ಸ್ಪಂದನ ವಿಜಯ್ ಸಾವು ಅತ್ಯಂತ ಅನಿರೀಕ್ಷಿತ ಮತ್ತು ಆಘಾತಕಾರಿ: ಹೆಚ್ ಡಿ ಕುಮಾರಸ್ವಾಮಿ, ಜೆಡಿಎಸ್ ಶಾಸಕ
ಕೋವಿಡ್ ಮಹಾಮಾರಿ ಮನುಕುಲದಲ್ಲಿ ಹಾಹಾಕಾರ ಸೃಷ್ಟಿಸಿದ ಬಳಿಕ ಚಿಕ್ಕ ವಯಸ್ಸಿನ ಜನ ಹಾರ್ಟ್ ಅಟ್ಯಾಕ್ ಗೆ ಒಳಗಾಗುತ್ತಿರೋದು ಸಾಮಾನ್ಯವಾಗಿ ಬಿಟ್ಟಿದೆ ಎಂದು ಕುಮಾರಸ್ವಾಮಿ ಹೇಳಿದರು.
ಬೆಂಗಳೂರು: ಸ್ಪಂದನ ವಿಜಯ್ (Spandana Vijay) ಪತಿ ವಿಜಯರಾಘವೇಂದ್ರ ಜೊತೆ ಕೇವಲ 16 ವರ್ಷಗಳ ದಾಂಪತ್ಯದ ಬಳಿಕ ಅವರನ್ನು ಅಗಲಿದ್ದಾರೆ. ಸ್ಪಂದನ ಅವರ ಆಘಾತಕಾರಿ ಸಾವಿಗೆ ಗಣ್ಯರು ಶೋಕ ವ್ಯಕ್ತಪಡಿಸುತ್ತಿದ್ದಾರೆ. ಚಿತ್ರ ನಿರ್ಮಾಕರೂ ಆಗಿರುವ ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ಧುರೀಣ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಶೋಕ ವ್ಯಕ್ತಪಡಿಸಿದ್ದಾರೆ. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಸ್ಪಂದನ ಸಾವು ಅತ್ಯಂತ ಅನಿರೀಕ್ಷಿತ (unexpected) ಮತ್ತು ಆಘಾತಕಾರಿ (shocking) ಎಂದು ಹೇಳಿದರು. ವಿಜಯರಾಘವೇಂದ್ರ ಕುಟುಂಬ ಅಪಾರ ದುಃಖದಲ್ಲಿದೆ, ಚಿಕ್ಕ ವಯಸ್ಸಿನಲ್ಲೇ ಸ್ಪಂದನ ಹೃದಯಾಘಾಕ್ಕೊಳಗಾದ ಬಗ್ಗೆ ಆತಂಕ ವ್ಯಕ್ತಪಡಿಸಿದ ಕುಮಾರಸ್ವಾಮಿ, ಕೋವಿಡ್ ಮಹಾಮಾರಿ ಮನುಕುಲದಲ್ಲಿ ಹಾಹಾಕಾರ ಸೃಷ್ಟಿಸಿದ ಬಳಿಕ ಚಿಕ್ಕ ವಯಸ್ಸಿನ ಜನ ಹಾರ್ಟ್ ಅಟ್ಯಾಕ್ ಗೆ ಒಳಗಾಗುತ್ತಿರೋದು ಸಾಮಾನ್ಯವಾಗಿ ಬಿಟ್ಟಿದೆ, ಜನ ಅದರಲ್ಲೂ ವಿಶೇಷವಾಗಿ ಕೋರೋನಾ ಸೋಂಕಿನಿಂದ ಬಳಲಿದವರು ಆಗಾಗ್ಗೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಅಂತ ಸಲಹೆ ನೀಡಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ