀಸನ್​ 8ರಲ್ಲಿ ಪ್ರಶಾಂತ್​ ಸಂಬರಗಿ ಮತ್ತು ಚಕ್ರವರ್ತಿ ಚಂದ್ರಚೂಡ್​ ಅವರು ಆಪ್ತವಾಗಿದ್ದರು. ಬಿಗ್​ ಬಾಸ್​ಗೆ ಬರುವುದಕ್ಕಿಂತಲೂ ಮುನ್ನವೇ ಅವರಿಬ್ಬರ ನಡುವೆ ಸ್ನೇಹವಿತ್ತು. ಆದರೆ ಬಿಗ್​ ಬಾಸ್​​ನಿಂದ ಹೊರಬಂದ ಬಳಿಕ ಬಿರುಕು ಮೂಡಿದೆ. ದೊಡ್ಮನೆಯಲ್ಲಿ ತಾವು ಮಾಡಿದ ಬಹುತೇಕ ತಪ್ಪುಗಳಿಗೆ ಚಕ್ರವರ್ತಿ ಚಂದ್ರಚೂಡ್​ ಕಾರಣ ಎಂದು ಪ್ರಶಾಂತ್​ ಹೇಳುತ್ತಿರುವುದು ಚಂದ್ರಚೂಡ್​ ಅಸಮಾಧಾನಕ್ಕೆ ಕಾರಣ ಆಗಿದೆ. ಹಾಗಾಗಿ ಅವರು ಕೋಪಗೊಂಡಿದ್ದಾರೆ. ಈ ಬಗ್ಗೆ ವಿಡಿಯೋ ಮೂಲಕ ತಿರುಗೇಟು ನೀಡಿದ್ದಾರೆ. ‘ಸುದೀಪ್​ ಸರ್​ ಅನುಮತಿ ಕೊಟ್ಟರೆ ನಿಮ್ಮ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಕ್ಕೆ ನಾನು ತಯಾರಿದ್ದೇನೆ’ ಎಂದು ಎಚ್ಚರಿಕೆ ನೀಡಿದ್ದಾರೆ.

‘ನಾಲ್ಕು ಜನರ ಪ್ರೀತಿ ಗಳಿಸಿದವನು ಆ ಪ್ರೀತಿಯನ್ನು ಉಳಿಸಿಕೊಳ್ಳಬೇಕಾದರೆ ತುಂಬ ಪ್ರಯತ್ನ ಪಡಬೇಕಾಗುತ್ತದೆ. ನಾನು ಈಗ ಅದೇ ಹಾದಿಯಲ್ಲಿ ಇದ್ದೀನಿ. ಒಂದು ಆಟ ಮುಗಿದಿದೆ. ಇನ್ನೊಂದು ಆಟ ಶುರುಮಾಡುತ್ತಿದ್ದೀರಿ. ಸಂಜನಾ ಗಲ್ರಾನಿ ನಿಮ್ಮನ್ನು ಹಂದಿ ಎಂದು ಕರೆದಾಗ ನನಗೆ ಫೋನ್​ ಮಾಡಿ ಸಲಹೆ ಕೇಳಿದ್ರಿ. ಬಿಗ್​ ಬಾಸ್​ ಮನೆಯಲ್ಲೂ ಮೆಂಟರ್​, ಗುರು ಎಂದೆಲ್ಲ ಹೇಳಿದ್ರಿ. ಆದರೆ ಈಗ ನೀವು ಮಾಡಿದ ಅಪರಾಧಗಳನ್ನೆಲ್ಲ ನನ್ನ ತಲೆ ಮೇಲೆ ಹಾಕುತ್ತಿದ್ದೀರಿ’ ಎಂದು ಚಂದ್ರಚೂಡ್​ ಹೇಳಿದ್ದಾರೆ.

ಇದನ್ನೂ ಓದಿ:

ಮಂಜು ಜತೆ ಫ್ರೆಂಡ್​ಶಿಪ್​ ಹಾಳಾಗೋಕೆ ಚಕ್ರವರ್ತಿ ಕಾರಣ; ಪ್ರಶಾಂತ್​ ಸಂಬರಗಿ ಗಂಭೀರ ಆರೋಪ

Bigg Boss Winner: ‘ನಾನು ಬಿಗ್​ ಬಾಸ್​ ವಿನ್ನರ್​’; ಎಲಿಮಿನೇಟ್​ ಆದ್ಮೇಲೂ ಸುದೀಪ್​ ಎದುರು ಪ್ರಶಾಂತ್​ ಸಂಬರಗಿ ಹೀಗೆ ಹೇಳಿದ್ದೇಕೆ?

Published on: Aug 10, 2021 09:54 AM