Video: ರಣರಂಗವಾದ ವಾರಾಣಸಿ ನ್ಯಾಯಾಲಯ, ಪೊಲೀಸರ ಮೇಲೆ ವಕೀಲರಿಂದ ಹಲ್ಲೆ
ವಾರಾಣಸಿ ನ್ಯಾಯಾಲಯವು ಇಂದು ಅಕ್ಷರಶಃ ರಣರಂಗವಾಗಿತ್ತು. ನೂರಾರು ವಕೀಲರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ.ಬರಗಾಂವ್ ಪೊಲೀಸ್ ಠಾಣೆಯಲ್ಲಿ ನಿಯೋಜಿತರಾಗಿದ್ದ ಸಬ್-ಇನ್ಸ್‌ಪೆಕ್ಟರ್ ಮಿಥಿಲೇಶ್ ಪ್ರಜಾಪತಿ (37) ಅವರನ್ನು ವಕೀಲರು ಸುತ್ತುವರೆದಿದ್ದು, ಜಿಲ್ಲಾ ಮ್ಯಾಜಿಸ್ಟ್ರೇಟ್ ಪೋರ್ಟಿಕೋ ಬಳಿ ಅವರ ಮೇಲೆ ಹಲ್ಲೆ ನಡೆಸಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಕೀಲರ ಗುಂಪು ಪ್ರಜಾಪತಿಯವರನ್ನು ಬೆನ್ನಟ್ಟಿ, ಒದ್ದು, ಗುದ್ದಾಡುತ್ತಿರುವುದನ್ನು ಕಾಣಬಹುದು.
ವಾರಾಣಸಿ, ಸೆಪ್ಟೆಂಬರ್ 17: ವಾರಾಣಸಿ ನ್ಯಾಯಾಲಯವು ಇಂದು ಅಕ್ಷರಶಃ ರಣರಂಗವಾಗಿತ್ತು. ನೂರಾರು ವಕೀಲರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ.ಬರಗಾಂವ್ ಪೊಲೀಸ್ ಠಾಣೆಯಲ್ಲಿ ನಿಯೋಜಿತರಾಗಿದ್ದ ಸಬ್-ಇನ್ಸ್‌ಪೆಕ್ಟರ್ ಮಿಥಿಲೇಶ್ ಪ್ರಜಾಪತಿ (37) ಅವರನ್ನು ವಕೀಲರು ಸುತ್ತುವರೆದಿದ್ದು, ಜಿಲ್ಲಾ ಮ್ಯಾಜಿಸ್ಟ್ರೇಟ್ ಪೋರ್ಟಿಕೋ ಬಳಿ ಅವರ ಮೇಲೆ ಹಲ್ಲೆ ನಡೆಸಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಕೀಲರ ಗುಂಪು ಪ್ರಜಾಪತಿಯವರನ್ನು ಬೆನ್ನಟ್ಟಿ, ಒದ್ದು, ಗುದ್ದಾಡುತ್ತಿರುವುದನ್ನು ಕಾಣಬಹುದು.ವಕೀಲರು ಅವರನ್ನು ಕಚೇರಿಗೆ ಎಳೆದೊಯ್ದು ಅಲ್ಲಿಯೂ ಹಲ್ಲೆ ಮುಂದುವರೆಸಿದರು. ನ್ಯಾಯಾಲಯದ ಇತರ ಪೊಲೀಸ್ ಅಧಿಕಾರಿಗಳು ಮಧ್ಯಪ್ರವೇಶಿಸಿ ಅವರನ್ನು ರಕ್ಷಿಸುವವರೆಗೂ ಪರಿಸ್ಥಿತಿ ಹಿಡಿತದಲ್ಲಿರಲಿಲ್ಲ. ಯಾವುದೋ ಭೂ ವಿವಾದ ವಿಚಾರವಾಗಿ ಮನಸ್ತಾಪವಿತ್ತು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ