ದತ್ತಜಯಂತಿ: ಶೋಭಾಯಾತ್ರೆಯ ಮನಮೋಹಕ ದೃಶ್ಯ ಡ್ರೋನ್​ನಲ್ಲಿ ಕಂಡಿದ್ದು ಹೀಗೆ

| Updated By: ಗಂಗಾಧರ​ ಬ. ಸಾಬೋಜಿ

Updated on: Dec 13, 2024 | 8:32 PM

ಚಿಕ್ಕಮಗಳೂರಿನಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದ ನೇತೃತ್ವದಲ್ಲಿ ದತ್ತ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಸಾವಿರಾರು ಭಕ್ತರು ಭಾಗವಹಿಸಿದ ಈ ಬೃಹತ್ ಶೋಭಾಯಾತ್ರೆ ಹನುಮಂತಪ್ಪ ಸರ್ಕಲ್‌ನಿಂದ ಎಂ.ಜಿ. ರಸ್ತೆಯವರೆಗೆ ನಡೆಯಿತು. ಡ್ರೋನ್ ಕ್ಯಾಮೆರಾ ಮೂಲಕ ಈ ಮೆರವಣಿಗೆಯ ಅದ್ಭುತ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರು.

ಚಿಕ್ಕಮಗಳೂರು, ಡಿಸೆಂಬರ್​ 13: ವಿಹೆಚ್​ಪಿ ಮತ್ತು ಭಜರಂಗದಳ ನೇತೃತ್ವದಲ್ಲಿ ದತ್ತಜಯಂತಿ ಹಿನ್ನೆಲೆ ಚಿಕ್ಕಮಗಳೂರು ನಗರದಲ್ಲಿ ಬೃಹತ್ ಶೋಭಾಯಾತ್ರೆ (Shobha Yatra) ಮಾಡಲಾಗಿದೆ. ಡಿ.ಜೆ ಸದ್ದಿಗೆ ಯುವ ಸಮೂಹ ಕುಳಿತು ಕುಪ್ಪಳಿಸಿದೆ. ದತ್ತಾತ್ರೇಯ ಸ್ವಾಮಿಯ ವಿಗ್ರಹದೊಂದಿಗೆ ಸಾಗಿದ ಶೋಭಾಯಾತ್ರೆ ಹನುಮಂತಪ್ಪ ಸರ್ಕಲ್, ಎಂಜಿ ರಸ್ತೆ ಮೂಲಕ ನಾಲ್ಕು ಕಿಮೀ ವರೆಗೂ ಶೋಭಾಯಾತ್ರೆ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗಿಯಾಗಿದ್ದರು. ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿತ್ತು. ಶೋಭಾಯಾತ್ರೆಯ ಮನಮೋಹಕ ದೃಶ್ಯ ಡ್ರೋನ್ ಕ್ಯಾಮರಾದಲ್ಲಿ‌ ಸೆರೆಯಾಗಿದ್ದು ಹೀಗೆ.

ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.