Karnataka Assembly Polls Results: ಚಿಕ್ಕಬಳ್ಳಾಪುರದ ಜನ ಮನೆಮಗನಂತೆ ಪ್ರೀತಿ ಗೆಲ್ಲಿಸಿದ್ದಾರೆ, ಮನೆಮಗನಾಗಿ ಅವರ ಸೇವೆ ಮಾಡುವೆ: ಪ್ರದೀಪ್ ಈಶ್ವರ್
ಪ್ರಚಾರದ ಸಮಯದಲ್ಲಿ ಪ್ರದೀಪ್ ತನಗೆ ಸ್ಟಾರ್ ಪ್ರಚಾರಕರು ಬೇಕಿಲ್ಲ, ಸುಧಾಕರ್ ಅವರನ್ನು ಸೋಲಿಸಲು ತಾನೊಬ್ಬನೇ ಸಾಕು ಅಂತ ಹೇಳಿದ್ದರು.
ಚಿಕ್ಕಬಳ್ಳಾಪುರ: ಬಿಜೆಪಿಯ ಪ್ರಬಲ ಪ್ರತಿಸ್ಪರ್ಧಿ ಮತ್ತು ಸಚಿವರೂ ಅಗಿದ್ದ ಡಾ ಕೆ ಸುಧಾಕರ್ (Dr K Sudhakar) ಅವರನ್ನು ಮಣಿಸಿ ಗೆದ್ದಿರುವ ಕಾಂಗ್ರೆಸ್ ಪಕ್ಷದ ಪ್ರದೀಪ್ ಈಶ್ವರ್ (Pradeep Eshwar) ಪ್ರಚಾರದ ಸಮಯದಲ್ಲಿ ತನಗೆ ಸ್ಟಾರ್ ಪ್ರಚಾರಕರು ಬೇಕಿಲ್ಲ, ಸುಧಾಕರ್ ಅವರನ್ನು ಸೋಲಿಸಲು ತಾನೊಬ್ಬನೇ ಸಾಕು ಅಂತ ಹೇಳಿದ್ದರು. ಅವರ ಆತ್ಮವಿಶ್ವಾಸವನ್ನು (confidence) ಮೆಚ್ಚಲೇ ಬೇಕು ಮಾರಾಯ್ರೇ. ಹೇಳಿದ್ದನ್ನು ಅವರು ಮಾಡಿ ತೋರಿಸಿದ್ದಾರೆ. ಗೆಲುವಿನ ನಂತರ ಚಿಕ್ಕಬಳ್ಳಾಪುರ ಟಿವಿ9 ವರದಿಗಾರನೊಂದಿಗೆ ಮಾತಾಡಿದ ಪ್ರದೀಪ್ ಈಶ್ವರ್, ದೊಡ್ಡಸ್ತಿಕೆ ಪ್ರದರ್ಶಿಸಿದೆ ಕ್ಷೇತ್ರದ ಜನ ತನ್ನನ್ನು ಮನೆಮಗನಂತೆ ಪ್ರೀತಿತೋರಿ ಗೆಲ್ಲಿಸಿದ್ದಾರೆ, ಮನೆಮಗನಂತೆಯೇ ಪ್ರತಿಯೊಬ್ಬರ ಮನೆಗೆ ಹೋಗಿ ಅವರ ಕಷ್ಟಸುಖ ವಿಚಾರಿಸುವುದಾಗಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ