Karnataka Assembly Polls: ಪತಿಗಾಗಿ ಉತ್ತರ ಮತ್ತು ಮಾವನಿಗಾಗಿ ದಕ್ಷಿಣ ದಾವಣಗೆರೆಯಲ್ಲಿ ಪ್ರಚಾರ ಮಾಡುತ್ತಿರುವ ಡಾ ಪ್ರಭಾ ಮಲ್ಲಿಕಾರ್ಜುನ
ಪತಿ ಮತ್ತು ಮಾವ ಇಬ್ಬರಿಗಾಗಿಯೂ ಒಂದೇ ನಗರದ ಎರಡು ಕ್ಷೇತ್ರಗಳಲ್ಲಿ ಒಟ್ಟಿಗೆ ಚುನಾವಣಾ ಪ್ರಚಾರ ಮಾಡಿದ ರಾಜ್ಯದ ಮೊದಲು ಮಹಿಳೆ ಡಾ ಪ್ರಭಾ ಆಗಿರಬಹುದು.
ದಾವಣಗೆರೆ: ನಗರದಲ್ಲಿ ಮನೆಮನೆಗೆ ಭೇಟಿ ನೀಡುತ್ತಾ ಪ್ರಚಾರ ಮಾಡುತ್ತಿರುವ ಇವರು ಡಾ ಪ್ರಭಾ ಮಲ್ಲಿಕಾರ್ಜುನ (Dr Prabha Mallikarjun), ದಾವಣಗೆರೆ ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮತ್ತು ಮಾಜಿ ಸಚಿವ ಎಸ್ಎಸ್ ಮಲ್ಲಿಕಾರ್ಜುನ (SS Mallikarjun) ಪತ್ನಿ. ಅಂದಹಾಗೆ, ಇವರು ಕೇವಲ ತಮ್ಮ ಪತಿಗಾಗಿ ಪ್ರಚಾರ ಮಾಡುತ್ತಿಲ್ಲ. ಅವರ ಮಾವ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಶ್ಯಾಮನೂರು ಶಿವಶಂಕರಪ್ಪ (Shamanur Shivashankarappa) ಪರವಾಗಿಯೂ ಮತ ಯಾಚಿಸುತ್ತಿದ್ದಾರೆ. ಶಿವಶಂಕ್ರಪ್ಪನವರು ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಪತಿ ಮತ್ತು ಮಾವ ಇಬ್ಬರಿಗಾಗಿಯೂ ಒಂದೇ ನಗರದ ಎರಡು ಕ್ಷೇತ್ರಗಳಲ್ಲಿ ಒಟ್ಟಿಗೆ ಚುನಾವಣಾ ಪ್ರಚಾರ ಮಾಡಿದ ರಾಜ್ಯದ ಮೊದಲು ಮಹಿಳೆ ಡಾ ಪ್ರಭಾ ಆಗಿರಬಹುದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
![ಕೇವಲ ವೋಟು ಗಿಟ್ಟಿಸಲು ಕಾಂಗ್ರೆಸ್ ನಾಯಕರು ಸುಳ್ಳು ಹೇಳಿದರೇ? ಮಹಿಳೆಯರು ಕೇವಲ ವೋಟು ಗಿಟ್ಟಿಸಲು ಕಾಂಗ್ರೆಸ್ ನಾಯಕರು ಸುಳ್ಳು ಹೇಳಿದರೇ? ಮಹಿಳೆಯರು](https://images.tv9kannada.com/wp-content/uploads/2025/02/chitradurga-woman.jpg?w=280&ar=16:9)
ಕೇವಲ ವೋಟು ಗಿಟ್ಟಿಸಲು ಕಾಂಗ್ರೆಸ್ ನಾಯಕರು ಸುಳ್ಳು ಹೇಳಿದರೇ? ಮಹಿಳೆಯರು
![ನವ ವಧುವಿನ ಜತೆ ಮಾವನ ಮನೆಗೆ ಹೆಲಿಕಾಪ್ಟರ್ನಲ್ಲಿ ಬಂದಿಳಿದ ಅಳಿಯ ನವ ವಧುವಿನ ಜತೆ ಮಾವನ ಮನೆಗೆ ಹೆಲಿಕಾಪ್ಟರ್ನಲ್ಲಿ ಬಂದಿಳಿದ ಅಳಿಯ](https://images.tv9kannada.com/wp-content/uploads/2025/02/helicopter-12.jpg?w=280&ar=16:9)
ನವ ವಧುವಿನ ಜತೆ ಮಾವನ ಮನೆಗೆ ಹೆಲಿಕಾಪ್ಟರ್ನಲ್ಲಿ ಬಂದಿಳಿದ ಅಳಿಯ
![ತಿನ್ನಲು ಯೋಗ್ಯವಲ್ಲದ ಜೋಳವನ್ನು ಸರ್ಕಾರ ನೀಡುತ್ತಿದೆ: ಕಲಬುರಗಿ ಮಹಿಳೆ ತಿನ್ನಲು ಯೋಗ್ಯವಲ್ಲದ ಜೋಳವನ್ನು ಸರ್ಕಾರ ನೀಡುತ್ತಿದೆ: ಕಲಬುರಗಿ ಮಹಿಳೆ](https://images.tv9kannada.com/wp-content/uploads/2025/02/kalaburagi-woman.jpg?w=280&ar=16:9)
ತಿನ್ನಲು ಯೋಗ್ಯವಲ್ಲದ ಜೋಳವನ್ನು ಸರ್ಕಾರ ನೀಡುತ್ತಿದೆ: ಕಲಬುರಗಿ ಮಹಿಳೆ
![ಮಗುವ ಎದೆಗವಚಿ ರೈಲ್ವೆ ನಿಲ್ದಾಣದಲ್ಲಿ ಗಸ್ತು ತಿರುಗುವ ಮಹಿಳಾ ಕಾನ್ಸ್ಟೆಬಲ್ ಮಗುವ ಎದೆಗವಚಿ ರೈಲ್ವೆ ನಿಲ್ದಾಣದಲ್ಲಿ ಗಸ್ತು ತಿರುಗುವ ಮಹಿಳಾ ಕಾನ್ಸ್ಟೆಬಲ್](https://images.tv9kannada.com/wp-content/uploads/2025/02/rpf.jpg?w=280&ar=16:9)
ಮಗುವ ಎದೆಗವಚಿ ರೈಲ್ವೆ ನಿಲ್ದಾಣದಲ್ಲಿ ಗಸ್ತು ತಿರುಗುವ ಮಹಿಳಾ ಕಾನ್ಸ್ಟೆಬಲ್
![ಚಿಕ್ಕಮಗಳೂರು: ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ ತಪ್ಪಲಿನಲ್ಲಿ ಭಾರಿ ಬೆಂಕಿ ಚಿಕ್ಕಮಗಳೂರು: ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ ತಪ್ಪಲಿನಲ್ಲಿ ಭಾರಿ ಬೆಂಕಿ](https://images.tv9kannada.com/wp-content/uploads/2025/02/chandra-drona-parvatha-fire.jpg?w=280&ar=16:9)