Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕ ವಯಸ್ಸು ಮತ್ತು ಆರೋಗ್ಯವಂತರಾಗಿದ್ದ ಸ್ಪಂದನ ವಿಜಯ್ ಹಠಾತ್ ಸಾವು ತೀವ್ರ ದುಃಖಕರ: ಡಿಕೆ ಶಿವಕುಮಾರ್, ಉಪ ಮುಖ್ಯಮಂತ್ರಿ

ಚಿಕ್ಕ ವಯಸ್ಸು ಮತ್ತು ಆರೋಗ್ಯವಂತರಾಗಿದ್ದ ಸ್ಪಂದನ ವಿಜಯ್ ಹಠಾತ್ ಸಾವು ತೀವ್ರ ದುಃಖಕರ: ಡಿಕೆ ಶಿವಕುಮಾರ್, ಉಪ ಮುಖ್ಯಮಂತ್ರಿ

ಅರುಣ್​ ಕುಮಾರ್​ ಬೆಳ್ಳಿ
|

Updated on:Aug 07, 2023 | 2:52 PM

ಸ್ಪಂದನ ಕುಟುಂಬ ಚೆನ್ನಾಗಿ ಗೊತ್ತು, ಅವರ ತಂದೆ ಮತ್ತು ಸಹೋದರ ಪಕ್ಷದ ಅಭ್ಯರ್ಥಿಗಳಾಗಿದ್ದರು, ಅವರ ಚಿಕ್ಕಪ್ಪ ಬಿಕೆ ಹರಿಪ್ರಸಾದ್ ತಮ್ಮ ಪಕ್ಷದ ಹಿರಿಯ ನಾಯಕರಾಗಿದ್ದಾರೆ ಎಂದು ಶಿವಕುಮಾರ್ ಹೇಳಿದರು.

ಬೆಂಗಳೂರು: ಸ್ಯಾಂಡಲ್ ವುಡ್ ಹೆಸರಾಂತ ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನ ವಿಜಯ್ (Spandana Vijay) ಸಾವಿಗೆ ಉಪ ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಶೋಕ ವ್ಯಕ್ತಪಡಿಸಿದ್ದಾರೆ. ಬೆಂಗಳೂರಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಶಿವಕುಮಾರ್, ಚಿಕ್ಕ ವಯಸ್ಸಿನಲ್ಲಿ ಸ್ಪಂದನ ಸಾವನ್ನಪ್ಪಿರೋದು ಬಹಳ ದುಃಖಕರ ಸಂಗತಿ, ಅವರ ನಿಧನದ ವಿಷಯವನ್ನು ತನ್ನ ಪತ್ನಿ ಮೆಸೇಜ್ ಮೂಲಕ ತಿಳಿಸಿದರು ಅಂತ ಹೇಳಿದರು. ವಿಜಯರಾಘವೇಂದ್ರ ತಮ್ಮ ಸಿನಿಮಾಗೆ ಪ್ರಶಸ್ತಿ ಬಂದಾಗ ನಿವೇಶನಕ್ಕಾಗಿ (site) ಸಂಪರ್ಕಿಸಿದ್ದರು, ಅವರಿಗದು ಅಲಾಟ್ ಆಗಿದೆಯೋ ಇಲ್ವೋ ಅಂತ ಪರಿಶೀಲಿಸಬೇಕು ಎಂದು ಅವರು ಹೇಳಿದರು. ಸ್ಪಂದನ ಕುಟುಂಬ ಚೆನ್ನಾಗಿ ಗೊತ್ತು, ಅವರ ತಂದೆ (ಬಿಕೆ ಶಿವರಾಂ) ಮತ್ತು ಸಹೋದರ (ರಕ್ಷಿತ್) ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾಗಿದ್ದರು, ಅವರ ಚಿಕ್ಕಪ್ಪ ಬಿಕೆ ಹರಿಪ್ರಸಾದ್ ತಮ್ಮ ಪಕ್ಷದ ಹಿರಿಯ ನಾಯಕರಾಗಿದ್ದಾರೆ ಎ ಭಗವಂತ ಅವರೆಲ್ಲರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಶಿವಕುಮಾರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Aug 07, 2023 02:51 PM