ಕಾಂಗ್ರೆಸ್​ನಲ್ಲಿ ಶಾಮನೂರು ಶಿವಶಂಕರಪ್ಪ ಅವರೂ ಮುಖ್ಯಮಂತ್ರಿಯಾಗಲು ಇಣುಕಿ ನೋಡುತ್ತಿದ್ದಾರೆ: ಡಿಸಿಎಂ ಗೋವಿಂದ ಕಾರಜೋಳ

ಬಹಳ ಹಿಂದಿನಿಂದಲೇ ಈ ಹಗ್ಗ ಜಗ್ಗಾಟ ಕಾಂಗ್ರೆಸ್​ನಲ್ಲಿದೆ. ಈ ಹಿಂದೆ ಕಾಂಗ್ರೆಸ್​ನಲ್ಲಿ ಕುಸ್ತಿಯಾಗಿ ಪರಮೇಶ್ವರ್ ಮೂಲೆಗುಂಪು ಮಾಡಲಾಗಿತ್ತು. ಡಾ.ಜಿ.ಪರಮೇಶ್ವರ್​ರನ್ನು ಅವರ ಪಕ್ಷದವರೇ ಸೋಲಿಸಿದರು ಎಂದು ಡಿಸಿಎಂ ಗೋವಿಂದ ಕಾರಜೋಳ ವಿಶ್ಲೇಷಿಸಿದರು: ಡಿಸಿಎಂ ಗೋವಿಂದ ಕಾರಜೋಳ

ಕಾಂಗ್ರೆಸ್​ನಲ್ಲಿ ಶಾಮನೂರು ಶಿವಶಂಕರಪ್ಪ ಅವರೂ ಮುಖ್ಯಮಂತ್ರಿಯಾಗಲು ಇಣುಕಿ ನೋಡುತ್ತಿದ್ದಾರೆ: ಡಿಸಿಎಂ ಗೋವಿಂದ ಕಾರಜೋಳ
ಗೋವಿಂದ ಕಾರಜೋಳ ಮತ್ತು ಶಾಮನೂರು ಶಿವಶಂಕರಪ್ಪ

ಬಾಗಲಕೋಟೆ: ರಾಜ್ಯ ಕಾಂಗ್ರೆಸ್​ ಘಟಕದಲ್ಲಿ ಕೇವಲ 2 ಗುಂಪುಗಳಿಲ್ಲ, 3 ಗುಂಪುಗಳಿವೆ. (ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಡಿಸಿಎಂ ಡಾ.ಪರಮೇಶ್ವರ್) ಜತೆಗೆ ನಾಲ್ಕನೆಯ ಗುಂಪಿನ ಶ್ಯಾಮನೂರು ಶಿವಶಂಕರಪ್ಪ ಸಹ ಇಣುಕಿ ನೋಡುತ್ತಿದ್ದಾರೆ ಎಂದು ಬಾಗಲಕೋಟೆಯಲ್ಲಿ ಡಿಸಿಎಂ ಗೋವಿಂದ ಕಾರಜೋಳ ವ್ಯಂಗ್ಯವಾಡಿದ್ದಾರೆ.

ಹಿರಿಯ ರಾಜಕಾರಣಿ, ಕಾಂಗ್ರೆಸ್ ಶಾಸಕ ಶ್ಯಾಮನೂರು ಶಿವಶಂಕರಪ್ಪ ತಮಗೂ 5 ವರ್ಷ ಆಡಳಿತ ನಡೆಸುವ ಅವಕಾಶ ಸಿಗುವ ಬಗ್ಗೆ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಕಾಂಗ್ರೆಸ್​ನಲ್ಲಿನ ಕುಸ್ತಿ ಇಂದು ನಿನ್ನೆಯದಲ್ಲ. ಬಹಳ ಹಿಂದಿನಿಂದಲೇ ಈ ಹಗ್ಗ ಜಗ್ಗಾಟ ಕಾಂಗ್ರೆಸ್​ನಲ್ಲಿದೆ. ಈ ಹಿಂದೆ ಕಾಂಗ್ರೆಸ್​ನಲ್ಲಿ ಕುಸ್ತಿಯಾಗಿ ಪರಮೇಶ್ವರ್ ಮೂಲೆಗುಂಪು ಮಾಡಲಾಗಿತ್ತು. ಡಾ.ಜಿ.ಪರಮೇಶ್ವರ್​ರನ್ನು ಅವರ ಪಕ್ಷದವರೇ ಸೋಲಿಸಿದರು ಎಂದು ಡಿಸಿಎಂ ಗೋವಿಂದ ಕಾರಜೋಳ ವಿಶ್ಲೇಷಿಸಿದರು.

ಕೊವಿಡ್​ನಿಂದ ಮೃತಪಟ್ಟವರ, ನೊಂದವರ ಗಣತಿ ನಡೆಸಲು ಕಾಂಗ್ರೆಸ್​ ಕಾರ್ಯಕರ್ತರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕರೆ
ಕೊವಿಡ್‌ನಿಂದ ಮೃತಪಟ್ಟವರ ಮತ್ತು ನೊಂದವರ ಕುಟುಂಬಗಳನ್ನು ಸಂಪರ್ಕಿಸಿ ಮಾಹಿತಿ ಸಂಪರ್ಕಿಸುವಂತೆ ಕಾಂಗ್ರೆಸ್‌ ಕಾರ್ಯಕರ್ತರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕರೆ ನೀಡಿದ್ದಾರೆ. ಈ ಸಂಬಂಧ ನಿಡಲಾಗುವ ಫಾರಂ ತುಂಬಿಸಿ ಕಳಿಸಬೇಕು. ಜತೆಗೆ ಕೊವಿಡ್‌ನಿಂದ ನೊಂದವರ ಪಟ್ಟಿಯನ್ನು ಸಿದ್ಧಪಡಿಸಬೇಕು. ಮಾಹಿತಿಯನ್ನು ಬ್ಲಾಕ್‌ ಮಟ್ಟದ ಸಮಿತಿಗೆ ಸಲ್ಲಿಸಬೇಕು. ರಾಜ್ಯ ಮಟ್ಟದಲ್ಲಿ ಇನ್ನೊಂದು ಸಮೀತಿ ಎಲ್ಲಾ ಬ್ಲಾಕ್​ಗಳ ವರದಿಯನ್ನು ಸಂಗ್ರಹಿಸಲಿದೆ. ನಂತರ ಈ ಮಾಹಿತಿಯನ್ನು ರಾಜ್ಯ ಸರ್ಕಾರಕ್ಕೆ ಕಳಿಸುತ್ತೇವೆ. 30 ದಿನಗಳ ಕಾಲ ಈ ಅಭಿಯಾನ ನಡೆಯಲಿದೆ. ಪ್ರತಿ ಬ್ಲಾಕ್‌ನಲ್ಲಿ 10 ಸದಸ್ಯರ ತಂಡ ಇದನ್ನು ಮಾಡಬೇಕು ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಕಾಂಗ್ರೆಸ್ ಕಾರ್ಯಕರ್ತರಿಗೆ ತಿಳಿಸಿದರು.

ಇಡೀ ದೇಶ ಕೊವಿಡ್ 2ನೇ ಅಲೆಯಿಂದ ಬಹಳ ನೊಂದಿದೆ. ಸಾವು ನೋವು ಉದ್ಯೋಗ ಕಳೆದುಕೊಂಡವರು, ಆರೋಗ್ಯ ಕಳೆದುಕೊಂಡವರು..ಹೀಗೆ ಆರ್ಥಿಕವಾಗಿ ಎಲ್ಲ ವರ್ಗದ ಜನರಿಗೂ ಅಪಾಯ ಆಗಿದೆ. ಕಾಂಗ್ರೆಸ್ ಪಕ್ಷದ ವತಿಯಿಂದ ಕೊವಿಡ್ ಹಿನ್ನೆಲೆಯಲ್ಲಿ ಆರ್ಥಿಕ ಪ್ಯಾಕೇಜ್ ಗೆ ಒತ್ತಾಯ ಮಾಡಿದ್ದೆವು. 20 ಲಕ್ಷ ಕೋಟಿ ರೂಪಾಯಿ ಯಾರಿಗೆ ಸಿಕ್ಕಿದೆ ಯಾರಿಗೆ ಸಿಗಲಿಲ್ಲ ಪಟ್ಟಿ ಕೊಡಿ ಅಂದೆವು. ಹೋದ ವರ್ಷ ರಾಜ್ಯದ ಪ್ಯಾಕೇಜ್ ವಿವರಗಳನ್ನೂ ಕೂಡ ಕೇಳಿದೆವು. ಈ ಬಗ್ಗೆ ಕಾಂಗ್ರೆಸ್ ಆರ್​ಟಿಐ ಮೂಲಕ ಮಾಹಿತಿ ಪಡೆದು ಬಿಡುಗಡೆ ಮಾಡಿದೆ. ಡೆತ್ ಆಡಿಟ್ ಬಗ್ಗೆ ಮಾಹಿತಿ ಕೇಳಿದರೆ ಸರ್ಕಾರ ಇನ್ನೂ‌ ಮಾಡಿಸಿಲ್ಲ. ಒಂದು‌ ಲಕ್ಷ ರೂಪಾಯಿ ಘೋಷಣೆ ಮಾಡಿದ್ದಾರೆ, ಯಾರ್ಯಾರಿಗೆ ಅನ್ನೋ ಸ್ಪಷ್ಟನೆ ಇಲ್ಲ. ಕೇಂದ್ರ ಸರ್ಕಾರ ನಾಲ್ಕು ಲಕ್ಷ ಕೊಡೋದಾಗಿ ಹೇಳಿ ಎಂಟೇ ಗಂಟೆಯಲ್ಲಿ ಆ ಆದೇಶ ವಾಪಸ್ ಪಡೆದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟೀಕಿಸಿದರು.

ಮೆಡಿಕಲ್ ಆಕ್ಸಿಜನ್ ಸಿಗದೇ ಮೃತಪಟ್ಟವರ ಸಂಖ್ಯೆ ಈಗ ಡಿಕ್ಲೇರ್ ಮಾಡಿರೋದಕ್ಕಿಂತ ಒಂದಕ್ಕೆ ಐದರಷ್ಟು ಹೆಚ್ಚಿದೆ. ಡೆತ್ ಆಡಿಟ್ ಮಾಡುತ್ತೇವೆ ಅಂತ ಹೇಳಿದ ಸಿಎಂ ಯಡಿಯೂರಪ್ಪ ಈ ಬಗ್ಗೆ ಆದೇಶ ಹೊರಡಿಸಿಲ್ಲ. ಕಾಂಗ್ರೆಸ್ ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ನೊಂದ ಜನರಿಗೆ, ಜೀವ ಜೀವನ ಕಳೆದುಕೊಂಡವರ ಮುಟ್ಟುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಎಐಸಿಸಿ ಕೂಡ ಇಡೀ ರಾಷ್ಟ್ರದ ವ್ಯಾಪ್ತಿಯಲ್ಲಿ ಒಂದು ತಿಂಗಳ ಅಭಿಯಾನ ನಡೆಸಲು ಮಾರ್ಗದರ್ಶನ ಮಾಡಿದೆ. ಡಿಸಿಸಿ ಅಧ್ಯಕ್ಷರು ಹಾಗೂ ಶಾಸಕರು, ಮಾಜಿ ಶಾಸಕರಿಗೆ ಈ ಕಾರ್ಯಕ್ರಮದ ವಿವರಣೆ ನೀಡಲಿದ್ದೇನೆ ಎಂದು ತಿಳಿಸಿದರು.

ಇದನ್ನೂ ಓದಿ: Karnataka Covid Update: ಕರ್ನಾಟಕದಲ್ಲಿ ಇಂದು 3,979 ಜನರಿಗೆ ಕೊವಿಡ್ ದೃಢ, 138 ಜನರು ನಿಧನ

ಕೊವಿಡ್ ಲಸಿಕೆ ನೀಡಿದ ಬಳಿಕ ಕಾಲೇಜು ಆರಂಭ; ಡಾ.ಸಿ.ಎನ್.ಅಶ್ವತ್ಥ್ ನಾರಾಯಣ