ರೋಗಿಗಳನ್ನೂ ಲೆಕ್ಕಿಸದೆ ಆಸ್ಪತ್ರೆಯೊಳಗೆ ಜೋರಾಗಿ ಹಾಡು ಹಾಕಿ ನರ್ಸ್​ಗಳ ಡ್ಯಾನ್ಸ್

ರೋಗಿಗಳನ್ನೂ ಲೆಕ್ಕಿಸದೆ ಆಸ್ಪತ್ರೆಯೊಳಗೆ ಜೋರಾಗಿ ಹಾಡು ಹಾಕಿ ನರ್ಸ್​ಗಳ ಡ್ಯಾನ್ಸ್

ಸುಷ್ಮಾ ಚಕ್ರೆ
|

Updated on: Dec 13, 2024 | 8:59 PM

ಸರ್ಕಾರಿ ಆಸ್ಪತ್ರೆಯ ನರ್ಸ್​ಗಳು ತಮ್ಮ ವೃತ್ತಿ ನೀತಿಯನ್ನು ಮರೆತಿದ್ದಾರೆ. ಅವರು ಅತಿಯಾದ ಉತ್ಸಾಹದಲ್ಲಿ ಲೌಡ್​ ಸ್ಪೀಕರ್​​​ನಲ್ಲಿ ಹಾಡು ಹಾಕಿಕೊಂಡು ರೋಗಿಗಳ ಮಧ್ಯೆಯೇ ನೃತ್ಯ ಮಾಡಿದ್ದಾರೆ. ಇದು ರೋಗಿಗಳಿಗೆ ಸಿಟ್ಟು ತರಿಸಿದೆ. ಕರ್ತವ್ಯ ಮರೆತು ಕೋಲಾಟವಾಡುತ್ತಾ ರೀಲ್ಸ್​ ಮಾಡಿದ ನರ್ಸ್​ಗಳ ಬಗ್ಗೆ ಭಾರೀ ಅಸಮಾಧಾನ ವ್ಯಕ್ತವಾಗಿದೆ.

ತೆಲಂಗಾಣದ ಜಗ್ತಿಯಾಲ ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್​ಗಳ ನೃತ್ಯಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಕರ್ತವ್ಯ ನಿರತ ನರ್ಸ್​ಗಳು ಮತ್ತು ವೈದ್ಯಕೀಯ ಸಿಬ್ಬಂದಿ ಸಂಭ್ರಮಾಚರಣೆ ಹೆಸರಿನಲ್ಲಿ ಗಲಾಟೆ ಸೃಷ್ಟಿಸಿದರು. ಜೋರಾಗಿ ಹಾಡು ಹಾಕಿಕೊಂಡ ಅವರು ಆಸ್ಪತ್ರೆಯಲ್ಲಿ ರೋಗಿಗಳಿದ್ದಾರೆ ಎನ್ನುವುದನ್ನೂ ಮರೆತು ಕುಣಿದು ಕುಪ್ಪಳಿಸಿದರು. ಇದಕ್ಕೆ ರೋಗಿಗಳ ಸಂಬಂಧಿಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಆ ರೀಲ್ಸ್​ ಅನ್ನು ಅಪ್​ಲೋಡ್ ಮಾಡಿದ ನಂತರ ಭಾರೀ ವಿರೋಧ ವ್ಯಕ್ತವಾಗಿದೆ. ರೋಗಿಗಳ ಆರೋಗ್ಯವನ್ನೂ ಲೆಕ್ಕಿಸದೆ ಮೋಜು-ಮಸ್ತಿ ಮಾಡುತ್ತಿರುವ ನರ್ಸ್​ಗಳ ಬಗ್ಗೆ ಟೀಕೆ ವ್ಯಕ್ತವಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ