Loading video

ಬೆಟ್ಟದ ತುಂಬೆಲ್ಲ ಜನವೋ, ಜನ: ಬರಿಗಾಲಲ್ಲೇ ಬೆಟ್ಟ ಹತ್ತಿ ದೇವಿರಮ್ಮನ ದರ್ಶನ ಪಡೆದ ಭಕ್ತರು

| Updated By: ಗಂಗಾಧರ​ ಬ. ಸಾಬೋಜಿ

Updated on: Nov 12, 2023 | 9:23 AM

ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಗ್ರಾಮದಲ್ಲಿರುವ ಬಿಂಡಿಗ ದೇವಿರಮ್ಮ ಬೆಟ್ಟದ ತುದಿಯಲ್ಲಿ ನೆಲೆಸಿದ್ದಾಳೆ. ವರ್ಷಕ್ಕೆ ಒಮ್ಮೆ ಮಾತ್ರ ದೇವಿರಮ್ಮ ಭಕ್ತರಿಗೆ ದರ್ಶನ ನೀಡುತ್ತಾಳೆ. ಹಾಗಾಗಿ ದೇವರ ದರ್ಶನಕ್ಕಾಗಿ ಸುಮಾರು 50 ಸಾವಿರಕ್ಕೂ ಅಧಿಕ ಭಕ್ತರು ಬರಿಗಾಲಲ್ಲೇ ಬೆಟ್ಟ ಹತ್ತಿ, ದೇವರ ದರ್ಶನ ಮಾಡುತ್ತಾರೆ. ಆ ಮೂಲಕ ದೇವಿರಮ್ಮನ ಕೃಪೆಗೆ ಪಾತ್ರರಾಗುತ್ತಾರೆ. 3 ಸಾವಿರ ಅಡಿಗಳ ಎತ್ತರವಿರುವ ಬೆಟ್ಟದ ಮೇಲೆ ದೇವಿರಮ್ಮ ನೆಲೆಸಿದ್ದಾಳೆ.

ಚಿಕ್ಕಮಗಳೂರು, ನವೆಂಬರ್​​​ 12: ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಗ್ರಾಮದಲ್ಲಿರುವ ಬಿಂಡಿಗ ದೇವಿರಮ್ಮ ಬೆಟ್ಟದ ತುದಿಯಲ್ಲಿ ನೆಲೆಸಿದ್ದಾಳೆ. ವರ್ಷಕ್ಕೆ ಒಮ್ಮೆ ಮಾತ್ರ ದೇವೀರಮ್ಮ ಭಕ್ತರಿಗೆ (Devotees) ದರ್ಶನ ನೀಡುತ್ತಾಳೆ. ಹಾಗಾಗಿ ದೇವರ ದರ್ಶನಕ್ಕಾಗಿ ಸುಮಾರು 50 ಸಾವಿರಕ್ಕೂ ಅಧಿಕ ಭಕ್ತರು ಬರಿಗಾಲಲ್ಲೇ ಬೆಟ್ಟ ಹತ್ತಿ, ದೇವರ ದರ್ಶನ ಮಾಡುತ್ತಾರೆ. ಆ ಮೂಲಕ ದೇವಿರಮ್ಮನ ಕೃಪೆಗೆ ಪಾತ್ರರಾಗುತ್ತಾರೆ. 3 ಸಾವಿರ ಅಡಿಗಳ ಎತ್ತರವಿರುವ ಬೆಟ್ಟದ ಮೇಲೆ ದೇವಿರಮ್ಮ ನೆಲೆಸಿದ್ದಾಳೆ. ಆಕೆಯ ದರ್ಶನಕ್ಕಾಗಿ ರಾಜ್ಯದ ಮೂಲೆ ಮೂಲೆಯಿಂದ ಭಕ್ತರು ಆಗಮಿಸುತ್ತಾರೆ. ದೀಪಾವಳಿ ಅಂಗವಾಗಿ ದೇವರಿಗೆ ಮೂರು ದಿನಗಳ ಕಾಲ ವಿಶೇಷ ಪೂಜೆ ಮಾಡಲಾಗುತ್ತದೆ. ಬೆಟ್ಟದ ತುಂಬೆಲ್ಲ ಜನವೋ, ಜನ. ಇಡೀ ರಾತ್ರಿ ಬರಿಗಾಲಲ್ಲಿ ಬೆಟ್ಟ ಹತ್ತಿದ್ದಾರೆ. ಜಿಲ್ಲಾಡಳಿತ, ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಭಸ್ತ ಮಾಡಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Nov 12, 2023 09:21 AM