Chikkaballapur: ಪೌರ ಕಾರ್ಮಿಕರ ಜೊತೆ ಪೊರಕೆ ಹಿಡಿದು ನಗರ ಸ್ವಚ್ಛ ಮಾಡಿದ ಜಿಲ್ಲಾಧಿಕಾರಿ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 18, 2023 | 10:06 AM

ಇಂದು(ಜು.18)ಬೆಳಿಗ್ಗೆ 6 ಗಂಟೆಯಿಂದ ನಿರಂತರವಾಗಿ 8 ಗಂಟೆವರೆಗೂ ಪೌರಕಾರ್ಮಿಕರ ಜೊತೆ ಚಿಕ್ಕಬಳ್ಳಾಫುರ ಜಿಲ್ಲಾಧಿಕಾರಿಗಳಾದ ಪಿ.ಎನ್.ರವೀಂದ್ರ ಅವರು ಪೊರಕೆ ಹಿಡಿದು ನಗರ ಸ್ವಚ್ಚತೆ ಮಾಡಿದ್ದಾರೆ.

ಚಿಕ್ಕಬಳ್ಳಾಫುರ: ಇಂದು(ಜು.18)ಬೆಳಿಗ್ಗೆ 6 ಗಂಟೆಯಿಂದ ನಿರಂತರವಾಗಿ 8 ಗಂಟೆವರೆಗೂ ಪೌರಕಾರ್ಮಿಕರ ಜೊತೆ ಚಿಕ್ಕಬಳ್ಳಾಫುರ(Chikkaballapur) ಜಿಲ್ಲಾಧಿಕಾರಿಗಳಾದ ಪಿ.ಎನ್.ರವೀಂದ್ರ ಅವರು ಪೊರಕೆ ಹಿಡಿದು ನಗರ ಸ್ವಚ್ಚತೆ ಮಾಡಿದ್ದಾರೆ. ಜಿಲ್ಲಾಡಳಿತ ಹಸಿರು ಚಿಕ್ಕಬಳ್ಳಾಪುರ ಸ್ವಚ್ಚ ಚಿಕ್ಕಬಳ್ಳಾಫುರ ಅಭಿಯಾನ ಹಮ್ಮಿಕೊಂಡಿದ್ದು, ಇದರಡಿ ಸಲಿಕೆ, ಪೊರಕೆ ಹಿಡಿದು ಪೌರ ಕಾರ್ಮಿಕರಂತೆ ಸ್ವಚ್ಚತಾ ಕಾರ್ಯ ಮಾಡಿದ್ದಾರೆ. ಇನ್ನು ಇವತ್ತು ಒಂದೇ ದಿನವಲ್ಲ ಪ್ರತಿ ಮಂಗಳವಾರ ಕೂಡ ಸ್ವಚ್ಚತೆಯನ್ನ ಮಾಡುತ್ತಾ ಬರುತ್ತಿದ್ದಾರೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ