Swam continuously for 8 hours: ಛತ್ತೀಸ್​ಗಢ್​ನ 15-ವರ್ಷದ ಹುಡುಗಿ ಈಜಿನಲ್ಲಿ ವಿಶ್ವವಿಕ್ರಮ ಮೆರೆದಿದ್ದಾಳೆ!

|

Updated on: Apr 11, 2023 | 6:39 PM

ಚಂದ್ರಕಲಾಳ ಕೋಚ್ ಹೇಳುವ ಪ್ರಕಾರ ವಿಶ್ವದಾಖಲೆ ನಿರ್ಮಿಸಲು ಸಿದ್ಧತೆಯ ಭಾಗವಾಗಿ ಆಕೆ ಪ್ರತಿದಿನ 10-12 ಗಂಟೆಗಳ ಕಾಲ ಎಡೆಬಿಡದೆ ಅಭ್ಯಾಸ ನಡೆಸಿದಳು ಮತ್ತು ಕಟ್ಟುನಿಟ್ಟಾಗಿ ಆಹಾರ ಕ್ರಮವನ್ನು ಪಾಲಿಸಿದಳು.

ದುರ್ಗ್ (ಛತ್ತೀಸ್ ಗಢ್): ದುರ್ಗ್ ಜಿಲ್ಲೆಯ ಪುರೈ ಗ್ರಾಮದ 15-ವರ್ಷ-ವಯಸ್ಸಿನ ಬಾಲೆಯೊಬ್ಬಳು ಸತತವಾಗಿ 8 ಗಂಟೆಗಳ ಕಾಲ ನೀರಲ್ಲಿ ಈಜಿ ಹೊಸ ದಾಖಲೆ ನಿರ್ಮಿಸಿದ್ದಾಳೆ. ಚಂದ್ರಕಲಾ ಓಜಾ (Chandrakala Ojha) ಹೆಸರಿನ ಈ ಹುಡುಗಿ ಬೆಳಗ್ಗೆ 5 ಗಂಟೆಗೆ ನೀರಿಗಳಿದು ಮಧ್ಯಾಹ್ನ 1 ಗಂಟೆಯವರೆಗೆ ಸತತವಾಗಿ (continuously) ಈಜಿದ್ದನ್ನು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ (Golden Book of World Records ) ಅಧಿಕಾರಿಗಳು ಮತ್ತು ಪುರೈ ಗ್ರಾಮದ ನಿವಾಸಿಗಳು ಆಶ್ಚರ್ಯಚಕಿತರಾಗಿ ವೀಕ್ಷಿಸಿದರು.

‘ನಾನು ಸತತವಾಗಿ 8 ಗಂಟೆಗಳ ಕಾಲ ಈಜುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್​​​​​​ನಲ್ಲಿ ಹೊಸ ವಿಶ್ವವಿಕ್ರಮ ಸ್ಥಾಪಿಸಿದ್ದೇನೆ. ಅಂಬಿಕಾಪುರ್ ನಲ್ಲಿ ಆಯೋಜಿಸಲಾಗಿದ್ದ ಈಜುಸ್ಪರ್ಧೆಯಲ್ಲಿ ಭಾಗವಹಿಸಿ ನಾನು 3 ಚಿನ್ನದ ಪದಕಗಳನ್ನು ಗೆದ್ದಿದ್ದೆ. ಆಮೇಲೆ ಜಗದಾಲಪುರ್ ನಡೆದ ಸ್ಪರ್ಧೆಗಳಲ್ಲೂ ನಾನು 3 ಚಿನ್ನದ ಪದಕಗಳನ್ನು ಗೆದ್ದಿದ್ದೆ. ಬಳಿಕ ನಾನು ಒಡಿಶಾದಲ್ಲಿ ಆಯೋಜನೆಗೊಂಡಿದ್ದ ಸ್ಪರ್ಧೆಯಲ್ಲಿ ಭಾಗವಹಿಸಿದೆನಾದರೂ ಯಾವುದೇ ಪದಕ ಗೆಲ್ಲಲಿಲ್ಲ. ಅದಾದ ಬಳಿಕ ನಾನು ರಾಷ್ಟ್ರೀಯ ಜ್ಯೂನಿಯರ್ ಈಜುಗಾರಿಕೆ ಸ್ಪರ್ಧೆಗಳಲ್ಲಿ ಭಾಗವಹಿಸಿ 2 ಚಿನ್ನದ ಪದಕಗಳನ್ನು ಗೆದ್ದಿದ್ದೆ,’ ಎಂದು ಚಂದ್ರಕಲಾ ಓಜಾ ಹೆಮ್ಮೆಯಿಂದ ಹೇಳುತ್ತಾಳೆ.

ಇದನ್ನೂ ಓದಿ:  Hilux booking In India: ಟೊಯೊಟಾದಿಂದ ಲೈಫ್ ಸ್ಟೈಲ್ ಯುಟಿಲಿಟಿ ವೆಹಿಕಲ್ – ಹಿಲಕ್ಸ್ ಬುಕ್ಕಿಂಗ್ ಆರಂಭ

‘ಅವಳ ಸಾಧನೆಯಿಂದ ಇಡೀ ಊರು ಸಂತೋಷದ ಅಲೆಯಲ್ಲಿ ತೇಲಾಡುತ್ತಿದೆ. ಅವಳ ಹೆಸರು ಮತ್ತು ಸಾಧನೆ ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್​​ನಲ್ಲಿ ದಾಖಲಾಗಿರುವುದಕ್ಕೆ ಗ್ರಾಮಸ್ಥರು ಮತ್ತು ಅವಳ ಜೊತೆಗಾರರು ಹೆಮ್ಮೆಪಡುತ್ತಿದ್ದಾರೆ. ಭವಿಷ್ಯದಲ್ಲಿ ಇನ್ನೂ ಉತ್ತಮ ಪ್ರದರ್ಶನಗಳನ್ನು ನೀಡಲು ಅವಳು ಬೋಟಿಂಗ್ ಕ್ಲಬ್ ನಲ್ಲಿ ಅಭ್ಯಾಸ ಮಾಡುತ್ತಿದ್ದಾಳೆ,’ ಎಂದು ಚಂದ್ರಕಲಾ ತಂದೆ ಮನೋಜ್ ಕುಮಾರ್ ಓಜಾ ಹೇಳುತ್ತಾರೆ.

ಚಂದ್ರಕಲಾಳ ಕೋಚ್ ಹೇಳುವ ಪ್ರಕಾರ ವಿಶ್ವದಾಖಲೆ ನಿರ್ಮಿಸಲು ಸಿದ್ಧತೆಯ ಭಾಗವಾಗಿ ಆಕೆ ಪ್ರತಿದಿನ 10-12 ಗಂಟೆಗಳ ಕಾಲ ಎಡೆಬಿಡದೆ ಅಭ್ಯಾಸ ನಡೆಸಿದಳು ಮತ್ತು ಕಟ್ಟುನಿಟ್ಟಾಗಿ ಆಹಾರ ಕ್ರಮವನ್ನು ಪಾಲಿಸಿದಳು.

‘ಚಂದ್ರಕಲಾ ಓಜಾ 5ನೇ ವಯಸ್ಸಿನಿಂದ ಈಜುವುದನ್ನು ಅಭ್ಯಾಸ ಮಾಡುತ್ತಿದ್ದಾಳೆ. ಆದರೆ ವಿಶ್ವದಾಖಲೆಗಾಗಿ ಅವಳು ಕಳೆದ 3 ವರ್ಷಗಳಿಂದ ಅಭ್ಯಾಸನಿರತರಾಗಿದ್ದಳು. ವಿಶ್ವದಾಖಲೆ ಸ್ಥಾಪಿಸುವ ಪ್ರಯತ್ನಕ್ಕೆ ಕೈಹಾಕುವ 5-6 ತಿಂಗಳು ಮೊದಲಷ್ಟೇ ತಯಾರಿ ಶುರು ಮಾಡುವಂತೆ ನಾವು ಅವಳಿಗೆ ನಿರ್ದಿಷ್ಟವಾಗಿ ಹೇಳಿದ್ದೆವು,’ ಎಂದು ಚಂದ್ರಕಲಾಳ ಕೋಚ್ ಓಮ್ ಕುಮಾರ್ ಓಜಾ ಹೇಳುತ್ತಾರೆ.

ಇದನ್ನೂ ಓದಿ: ಜನಪದ ಹಾಡಿನ ಮೂಲಕ ಸಚಿವ ಡಾ ಸಿಎನ್ ಅಶ್ವತ್ಥನಾರಾಯಣರನ್ನ ಹರಿಸಿದ ಅಜ್ಜಿ: ವಿಡಿಯೋ ನೋಡಿ

ಒಂದು ಅವಕಾಶ ವಂಚಿತ ಕುಟುಂಬದ ಹಿನ್ನೆಲೆಯ ಚಂದ್ರಕಲಾಗೆ ಯಾವುದಾದರೂ ಖ್ಯಾತ ಸ್ವಿಮ್ಮಿಂಗ್ ಅಕಾಡೆಮಿಯಲ್ಲಿ ತರಬೇತಿ ಪಡೆಯುವುದು ಸಾಧ್ಯವಿರಲಿಲ್ಲ. ಹಾಗಾಗೇ ಅವಳು ಗ್ರಾಮದ ಹೊಂಡದಲ್ಲಿ ಈಜುತ್ತಾ ಅಭ್ಯಾಸ ಮಾಡುತ್ತಾಳೆ.
ಚಂದ್ರಕಲಾ ಈ ವರ್ಷ 10ನೇ ತರಗತಿ ಪರೀಕ್ಷೆ ಬರೆದಿದ್ದಾಳೆ. ಅವಳ ಪುಸ್ತಕ ಹಿಡಿದು ಕೂತಿಲ್ಲ ಅಂದ್ರೆ ಈಜಲು ಹೊಂಡಕ್ಕೆ ಹೋಗಿದ್ದಾಳೆ ಎಂದರ್ಥ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on