Pradeep Eshwar: ರಾಜಕೀಯ ನಾಯಕತ್ವಕ್ಕೆ ಹೊಸ ವ್ಯಾಖ್ಯಾನ ನೀಡುತ್ತಿರುವ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್
ರಾಜಕೀಯ ವಲಯದಲ್ಲಿ ದಿಗ್ಭ್ರಮೆ ಮತ್ತು ಸಂಚಲನ ಮೂಡಿಸಿರುವ 38ರ ಯುವಕ ಪ್ರದೀಪ್, ಅಧಿಕಾರಿಗಳೊಂದಿಗೆ ಕ್ಷೆತ್ರದಲ್ಲಿ ಸುತ್ತುತ್ತ ಜನರ ಕುಂದು ಕೊರತೆಗಳನ್ನು ಆಲಿಸುತ್ತಿದ್ದಾರೆ.
ಚಿಕ್ಕಬಳ್ಳಾಪುರ: ರಾಜಕೀಯ ಕ್ಷೇತ್ರಕ್ಕೆ ತೀರ ಹೊಸಬ, ದೈತ್ಯಸಂಹಾರಿ ಪ್ರದೀಪ್ ಈಶ್ವರ್ (Pradeep Eshwar) ರಾಜಕೀಯಕ್ಕೆ, ರಾಜಕೀಯ ಧುರೀಣತ್ವಕ್ಕೆ ಹೊಸ ಭಾಷ್ಯ ಬರೆಯುವ ಲಕ್ಷಣಗಳು ಕಾಣಿಸುತ್ತಿವೆ. ರಾಜ್ಯ ವಿಧಾನಸಭಾ ಚುನಾವಣೆ (assembly polls) ಫಲಿತಾಂಶ ಪ್ರಕಟವಾಗಿ ಇಂದಿಗೆ ಕೇವಲ 5 ನೇ ದಿನ. ಆದರೆ, ಚಿಕ್ಕಬಳ್ಳಾಪುರದಲ್ಲಿ ಬಿಜೆಪಿಯ ಹೆವಿವೇಟ್ ಅನಿಸಿದ್ದ ಮಾಜಿ ಸಚಿವ ಡಾ ಕೆ ಸುಧಾಕರ್ (Dr K Sudhakar) ಅವರನ್ನು ಸ್ಟಾರ್ ಪ್ರಚಾರಕರ ನೆರವಿಲ್ಲದೆ ಸೋಲಿಸಿ ರಾಜಕೀಯ ವಲಯದಲ್ಲಿ ದಿಗ್ಭ್ರಮೆ ಮತ್ತು ಸಂಚಲನ ಮೂಡಿಸಿರುವ 38ರ ಯುವಕ ಪ್ರದೀಪ್, ಆಗಲೇ ಅಧಿಕಾರಿಗಳೊಂದಿಗೆ ಕ್ಷೆತ್ರದಲ್ಲಿ ಸುತ್ತುತ್ತ ಜನರ ಕುಂದು ಕೊರತೆಗಳನ್ನು ಆಲಿಸುತ್ತಿದ್ದಾರೆ. ಹಿಂದೂ-ಮುಸಲ್ಮಾನರೆನ್ನದೆ ಎಲ್ಲರ ಮನೆಗಳಿಗೆ ಭೇಟಿ ನೋಡಿ ಅವರ ಕಷ್ಟ ಸುಖಗಳನ್ನು ಆಲಿಸುತ್ತಿದ್ದಾರೆ. ಅಸಲು ರಾಜಕೀಯ ನಾಯಕತ್ವ ಅಂದರೆ ಇದೇ ಅಲ್ಲವೇ? ಪ್ರದೀಪ್ ಈಶ್ವರ್ ನಮ್ಮೆಲ್ಲರ ಅಭಿನಂದನೆಗೆ ಅರ್ಹರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ರೀಲ್ಸ್ ತಂದ ಆಪತ್ತು: ಇನ್ಸ್ಟಾಗ್ರಾಮ್ ಬಳಸುವವರು ಈ ವಿಡಿಯೋನ ಒಮ್ಮೆ ನೋಡಿ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!

