ಮಜ್ಜಿಗೆ ಹಾಗೂ ಕುಡಿಯುವ ನೀರಿನ ಪ್ಯಾಕೇಟ್ಗಾಗಿ ಮುಗಿಬಿದ್ದ ಜನರು: ಕಸದಂತೆ ಬಿಸಾಡಿದ ಸಿಬ್ಬಂದಿ
ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಯರಗೋಳ್ ಡ್ಯಾಂನ್ನು ಸಿಎಂ ಸಿದ್ದರಾಮಯ್ಯ ಇಂದು ಉದ್ಘಾಟನೆ ಮಾಡಿದ್ದಾರೆ. ಈ ವೇಳೆ ಮಜ್ಜಿಗೆ ಹಾಗೂ ಕುಡಿಯುವ ನೀರಿನ ಪ್ಯಾಕೇಟ್ಗಾಗಿ ಜನರು ಮುಗಿಬಿದ್ದಿರುವಂತಹ ಘಟನೆ ಕಂಡುಬಂದಿದೆ. ಒಂದೆಡೆ ಸೇರಿದ್ದ ಜನರಿಗೆ ವಿತರಿಸದೇ ದೂರದಿಂದ ಸಿಬ್ಬಂದಿಗಳು ಬಿಸಾಡಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋಲಾರ, ನವೆಂಬರ್ 11: ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಯರಗೋಳ್ ಡ್ಯಾಂ (yaragol dam) ನ್ನು ಸಿಎಂ ಸಿದ್ದರಾಮಯ್ಯ ಇಂದು ಉದ್ಘಾಟನೆ ಮಾಡಿದ್ದಾರೆ. ಈ ವೇಳೆ ಮಜ್ಜಿಗೆ ಹಾಗೂ ಕುಡಿಯುವ ನೀರಿನ ಪ್ಯಾಕೇಟ್ಗಾಗಿ ಜನರು ಮುಗಿಬಿದ್ದಿರುವಂತಹ ಘಟನೆ ಕಂಡುಬಂದಿದೆ. ಅಷ್ಟೇ ಅಲ್ಲದೆ ಕಸದಂತೆ ಮಜ್ಜಿಗೆ, ನೀರಿನ ಪ್ಯಾಕ್ ಬಿಸಾಡಿದ ಸಿಬ್ಬಂದಿ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದೆಡೆ ಸೇರಿದ್ದ ಜನರಿಗೆ ವಿತರಿಸದೇ ದೂರದಿಂದ ಸಿಬ್ಬಂದಿಗಳು ಬಿಸಾಡಿದ್ದಾರೆ ಎನ್ನಲಾಗುತ್ತಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos