ಬೈಕ್ ರ್ಯಾಲಿ ಮುಗಿಸಿ ನೇರ ಬಾರ್‌ಗೆ ಎಂಟ್ರಿ: ಕನ್ನಡ ಧ್ವಜ ಹಿಡಿದು ಕುಡಿದ ಮದ್ಯಪ್ರಿಯರು

Edited By:

Updated on: Nov 01, 2026 | 5:21 PM

ಚಿಕ್ಕಬಳ್ಳಾಪುರದಲ್ಲಿ 71ನೇ ಕನ್ನಡ ರಾಜ್ಯೋತ್ಸವದಂದು ಅಹಿತಕರ ಘಟನೆಯೊಂದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಬೈಕ್ ರ್ಯಾಲಿ ನಂತರ ಮದ್ಯಪ್ರಿಯರು ಬಾರ್‌ಗಳಿಗೆ ನುಗ್ಗಿ, ಕನ್ನಡ ಧ್ವಜ ಹಿಡಿದುಕೊಂಡೇ ಮದ್ಯಪಾನ ಮಾಡಿದ್ದಾರೆ. ನಾಡಹಬ್ಬ ಮತ್ತು ಸ್ವಾಭಿಮಾನದ ಸಂಕೇತವಾದ ಧ್ವಜಕ್ಕೆ ಅಗೌರವ ತೋರಿದ್ದಕ್ಕೆ ಸ್ಥಳೀಯರು ಹಾಗೂ ಕನ್ನಡಪರ ಸಂಘಟನೆಗಳು ತೀವ್ರ ಬೇಸರ ವ್ಯಕ್ತಪಡಿಸಿವೆ.

ಚಿಕ್ಕಬಳ್ಳಾಪುರ, ನ.1: ಒಂದೆಡೆ ನಾಡಿನಾದ್ಯಂತ 71ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ-ಸಡಗರ ಮುಗಿಲುಮುಟ್ಟಿದ್ದರೆ, ಇನ್ನೊಂದೆಡೆ ಚಿಕ್ಕಬಳ್ಳಾಪುರದಲ್ಲಿ ರಾಜ್ಯೋತ್ಸವದ ಹೆಸರಿನಲ್ಲಿ ಮದ್ಯಪ್ರಿಯರು ಮಾಡಿದ ಎಡವಟ್ಟು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕನ್ನಡ ರಾಜ್ಯೋತ್ಸವ ಆಚರಣೆಯ ದಿನವೇ ಮದ್ಯಪ್ರಿಯರು ಬಾರ್‌ಗಳಿಗೆ ಮುಗಿಬಿದ್ದು ಕುಡಿದು ಕುಣಿದ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ಜರುಗಿದೆ. ನಗರದ ಸೋಲಾಲಪ್ಪನ ದಿನ್ನೆ ಬಳಿ ಇರುವ ಎನ್.ಎನ್ ಬಾರ್ ಆಂಡ್ ರೆಸ್ಟೋರೆಂಟ್​​​​ನಲ್ಲಿ ಮದ್ಯದ ವ್ಯಾಪಾರ ಜೋರಾಗಿ ನಡೆದಿದ್ದು, ಮದ್ಯಪ್ರಿಯರ ದಂಡೇ ಅಲ್ಲಿ ಜಮಾಯಿಸಿತ್ತು. ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಗರದಲ್ಲಿ ಆಯೋಜಿಸಲಾಗಿದ್ದ ಬೃಹತ್ ಬೈಕ್ ರ್ಯಾಲಿಯಲ್ಲಿ ಭಾಗವಹಿಸಿದ್ದ ಕೆಲ ಯುವಕರು ಹಾಗೂ ಮದ್ಯಪ್ರಿಯರು, ರ್ಯಾಲಿ ಮುಗಿಯುತ್ತಿದ್ದಂತೆ ನೇರವಾಗಿ ಬಾರ್ ಕಡೆಗೆ ಹೆಜ್ಜೆ ಹಾಕಿದ್ದಾರೆ. ಬೀರ್ ಹಾಗೂ ಐ.ಎಂ.ಎಫ್.ಎಲ್ ಮದ್ಯದ ಬಾಟಲಿಗಳನ್ನು ಖರೀದಿಸಲು ಬಾರ್ ಎದುರು ಜನ ಮುಗಿಬಿದ್ದರು. ಬಾರ್‌ನ ಒಳಗಡೆ ಹಾಗೂ ಹೊರಗಡೆ ಜಾಗವಿಲ್ಲದೆ ನಿಂತಲ್ಲೇ ನಿಂತು ಕುಡಿಯುತ್ತಿದ್ದ ಕೆಲವರು, ಕೈಯಲ್ಲಿ ಕನ್ನಡದ ಹಳದಿ-ಕೆಂಪು ಬಾವುಟ ಹಿಡಿದುಕೊಂಡೇ ಮದ್ಯಸೇವನೆ ಮಾಡುತ್ತಿದ್ದ ದೃಶ್ಯಗಳು ಕಂಡುಬಂದವು. ನಾಡಹಬ್ಬ ಹಾಗೂ ಸ್ವಾಭಿಮಾನದ ಸಂಕೇತವಾದ ಕನ್ನಡ ಧ್ವಜವನ್ನು ಹಿಡಿದುಕೊಂಡು ಬಾರ್ ಎದುರು ಈ ರೀತಿ ಮದ್ಯ ಸೇವನೆ ಮಾಡಿರುವುದಕ್ಕೆ ಸ್ಥಳೀಯ ಸಾರ್ವಜನಿಕರು ಹಾಗೂ ಕನ್ನಡಪರ ಸಂಘಟನೆಗಳ ನಾಯಕರು ತೀವ್ರ ಬೇಸರ ಮತ್ತು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ ಎಂಬ ಸುಂದರ ಊರು ನನಗೆ ಸುಂದರವಾದ ಬದುಕನ್ನು ಕಟ್ಟಿಕೊಟ್ಟಿದೆ. 18 ವರ್ಷಗಳಿಂದ ಹಗಲುರಾತ್ರಿ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಜನ ಸೇವೆಯಲ್ಲಿದ್ದೇನೆ. ಶಿಕ್ಷಣವೆಲ್ಲ ಬೆಂಗಳೂರಿನಲ್ಲಿ. ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯಲ್ಲಿ ಪದವಿ. ಬೆಂಗಳೂರು ವಿವಿಯಲ್ಲಿ ಬಿ.ಸಿ.ಎ ವ್ಯಾಸಂಗ. ವಿದ್ಯಾರ್ಥಿದೆಸೆಯಿಂದಲೆ ಟಿವಿ9 ಕನ್ನಡದಲ್ಲಿ ಕೆಲಸ.

Read More