ಕೈ ನೋವು ಇದ್ದರೂ ಪ್ರಾಣಿಗಳಿಗೆ ಮೇವು ಸಿದ್ಧಪಡಿಸಿದ ದರ್ಶನ್​; ವಿಡಿಯೋ ವೈರಲ್​

Updated on: May 10, 2024 | 10:03 PM

ಪ್ರಾಣಿಗಳೆಂದರೆ ದರ್ಶನ್​ ಅವರಿಗೆ ಎಲ್ಲಿಲ್ಲದ ಪ್ರೀತಿ. ಅನೇಕ ಪ್ರಾಣಿಗಳನ್ನು ಅವರು ಸಾಕಿದ್ದಾರೆ. ಅವುಗಳನ್ನು ಬಹಳ ಪ್ರೀತಿಯಿಂದ ಅವರು ನೋಡಿಕೊಳ್ಳುತ್ತಾರೆ. ಅದಕ್ಕೆ ಈ ವಿಡಿಯೋನೇ ಸಾಕ್ಷಿ. ಫಾರ್ಮ್​ ಹೌಸ್​ನಲ್ಲಿ ದರ್ಶನ್​ ಅವರು ಪ್ರಾಣಿಗಳ ಮೇವು ಕಟ್​ ಮಾಡಿದ್ದಾರೆ. ಸಿನಿಮಾ ಕೆಲಸಗಳ ಬಿಡುವಿನಲ್ಲಿ ಅವರು ಫಾರ್ಮ್​ ಹೌಸ್​ನಲ್ಲಿ ಕಾಲ ಕಳೆದಿದ್ದಾರೆ.

‘ಚಾಲೆಂಜಿಂಗ್​ ಸ್ಟಾರ್​’ ದರ್ಶನ್​ (Darshan) ಅವರಿಗೆ ಇತ್ತೀಚೆಗೆ ಕೈ ಸರ್ಜರಿ ಆಯಿತು. ಅದರ ನಡುವೆಯೂ ಅವರು ಚುನಾವಣಾ ಪ್ರಚಾರ ಮಾಡಿದ್ದರು. ಈಗ ಫಾರ್ಮ್​ ಹೌಸ್​ನಲ್ಲಿ ಅವರು ಕಾಲ ಕಳೆಯುತ್ತಿದ್ದಾರೆ. ತಮ್ಮ ಫಾರ್ಮ್​ ಹೌಸ್​ನಲ್ಲಿ (Darshan Farmhouse) ದರ್ಶನ್​ ಅವರು ಅನೇಕ ಪ್ರಾಣಿಗಳನ್ನು ಸಾಕಿದ್ದಾರೆ. ಅವುಗಳನ್ನು ತುಂಬ ಕಾಳಜಿಯಿಂದ ಅವರು ನೋಡಿಕೊಳ್ಳುತ್ತಾರೆ. ಸದ್ಯ ಕೈ ನೋವು ಇದ್ದರೂ ಕೂಡ ದರ್ಶನ್​ ಅವರು ಪ್ರಾಣಿಗಳಿಗಾಗಿ ಮೇವು ಸಿದ್ಧಪಡಿಸಿದ್ದಾರೆ. ಆ ಸಂದರ್ಭದ ವಿಡಿಯೋ ವೈರಲ್​ ಆಗಿದೆ. ಅದನ್ನು ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ‘ಕಾಟೇರ’ ಸಿನಿಮಾದ ಗೆಲುವಿನಿಂದ ದರ್ಶನ್​ ಅವರ ಜನಪ್ರಿಯತೆ ಹೆಚ್ಚಾಗಿದೆ. ಈಗ ಅವರು ‘ಡೆವಿಲ್​: ದಿ ಹೀರೋ’ (Devil The Hero) ಸಿನಿಮಾದ ಕಡೆಗೆ ಗಮನ ಹರಿಸಿದ್ದಾರೆ. ಇಂದು (ಮೇ 10) ಈ ಸಿನಿಮಾದ ಮೇಕಿಂಗ್​ ವಿಡಿಯೋವನ್ನು ದರ್ಶನ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅದನ್ನು ನೋಡಿದ ಬಳಿಕ ಫ್ಯಾನ್ಸ್​ ನಿರೀಕ್ಷೆ ಹೆಚ್ಚಾಗಿದೆ. ‘ಡೆವಿಲ್​’ ಸಿನಿಮಾಗೆ ಪ್ರಕಾಶ್​ ವೀರ್​ ಅವರು ನಿರ್ದೇಶನ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More