ಅಂತರ್ಜಾತಿ ವಿವಾಹ: ಕುಟುಂಬದ ವಿರೋಧದ ನಡುವೆಯೂ ಪೊಲೀಸರ ಸಮ್ಮುಖದಲ್ಲಿ ಒಂದಾದ ಪ್ರೇಮಿಗಳು

| Updated By: ಆಯೇಷಾ ಬಾನು

Updated on: Aug 07, 2023 | 3:01 PM

ಅನ್ಯ ಕೋಮಿನ ಯುವಕನ ಜೊತೆಗಿನ ಪ್ರೀತಿ ಹಾಗೂ ಮದುವೆಗೆ ಯುವತಿಯ ಕುಟುಂಬಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಗುಡಿಬಂಡೆ ಪೊಲೀಸ್ ಠಾಣೆ ಎದುರೇ ಕೂಗಾಟ ರಂಪಾಟ ನಡೆಸಿದರು. ಕೊನೆಗೆ ಯುವತಿ ಹೇಳಿಕೆಯಂತೆ ಯುವಕನ ಜೊತೆ ಕಳಿಸಿಕೊಡಲಾಗಿದೆ.

ಚಿಕ್ಕಬಳ್ಳಾಪುರ, ಆ.07: ಪ್ರೇಮಿಗಳ ಅಂತರ್ಜಾತಿ ಪ್ರೀತಿಗೆ ಪೋಷಕರಿಂದಲೇ ವಿರೋಧ ವ್ಯಕ್ತಪಡಿಸಿ ಪೊಲೀಸ್ ಠಾಣೆ ಎದುರೇ ಹೈಡ್ರಾಮಾ ನಡೆದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ಪೊಲೀಸ್ ಠಾಣೆ ಎದುರು ನಡೆದಿದೆ. ಚಿಕ್ಕಬಳ್ಳಾಪುರ ತಾಲೂಕಿನ ಕಾಮಶೆಟ್ಟಿಹಳ್ಳಿಯ ಕೆ ಎಂ ಮಧುಸೂದನ್ ಹಾಗೂ ಗುಡಿಬಂಡೆ ತಾಲೂಕಿನ ಜಂಬಿಗೇಮರದ ಹಳ್ಳಿಯ ಜೆ ಎಸ್ . ಭಾನುಶ್ರೀ ಜೋಡಿ ಚಿಕ್ಕಬಳ್ಳಾಪುರ ನಗರದ ಮಹೇಶ್ವರಿ ಡಿಗ್ರಿ ಕಾಲೇಜಿನಲ್ಲಿ ಬಿಕಾಂ ಓದುತ್ತಿರುವ ವೇಳೆ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದಾರೆ.

ಆದರೆ ಅನ್ಯ ಕೋಮಿನ ಯುವಕನ ಜೊತೆಗಿನ ಪ್ರೀತಿ ಹಾಗೂ ಮದುವೆಗೆ ಯುವತಿಯ ಕುಟುಂಬಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗುಡಿಬಂಡೆ ಪೊಲೀಸ್ ಠಾಣೆ ಎದುರೇ ಕೂಗಾಟ ರಂಪಾಟ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ ಪೊಲೀಸರ ಮೇಲೆಯೇ ವಾಗ್ವಾದಕ್ಕಿಳಿದಿದು ಯುವತಿಯನ್ನ ತಮ್ಮೊಂದಿಗೆ ಕಳಿಸುವಂತೆ ಒತ್ತಾಯಿಸಿದರು. ಈ ವೇಳೆ ಪೊಲೀಸರು ಯುವತಿಯ ಹೇಳಿಕೆಯನ್ನು ಪಡೆದ ವೇಳೆ ಪ್ರೀತಿಸಿದ ಯುವಕನೊಂದಿಗೆ ಹೋಗುವುದಾಗಿ ಯುವತಿ ಹೇಳಿಕೆ ಪಡೆದ ನಂತರ ಪೊಲೀಸರು ವಿರೋಧ ವ್ಯಕ್ತವಾದರೂ ಯುವಕನೊಂದಿಗೆ ಕಳಿಸಿದರು. ಕೊನೆಗೆ ಪೊಲೀಸ್ ಬಂದೋಬಸ್ತ್ ನಲ್ಲಿ ಪ್ರೇಮಿಗಳನ್ನು ಕಳುಹಿಸಿ ಕೊಡಲಾಯಿತು.

Follow us on