ಇದು ಕೇವಲ ಚುನಾವಣೆ ಬಹಿಷ್ಕಾರವಲ್ಲ. ಕಾಫಿನಾಡಿನಲ್ಲಿ ನಡೀತಿರೋದು ಅಕ್ಷರಶಃ ಚಳವಳಿ. ಯಾಕಂದ್ರೆ ಚುನಾವಣೆ ಸಮಯದಲ್ಲಿ ಸರ್ಕಾರವನ್ನ ಎಚ್ಚರಿಸಲು, ಜನಪ್ರತಿನಿಧಿಗಳಿಗೆ ಬಿಸಿ ಮುಟ್ಟಿಸಲು ಇರೋ ಅಸ್ತ್ರ ಚುನಾವಣೆ ಬಹಿಷ್ಕಾರ. ಆದ್ರೆ ಬಹುತೇಕ ಸಂದರ್ಭದಲ್ಲಿ ಅಧಿಕಾರಿಗಳ, ಜನಪ್ರತಿನಿಧಿಗಳ ಬಣ್ಣದ ಮಾತಿನಿಂದ ಮನವೊಲಿಕೆಯಾಗಿ, ಸಂಧಾನ ಏರ್ಪಟ್ಟು ಚುನಾವಣೆ ಸುಸೂತ್ರವಾಗಿ ನಡೆಯತ್ತೆ. ಯಾಕಂದ್ರೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿರುತ್ತಾರೆ. ಜನ ಮತ್ತದೇ ಭರವಸೆಯನ್ನ ಸತ್ಯ ಅಂತಾ ನಂಬಿ ಮೋಸ ಹೋಗ್ತಾರೆ. ಆದ್ರೆ ಈ ಬಾರಿ ಹಾಗೆ ಆಗೋಕೆ ಚಾನ್ಸೇ ಇಲ್ಲ. ಯಾಕಂದ್ರೆ ಕಾಫಿನಾಡಲ್ಲಿ ಅಭ್ಯರ್ಥಿಗಳೇ ನಾಮಪತ್ರ ಸಲ್ಲಿಸಲು ಮುಂದೆ ಬರ್ತಿಲ್ಲ.