Chandan Shetty Press meet Live: ಡಿವೋರ್ಸ್​ ಬಗ್ಗೆ ಚಂದನ್​ ಶೆಟ್ಟಿ-ನಿವೇದಿತಾ ಗೌಡ ಸುದ್ದಿಗೋಷ್ಠಿ ನೇರಪ್ರಸಾರ

| Updated By: Digi Tech Desk

Updated on: Jun 10, 2024 | 3:55 PM

ಚಂದನ್​ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರು ವಿಚ್ಛೇದನದ ಬಗ್ಗೆ ಪ್ರತಿಕ್ರಿಯೆ ನೀಡಲು ಮಾಧ್ಯಮಗಳ ಮುಂದೆ ಬಂದಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಅವರಿಗೆ ಅನೇಕ ಪ್ರಶ್ನೆಗಳು ಎದುರಾಗಲಿವೆ. ಇದರ ಲೈವ್​ ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ..

ಬಿಗ್​ ಬಾಸ್​ ಶೋನಲ್ಲಿ ಸ್ಪರ್ಧಿಸಿದ ಬಳಿಕ ಪ್ರೀತಿಸಿ ಮದುವೆ ಆದ ಚಂದನ್​ ಶೆಟ್ಟಿ ಮತ್ತು ನಿವೇದಿತಾ ಗೌಡ (Nivedita Gowda) ಅವರು ವಿಚ್ಛೇದನ ಪಡೆದುಕೊಳ್ಳುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಏಕಾಏಕಿ ಅವರು ಡಿವೋರ್ಸ್ ಘೋಷಿಸಿದಾಗ ಎಲ್ಲರಿಗೂ ಶಾಕ್​ ಆಯಿತು. ಈ ಕುರಿತು ಜನರಲ್ಲಿ ಅನೇಕ ಪ್ರಶ್ನೆಗಳು ಇವೆ. ಡಿವೋರ್ಸ್​ ಪಡೆದುಕೊಂಡ ಬಳಿಕ ನಿವೇದಿತಾ ಗೌಡ ಮತ್ತು ಚಂದನ್​ ಶೆಟ್ಟಿ (Chandan Shetty) ಅವರು ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿದ್ದಾರೆ. ತಮ್ಮ ಖಾಸಗಿ ಬದುಕಿನ ಕುರಿತು ಅವರು ಈ ಪ್ರೆಸ್​ ಮೀಟ್​ ಮಾಡಿದ್ದಾರೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಸುದ್ದಿಗೋಷ್ಠಿಯ ಲೈವ್​ ವಿಡಿಯೋ ಇಲ್ಲಿದೆ. ಜೂನ್​ 7ರಂದು ಚಂದನ್​ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರು ವಿಚ್ಛೇದನ (Divorce) ಪಡೆದರು. ಇಂದು (ಜೂನ್​ 10) ಡಿವೋರ್ಸ್​ ಬಗ್ಗೆ ಪ್ರತಿಕ್ರಿಯೆ ನೀಡಲು ಅವರಿಬ್ಬರು ಮಾಧ್ಯಮಗಳ ಎದುರು ಬಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Jun 10, 2024 03:49 PM