ನೇಪಾಳದಂತೆ ನಮ್ ಹುಡುಗ್ರು ವಿಧಾನಸೌಧಕ್ಕೆ ಬರ್ತಾರೆ ಹುಷಾರ್: ಸಿದ್ದರಾಮಯ್ಯಗೆ ಯತ್ನಾಳ್ ಎಚ್ಚರಿಕೆ
ಪ್ರಧಾನಿ ಕೆಪಿ ಶರ್ಮ ಒಲಿ ಸರ್ಕಾರವು 26 ಸಾಮಾಜಿಕ ಜಾಲತಾಣಗಳನ್ನು ನಿಷೇಧಿಸಿದ್ದರ ಪರಿಣಾಮ ನೇಪಾಳ ಅಕ್ಷರಶಃ ಅಗ್ನಿಕುಂಡವಾಗಿದೆ. ಅಲ್ಲಿನ ಯುವಕರು ಸೇರಿಕೊಂಡು ರಾಜಕಾರಣಿಗಳ ಮನೆಗೆ ನುಗ್ಗಿ ಹೊಡೆದು ಬೆಂಕಿ ಹಚ್ಚುತ್ತಿದ್ದಾರೆ. ಇನ್ನು ಓರ್ವ ಸಂಸದನನ್ನು ಅಟ್ಟಾಡಿಸಿಕೊಂಡು ಹೊಡೆದು ಬೀಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇನ್ನು ಉದ್ರಿಕ್ತರು ಸಂಸತ್ಗೆ ಬೆಂಕಿ ಹಚ್ಚಿದ್ದಾರೆ. ಇದನ್ನೇ ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಫಾಟೀಲ್ ಯತ್ನಾಳ್ ಉದಾಹರಣೆ ನೀಡಿ ನೇಪಾಳದ ಗಲಭೆಯಂತೆ ರಾಜ್ಯದಲ್ಲೂ ಸಿಎಂ ಸಿದ್ದರಾಮಯ್ಯ ವಿರುದ್ಧ ಯುವಕರು ವಿಧಾನಸೌಧಕ್ಕೆ ಬರ್ತಾರೆ ಎಂದು ವಾರ್ನ್ ಮಾಡಿದ್ದಾರೆ.
ರಾಯಚೂರು, (ಸೆಪ್ಟೆಂಬರ್ 17): ಪ್ರಧಾನಿ ಕೆಪಿ ಶರ್ಮ ಒಲಿ ಸರ್ಕಾರವು 26 ಸಾಮಾಜಿಕ ಜಾಲತಾಣಗಳನ್ನು ನಿಷೇಧಿಸಿದ್ದರ ಪರಿಣಾಮ ನೇಪಾಳ ಅಕ್ಷರಶಃ ಅಗ್ನಿಕುಂಡವಾಗಿದೆ. ಅಲ್ಲಿನ ಯುವಕರು ಸೇರಿಕೊಂಡು ರಾಜಕಾರಣಿಗಳ ಮನೆಗೆ ನುಗ್ಗಿ ಹೊಡೆದು ಬೆಂಕಿ ಹಚ್ಚುತ್ತಿದ್ದಾರೆ. ಇನ್ನು ಓರ್ವ ಸಂಸದನನ್ನು ಅಟ್ಟಾಡಿಸಿಕೊಂಡು ಹೊಡೆದು ಬೀಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇನ್ನು ಉದ್ರಿಕ್ತರು ಸಂಸತ್ಗೆ ಬೆಂಕಿ ಹಚ್ಚಿದ್ದಾರೆ. ಇದನ್ನೇ ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಫಾಟೀಲ್ ಯತ್ನಾಳ್ ಉದಾಹರಣೆ ನೀಡಿ ನೇಪಾಳದ ಗಲಭೆಯಂತೆ ರಾಜ್ಯದಲ್ಲೂ ಸಿಎಂ ಸಿದ್ದರಾಮಯ್ಯ ವಿರುದ್ಧ ಯುವಕರು ವಿಧಾನಸೌಧಕ್ಕೆ ಬರ್ತಾರೆ ಎಂದು ವಾರ್ನ್ ಮಾಡಿದ್ದಾರೆ.
ರಾಯಚೂರಿನ ಹಿಂದು ಮಹಾ ಗಣೇಶ ವಿಸರ್ಜನಾ ಕಾರ್ಯಕ್ರಮದಲ್ಲಿ ಮಾತನಾಡಿರುವ ಯತ್ನಾಳ್,ನೇಪಾಳದಲ್ಲಿ ರಾಜಕಾರಣಿಗಳು ತಿಂದು ತಿಂದುಅಪ್ಪ ಮಕ್ಕಳು ಲೂಟಿ ಮಾಡಿದ್ರು. ಅಲ್ಲಿನ ಯುವಕರಿಗೆ ಸಿಟ್ಟು ಬಂದು ರಾಜಕಾರಣಗಳನ್ನ ಹೊಡೆಯುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಹೀಗೆ ಮಾಡಿದ್ರೆ ನಮ್ಮ ಹುಡುಗರಯ ವಿಧಾನಸೌಧಕ್ಕೆ ಬರ್ತಾರೆ ಹುಷಾರಾಗಿರಿ. ಹಿಂದೂಗಳ ಭಾವನೆಗಳಿಗೆ ತೊಂದರೆ ಮಾಡಿದರೇ ನೀವು ಬರೀ ಸಾಬರಿಗೆ ಬೆನ್ನುಹತ್ತಿದ್ರೆ ನಮ್ಮ ಹಿಂದು ಸಮಾಜ ತಯಾರಾಗಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
