ಚಾಮರಾಜನಗರದಲ್ಲಿ ಬೋನಿಗೆ ಬಿದ್ದ ಹುಲಿ: ಹುಲಿರಾಯನ ನೋಡಲು ಮುಗಿಬಿದ್ದ ಜನ
ಚಾಮರಾಜನಗರದ ದೇಪಾಪುರ ಗ್ರಾಮದಲ್ಲಿ ಕಳೆದ ಮೂರು ತಿಂಗಳಿಂದ ಜನರನ್ನು ಭಯಭೀತರನ್ನಾಗಿಸಿದ್ದ ಹುಲಿಯ ಉಪಟಳ ಕೊನೆಗೊಂಡಿದೆ. ಅರಣ್ಯಾಧಿಕಾರಿಗಳು ಇಟ್ಟ ಬೋನಿಗೆ ಹುಲಿ ಬಿದ್ದಿದ್ದು, ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಬೋನಿನಲ್ಲಿದ್ದ ಹುಲಿ ಘರ್ಜನೆಗೆ ಜನರು ಬೆಚ್ಚಿಬಿದ್ದರೂ, ಬಂಡೀಪುರ ಟೈಗರ್ ರಿಸರ್ವ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಹುಲಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಸಿದ್ಧರಾಗಿದ್ದಾರೆ.
ಚಾಮರಾಜನಗರ, ಡಿ.25: ದಿನ ದಿಂದ ದಿನಕ್ಕೆ ಗಡಿ ನಾಡು ಚಾಮರಾಜನಗರದಲ್ಲಿ ಹುಲಿಯ ಉಪಟಳ ಹೆಚ್ಚಾಗಿದೆ. ಇದೀಗ ಮತ್ತೊಂದು ಹುಲಿ ದೇಪಾಪುರ ಗ್ರಾಮದ ಹೊರ ವಲಯದ ಬೋನಿಗೆ ಬಿದ್ದಿದೆ. ಇನ್ನು ಹುಲಿಯನ್ನು ನೋಡಲು ಕಿಕ್ಕಿರಿದು ಗ್ರಾಮಸ್ಥರು ಸೇರಿದ್ದಾರೆ. ಇನ್ನು ಜನರನ್ನು ನೋಡಿ ಬೋನಿನಲ್ಲಿದ್ದ ಹುಲಿ ಕೂಡ ಘರ್ಜನೆ ಮಾಡಿದೆ. ಈ ಹುಲಿ ಘರ್ಜನೆ ಹಾಗೂ ಹಾರಾಟವನ್ನು ನೋಡಿ ಜನರು ಕೂಡ ಬೆಚ್ಚಿಬಿದ್ದಿದ್ದಾರೆ. ಕಳೆದ ಎರೆಡು ಮೂರು ತಿಂಗಳಿಂದ ಆಗಾಗ ಕಾಣಿಸಿಕೊಂಡು ಭಯ ಹುಟ್ಟಿಸಿದ್ದ ಹುಲಿ, ಇದೀಗ ಅರಣ್ಯಾಧಿಕಾರಿಗಳು ಇಟ್ಟಿದ್ದ ಬೋನಿಗೆ ಬಿದ್ದಿದ್ದು, ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಬಂಡೀಪುರ ಟೈಗರ್ ರಿಸರ್ವ್ ಫಾರೆಸ್ಟ್ ಸಿಬ್ಬಂದಿ ಇದೀಗ ಸ್ಥಳಕ್ಕೆ ಧಾವಿಸಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ