ಕುಮಾರಸ್ವಾಮಿ ಮತ್ತು ಯೋಗೇಶ್ವರ ನಡುವೆ ಚನ್ನಪಟ್ಟಣ ಅಭಿವೃದ್ಧಿಗೆ ಸಂಬಂಧಿಸಿದಂತೆ ಪ್ರತಿಷ್ಠೆಯ ಕಾಳಗ ನಡೆಯುತ್ತಿದೆ!
ಅವರ ವರ್ತನೆಯಿಂದ ಬೇಜಾರು ಮಾಡಿಕೊಂಡಿರುವ ಯೋಗೇಶ್ವರ ಅವರು ಮಾಧ್ಯಮದವರೊಂದಿಗೆ ಮಾತಾಡುವಾಗ ಕುಮಾರಸ್ವಾಮಿ ತಮ್ಮ ವಿರುದ್ಧ ಜನರನ್ನು ಎತ್ತಿಕಟ್ಟುತ್ತಿದ್ದಾರೆ ಅಂತ ಹೇಳಿದರು.
ರಾಮನಗರ: ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಮತ್ತು ಮಾಜಿ ಸಚಿವ ಸಿಪಿ ಯೋಗೇಶ್ವರ (CP Yogeshwar) ನಡುವೆ ಚನ್ನಪಟ್ಟಣ (Channapatna) ತಾಲ್ಲೂಕಿನ ಅಭಿವೃದ್ಧಿಗೆ ಸಂಬಂಧಿಸಿದಂತೆ ಪ್ರತಿಷ್ಠೆಯ ಸಮರ ನಡೆಯುತ್ತಿದೆ. ಶನಿವಾರ ಭೈರಾಪಟ್ಟಣದಲ್ಲಿ ಜೆಡಿಎಸ್ ಕಾರ್ಯಕರ್ತರು ಯೋಗೇಶ್ವರ ಅವರನ್ನು ಕಾರನ್ನು ಮುತ್ತಿಗೆ ಹಾಕಿದ ಸಂಗತಿಯನ್ನು ನಾವು ಈಗಾಗಲೇ ವರದಿ ಮಾಡಿದ್ದೇವೆ. ಅವರ ವರ್ತನೆಯಿಂದ ಬೇಜಾರು ಮಾಡಿಕೊಂಡಿರುವ ಯೋಗೇಶ್ವರ ಅವರು ಮಾಧ್ಯಮದವರೊಂದಿಗೆ ಮಾತಾಡುವಾಗ ಕುಮಾರಸ್ವಾಮಿ ತಮ್ಮ ವಿರುದ್ಧ ಜನರನ್ನು ಎತ್ತಿಕಟ್ಟುತ್ತಿದ್ದಾರೆ ಅಂತ ಹೇಳಿದರು.