Karnataka Assembly Polls; ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರುವ ವದಂತಿ ಸುಳ್ಳು, ಅಂಥದ್ದೇನೂ ಸಂಭವಿಸದು: ಸಿಎನ್ ಅಶ್ಥಥ್ ನಾರಾಯಣ, ಸಚಿವರು

Karnataka Assembly Polls; ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರುವ ವದಂತಿ ಸುಳ್ಳು, ಅಂಥದ್ದೇನೂ ಸಂಭವಿಸದು: ಸಿಎನ್ ಅಶ್ಥಥ್ ನಾರಾಯಣ, ಸಚಿವರು

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 11, 2023 | 1:47 PM

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಿಂದೆಂದಿಗಿಂತಲೂ ಹೆಚ್ಚಿನ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ ಎಂದು ಅಶ್ವಥ್ ನಾರಾಯಣ ಹೇಳಿದರು.

ಶಿವಮೊಗ್ಗ: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸಚಿವ ಸಿಎನ್ ಅಶ್ವಥ್ ನಾರಾಯಣ (CN Ashwath Narayan) ರಾಜ್ಯದ ಜನತೆಗೆ ಒಂದು ಉತ್ತಮ ಆಡಳಿತ ಸಿಗಬೇಕಾದರೆ ಸುಭದ್ರ ಸರ್ಕಾರ ಬೇಕಾಗುತ್ತದೆ ಅದನ್ನು ಬಿಜೆಪಿ ಮಾತ್ರ ನೀಡುವುದು ಸಾಧ್ಯ ಎಂದು ಹೇಳಿದರು. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ (assembly polls) ಬಿಜೆಪಿ ಹಿಂದೆಂದಿಗಿಂತಲೂ ಹೆಚ್ಚಿನ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು. ಪಕ್ಷದ ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ (Laxman Savadi) ಕಾಂಗ್ರೆಸ್ ಪಕ್ಷ ಸೇರುವ ವದಂತಿಗಳ ಕಡೆ ಮಾಧ್ಯಮದವರು ಗಮನಸೆಳೆದಾಗ ಸಚಿವರು ಚುಟುಕಾಗಿ ಅಂಥದ್ದೇನೂ ಸಂಭವಿಸುವುದಿಲ್ಲ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ